ವಿಜಯಪುರ: ಈ ಬಾರಿ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆ ಫಲಿತಾಂಶ(Exam Result) ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ(Vijayapura District) ಜನರಿಗೆ ಹೆಮ್ಮೆ ತಂದಿದೆ. ಈ ಸಲ ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್(Topper) ಆಗಿದ್ದಾರೆ. ಇವರಲ್ಲಿ ಓರ್ವ ವಿದ್ಯಾರ್ಥಿ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದರೆ, ಉಳಿದ ಆರು ಜನರಲ್ಲಿ ಒಂದೇ ಸರಕಾರಿ ವಸತಿ ಶಾಲೆ ಇಬ್ಬರು, ಮೂವರು ವಿದ್ಯಾರ್ಥಿಗಳು ಖಾಸಗಿ ಹಾಗೂ ಓರ್ವ ವಿದ್ಯಾರ್ಥಿನಿ ಸರಕಾರಿ ಬಾಲಕಿಯರ ವಸತಿ ಶಾಲೆಯಲ್ಲಿ ಓದಿ ಶೇ. 100 ಅಂಕ ಪಡೆದಿದ್ದಾರೆ.
ಈ ಮಧ್ಯೆ, ವಿಜಯಪುರ ನಗರದ ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ ಅವರ ಪುತ್ರಿ ಮಾನಸಿ ನಾಯ್ಕೋಡಿ ಶೇ. 97.12 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ. ಇವರ ಅಜ್ಜ ಕಾಮಣ್ಣ ನಾಯ್ಕೋಡಿ ಪೊಲೀಸ್ ಇಲಾಖೆಯಲ್ಲಿ ಹವಾಲ್ದಾರ ಆಗಿ ನಿವೃತ್ತಿಯಾಗಿದ್ದಾರೆ. ಮಾನಸಿ ನಾಯ್ಕೋಡಿ ತಂದೆ ರವೀಂದ್ರ ನಾಯ್ಕೋಡಿ ಪೊಲೀಸ್ ಇಲಾಖೆಗೆ ಸೇರುವ ಮುಂಚೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆ ಸೇರಿದ ಮೇಲೆ ಅತ್ಯುತ್ತಮ ಸೇವೆ ಸಲ್ಲಿಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪೊಲೀಸ್ ಪದಕ ಪಡೆದು ಗಮನ ಸೆಳೆದಿದ್ದಾರೆ.
ಇವರ ಅಜ್ಜಿ ಬರಡೋಲ ಜಿ. ಪಂ. ಮಾಜಿ ಸದಸ್ಯರಾಗಿದ್ದರೆ, ಇವರ ತಾಯಿ ರೂಪಾ ರವೀಂದ್ರ ನಾಯ್ಕೋಡಿ ಇಂಡಿ. ತಾ. ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಮತ್ತು ಪೊಲೀಸ್ ಇಲಾಖೆ ಸಂಬಂಧ ಹೊಂದಿರುವ ಕುಟುಂಬದ ಕುಡಿ ಈಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಈ ಕುಟುಂಬದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಈಗ ಇವರ ಪುತ್ರಿ ಮಾನಸಿ ರವೀಂದ್ರ ನಾಯ್ಕೋಡಿ ಪ್ರಥಮ ಭಾಷೆ ಇಂಗ್ಲಿಶನ್ ನಲ್ಲಿ 121, ಕನ್ನಡದಲ್ಲಿ 100, ಹಿಂದಿಯಲ್ಲಿ 100, ಗಣಿತ 98, ವಿಜ್ಞಾನ 90 ಮತ್ತು ಸಮಾಜ ವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾಳೆ. ಭವಿಷ್ಯದಲ್ಲಿ ಉನ್ನತ ಶಿಕ್ಷಣ ಪಡೆದು ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ಪಾಸಾಗುವ ಕನಸು ಹೊಂದಿರುವ ಈ ವಿದ್ಯಾರ್ಥಿನಿಯ ಕನಸುಗಳು ನನಸಾಗಲಿ ಎಂದು ಬಸವ ನಾಡು ಹಾರೈಸುತ್ತದೆ.