SSLC Rank: ರಾಜ್ಯಕ್ಕೆ 2 ಮತ್ತು 5ನೇ ಸ್ಥಾನ ಪಡೆದ ಎಸ್ ಎಸ್ ಬ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಗೌರವಿಸಿದ ಎಂ. ಬಿ. ಪಾಟೀಲ

ವಿಜಯಪುರ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ(SSLC Exam) ರಾಜ್ಯ ದ್ವಿತೀಯ ಮತ್ತು ಐದನೇ(Second And Fifth Rank To State) ಸ್ಥಾನ ಪಡೆದು ಉತ್ತಮ ಸಾಧನೆ ತೋರಿದ ಬಿ.ಎಲ್.ಡಿ.ಇ(BLDE) ಸಂಸ್ಥೆಯ ವಿಜಯಪುರ ನಗರದ ಎಸ್. ಎಸ್. ಮಾಧ್ಯಮಿಕ ಬ ಶಾಲೆಯ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಸನ್ಮಾನಿಸಿದರು.

ವಿದ್ಯಾರ್ಥಿ ಅಭಿಲಾಷ ರಾಜಶೇಖರ ವಾಜಂತ್ರಿ 625ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಮತ್ತು ಪಲ್ಲವಿ ಉಮೇಶ ರಾಠೋಡ 625ಕ್ಕೆ 618 ಅಂಕ ಗಳಿಸಿ ರಾಜ್ಯಕ್ಕೆ 5 ನೇ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಸಿಹಿ ತಿನ್ನಿಸಿ ಶುಭ ಕೋರಿದ ಎಂ.ಬಿ.ಪಾಟೀಲರು ಭವಿಷ್ಯ ಉಜ್ವಲವಾಗಿರಲಿ. ಕಂಡ ಕನಸುಗಳನ್ನು ನನಸು ಮಾಡಲು ಶ್ರಮಪಟ್ಟು ವಿದ್ಯಾಭ್ಯಾಸ ಮುಂದುವರೆಸುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ, ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ, ಮುಖ್ಯೋಪಾಧ್ಯಾಯ ಪಿ. ಎಸ್. ನಾಯಕ ಉಪಸ್ಥಿತರಿದ್ದರು.

ಅಭಿಲಾಷ ವಾಜಂತ್ರಿ ತಂದೆ ರಾಜಶೇಖರ ಚಿಕ್ಕೊಡಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ  ಸಂಸ್ಥೆಯಲ್ಲಿ ಡಿ.ಟಿ.ಓ ಆಗಿ ಸೇವೆ ಸಲ್ಲಿಸುತ್ತಿದ್ದರೆ ಇವರ ತಾಯಿ ಕವಿತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಪಿಯುಸಿಯಲ್ಲಿ ಸೈನ್ಸ್ ಓದಿ, ದೆಹಲಿಯ ಏಮ್ಸ್‍ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುವ ಕನಸು ಹೊಂದಿರುವುದಾಗಿ ವಿದ್ಯಾರ್ಥಿ ಅಭಿಲಾಷ ವಾಜಂತ್ರಿ ತಿಳಿಸಿದ್ದಾರೆ.

ಶಿವಣಗಿ ಗ್ರಾಮದ ಬಡಕುಟುಂಬದ ಪಲ್ಲವಿ ರಾಠೋಡ ತಂದೆ ಉಮೇಶ ಖಾಸಗಿ ಶಾಲೆಯಲ್ಲಿ ಸಿಪಾಯಿ ಆಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ಸುಶೀಲಾ ಮನೆಗೆಲಸ ಮಾಡುತ್ತಿದ್ದಾರೆ. 5 ಜನ ಮಕ್ಕಳಲ್ಲಿ ಹಿರಿಯಳಾಗಿರುವ ಪಲ್ಲವಿ ರಾಠೋಡ ಕೂಡ ಪಿಯುಸಿಯಲ್ಲಿ ಸೈನ್ಸ್ ಓದಿ, ವೈದ್ಯಕೀಯ ಶಿಕ್ಷಣ ಮಾಡುವ ಕನಸು ಹೊಂದಿರುವುದಾಗಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌