Agri Fest: ರೈತರಿಗೆ ನೀರು, ವಿದ್ಯುತ್ ನೀಡಿದರೆ ದೇಶದ ಶ್ರೀಮಂತರ ಪಟ್ಟಿಗೆ ಸೇರುತ್ತಾರೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ರೈತರಿಗೆ(Farmers) ನೀರು(Water) ಮತ್ತು ವಿದ್ಯುತ್(Electricity) ನೀಡಿದರೆ(Provided) ರೈತರಷ್ಟೇ ಅಲ್ಲ ದೇಶವು ವಿಶ್ವದಲ್ಲಿ ಶ್ರೀಮಂತವಾಗಲು(Rich) ಸಾಧ್ಯ ಎಂದು ವಿಜಯಪುರ-ಬಾಗಲಕೋಟ ಸ್ಥಳೀಯ ಸಂಸ್ಥೆ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ನಗರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ಎ.ಎಸ್.ಪಿ ವಾಣಿಜ್ಯ ಮಹಾವಿದ್ಯಾಲಯದ ಎಂ. ಬಿ. ಎ ವಿಭಾಗ ಆಯೋಜಿಸಿರುವ ಐದು ದಿನಗಳ ಕೃಷಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ದೇಶದ ಬೆನ್ನೆಲುಬು. ಅನ್ನದಾತರಿಗೆ ನೀರು ಮತ್ತು ವಿದ್ಯುತ್ ನೀಡಿದರೆ ರಾಷ್ಟ್ರದ ಶ್ರೀಮಂತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕೂಡ ರೈತರಿಗೆ ನೀರು ಕೊಟ್ಟರೆ ಬಂಗಾರ ಬೆಳೆಯುತ್ತಾರೆ ಎಂದು ಹೇಳುತ್ತಾರೆ. ನನ್ನ ಸಹೋದರ ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ರೈತರಿಗೆ ನೀರು ಕೊಡುವ ಕೆಲಸ ಮಾಡಿದ್ದಾರೆ. ಈ ಮೂಲಕ ಸಿದ್ದೇಶ್ವರ ಶ್ರೀಗಳ ಆಶಯಗಳಿಗೆ ಸ್ಪಂದಿಸಿದ್ದಾರೆ. ಎಂ. ಬಿ. ಎ ವಿದ್ಯಾರ್ಥಿಗಳು ರೈತರ ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಬೆಳೆದ ಬೆಳೆಗೆ ತಕ್ಕಂತೆ ಬೆಲೆ ದೊರಕಿಸಬೇಕು ಎಂದರು.

ಕೃಷಿ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಎಸ್. ಬಿ. ಕಲಘಟಗಿ ಮಾತನಾಡಿ, ಎಂ. ಬಿ. ಪಾಟೀಲ ಪ್ರಯತ್ನದ ಫಲವಾಗಿ ವಿಜಯಪುರ ಜಿಲ್ಲೆ ನೀರಾವರಿಗೆ ಒಳಪಟ್ಟಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳನ್ನು ಕೃಷಿ ಮಾಡಲು ಸಾಧ್ಯವಾಗುತ್ತದೆ. ಕಾಲುವೆಗಳ ಮೂಲಕ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿದರೆ ರೈತರ ಬಾಳು ಹಸನಾಗಲಿದೆ. ಬೇರೆ ಅನಕೂಲಗಳಿಗಿಂತ ರೈತರಿಗೆ ನೀರು ಕೊಡುವುದು ಮುಖ್ಯ ಎಂದರು.

ಬಿ. ಎಲ್. ಡಿ. ಇ ಸಂಸ್ಥೆ ನಿರ್ದೇಶಕ ಸಂಗು ಸಜ್ಜನ ಮಾತನಾಡಿ, ರೈತರು ಬೆಳೆಯುವ ಬೆಳೆಗಳನ್ನು ಖರೀದಿಸುವ ನಾನಾ ಕಂಪನಿಗಳು ಆಹಾರ ಧಾನ್ಯಗಳನ್ನು ಪಾಲಿಶ್ ಮಾಡುತ್ತಾರೆ. ನಂತರ ಉಳಿಯುವ ಧಾನ್ಯಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಆದರೆ ಈ ಆಹಾರ ಧಾನ್ಯಗಳಲ್ಲಿ ಸೂಕ್ತ ಪೆÇೀಷಕಾಂಶಗಳು ಇರುವುದಿಲ್ಲ. ಕಂಪನಿಗಳು ಪಾಲಿಶ್ ಮಾಡಿದ ನಂತರ ಸಂಗ್ರಹಿಸುವ ಆಹಾರ ಧಾನ್ಯಗಳ ಮೇಲ್ಪದರನ್ನು ಸಂಸ್ಕರಿಸಿ ಪ್ರೊಟೀನ್ ಮತ್ತು ವಿಟಮಿನ್ ಔಷಧಗಳ ರೂಪದಲ್ಲಿ ಮಾರಾಟ ಮಾಡುವ ಮೂಲಕ ರೈತರಿಗಿಂತ ಹೆಚ್ಚಿನ ಲಾಭ ಪಡೆಯುತ್ತಾರೆ ಎಂದು ಹೇಳಿದರು.

ಮುಖ್ಯ ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕರ್ಣಿ ಮಾತನಾಡಿ, ರೈತರ ನೆರವಿಗೆ ಬಿ.ಎಲ್.ಡಿ.ಇ ಸಂಸ್ಥೆ ಸದಾ ಬದ್ಧವಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯ ಎಸ್. ಜಿ. ರೂಢಗಿ, ಡಾ.ಸಿ. ಜಿ. ಬ್ಯಾಹೆಟಿ, ಪ್ರೊ. ಸಂತೋಷ ಬಿರಾದಾರ ವೇದಿಕೆಯಲ್ಲಿದ್ದರು. ಸುಭಾಸ ಕನ್ನೂರ ಮತ್ತು ಐಶ್ವರ್ಯಾ ಯರನಾಳ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌