SSLC Result: ರಾಜ್ಯಕ್ಕೆ 5 ನೇ ಸ್ಥಾನ ಪಡೆದ ವಿದ್ಯಾರ್ಥಿಗೆ ರವೀಂದ್ರನಾಥ ಠಾಗೋರ ಶಾಲೆಯಲ್ಲಿ ಸನ್ಮಾನ

ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ(Exam) ರಾಜ್ಯಕ್ಕೆ 5ನೇ ಸ್ಥಾನ(State Fifth Rank) ಪಡೆದ ವಿದ್ಯಾರ್ಥಿ ಪ್ರತೀಕ ರಾಠೋಡ(Prateek Rathod) ಗೆ ವಿಜಯಪುರ ನಗರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯೂಕೇಶನ್ ಸೊಸೈಟಿಯ ರವೀಂದ್ರನಾಛ ಠಾಗೋರ ಶಾಲೆಯಲ್ಲಿ(Ravindranath Tagore School) ಸನ್ಮಾನಿಸಲಾಯಿತು.

ಪರಿಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ಸಿಹಿ ತಿನ್ನಿಸಿದ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು

ಈ ಶಾಲೆಯಲ್ಲಿ ಪರೀಕ್ಷೆ ಬರೆದ ಎಲ್ಲ 116 ವಿದ್ಯಾರ್ಥಿಗಳು ನಾನಾ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶೇ. 100ರಷ್ಟು ಫಲಿತಾಂಶ ಬಂದಿದೆ.  ಈ ಹಿನ್ನೆಲೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ತಿಲಕ ಇಟ್ಟು ಸಿಹಿ ತಿನ್ನಿಸಿ ಅಭಿನಂಧಿಸಿದರು.

625ಕ್ಕೆ 620 ಅಂಕ ಪಡೆದು ರಾಜ್ಯಕ್ಕೆ ಐದನೇ ಸ್ಥಾನ ಪಡೆದಿರುವ ಪ್ರತೀಕ ರಾಠೋಡ ಗಮನ ಸೆಳೆದಿದ್ದು, ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.  ಅಲ್ಲದೇ, ಉತ್ತಮ ಅಂಕ ಗಳಿಸಿದ ಪ್ರಥಮ ಅವಟಿ, ಲಕ್ಷ್ಮಿ ಸಾವಂತ, ಸ್ವಾತಿ ವಠಾರ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಶಾಲೆಯಲ್ಲಿ 58 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 45 ವಿದ್ಯಾರ್ಥಿಗಳು ಪ್ರಥಮ ಹಾಗೂ 13 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್ ಶಿವಾಜಿ ಗಾಯಕವಾಡ ಹಾಗೂ ಆಡಳಿತಾಧಿಕಾರಿ ರೀತಾ ಗಾಯಕ ವಾಡ ಅಭಿನಂದಿಸಿದರು.  ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಪಲ್ಲವಿ ಆಲೂರ, ಸಂಸ್ಛೆಯ  ಸಂಸ್ಥಾಪಕ ಚೇರಮನ್ ವಸಂತ ಗಾಯಕವಾಡ, ಪ್ರಿನ್ಸಿಪಲ್ ಜಯರಾಮ, ಆಡಳಿತ ಕಚೇರಿ ವಿದ್ಯಾಧರ ಪಾಟೀಲ, ರಾಜು ಪವಾರ, ಶಿಕ್ಷಕಿ ಪಲ್ಲವಿ ಆಲೂರ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಅಭಿನಂಧಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಹಕಾರ, ಪ್ರೋತ್ಸಾಹವನ್ನು ನೆನೆದು ಕೃತಜ್ಞತೆ ಸಲ್ಲಿಸಿದರು.

Leave a Reply

ಹೊಸ ಪೋಸ್ಟ್‌