Awardee Honour: ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಅವರಿಗೆ ಸನ್ಮಾನ

ವಿಜಯಪುರ: ಉತ್ತರ ಕರ್ನಾಟಕದ(North Karnataka) ಸಾಧಕರ(Achievers) ಪ್ರಶಸ್ತಿ ಪುರಸ್ಕೃತ(Awardee) ವಿಜಯಪುರ ನಗರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ(Shivaji Gayakawad) ಅವರಿನ್ನು ಸಂಸ್ಥೆಯ ರವೀಂದ್ರನಾಥ ಠಾಗೋರ ಶಾಲೆ(Ravindranath Thagore School),  ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸನ್ಮಾನಿಸಿದರು. 

ವಿಜಯ ಕರ್ನಾಟಕ ದಿನಪತ್ರಿಕೆ ಇತ್ತೀಚೆಗೆ ಶಿವಾಜಿ ಗಾಯಕವಾಡ ಅವರನ್ನು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಉತ್ತರ ಕರ್ನಾಟಕದ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.  ಈ ಹಿನ್ನೆಲೆಯಲ್ಲಿ ಶಿಕ್ಷಕರಾದ ವಿದ್ಯಾಧರ ಪಾಟೀಲ, ಶಿವರಾಮ, ಗಜಾನನ, ಪ್ರಹ್ಲಾದ ಹೂಗಾರ, ಸಿದ್ರಾಮ ಯಲಗೊಂಡ, ಗಜಾನನ ಕಾಳೆ ಸೇರಿದಂತೆ ಶಾಹು ಮಹಾರಾಜ ಕೊ ಆಪ್ ಸೊಸೈಟಿಯ ಮ್ಯಾನೇಜರ್ ಸುಭಾಸ ನಂದಿಹಾಳ ಸನ್ಮಾನಿಸಿದರು.

ಶಿವಾಜಿ ಗಾಯಕವಾಡ ಅವರನ್ನು ಸನ್ಮಾನಿಸಲಾಯಿತು

 

 

ಕಾರ್ಯಕ್ರಮದಲ್ಲಿ ಮಾತನಾಡಿದ ಸುಶೀಲಾ ಕುಲಕರ್ಣಿ, ಶಿಕ್ಷಣ ಸಂಸ್ಥೆ ನಡೆದು ಬಂದ ಕಷ್ಟದ ಹಾದಿಯನ್ನು ಸ್ಮರಿಸಿದರು.  ಈ ಸಂದರ್ಭದಲ್ಲಿ ಹಲವು ಶಿಕ್ಷಕರು ಸಂಸ್ಥೆಯ ಕುರಿತು ಮೆಚ್ಚುಗೆ ಮಾತನ್ನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾಜಿ ಗಾಯಕವಾಡ, ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ನಿರಂತರ ಪ್ರಯತ್ನ ಬಹಳ ಮುಖ್ಯ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ಹಲವು ಸಂಸ್ಥೆಗಳ ಪೈಕಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿರುವ ಉನ್ನತ ಶಿಕ್ಷಣ ಕೇಂದ್ರವಾಗಿದೆ.  2019 ರಿಂದ ಕರ್ನಾಟಕದಲ್ಲಿ ನೂರಾರು ಶಾಲಾ ಕಾಲೇಜುಗಳು ಸ್ಥಾಪನೆಯಾಗಿವೆ.  ನಮ್ಮ ಸಂಸ್ಥೆ ಹಲವು ಗಂಭೀರ ಸವಾಲುಗಳನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದು ತಮ್ಮ ಯಶೋಗಾಥೆ ವಿವರಿಸಿದರು. ಶಾಲೆ ಕಾಲೇಜು ಮೆಟ್ಟಿಲು ಏರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಉಜ್ವಲವಾಗಬೇಕು.  ಪೋಷಕರು ಯಾವುದೇ ಗೊಂದಲ, ಗಾಬರಿಗೆ ಸಿಲುಕಬಾರದು ಎಂದು ಕಿವಿಮಾತು ಶಿವಾಜಿ ಗಾಯಕವಾಡ ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಸಂತ ಗಾಯಕವಾಡ, ಪ್ರಾಚಾರ್ಯ ಜಯರಾಮ ಹಾಗೂ ಆಡಳಿತಾಧಿಕಾರಿ ರೀತಾ ಗಾಯಕವಾಡ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌