Orphans Help: ತಂದೆ-ತಾಯಿ, ತಂದೆ ಇಲ್ಲದ ಮಕ್ಕಳಿಗೆ ಪಿಯುಸಿ ಪ್ರವೇಶಕ್ಕೆ ನೆರವಿಗೆ ಮುಂದಾದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್

ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆ(Exam) ಫಲಿತಾಂಶ ಪ್ರಕಟವಾಗಿದ್ದು(Result Announces), ಈ ಪರೀಕ್ಷೆಯಲ್ಲಿ ಪಾಸಾದ ಮತ್ತು ತಂದೆ-ತಾಯಿ ಇಲ್ಲದ ಮತ್ತು ತಂದೆ ಇಲ್ಲದ(Orphan) ವಿದ್ಯಾರ್ಥಿಗಳಿಗೆ(Students) ವಿಜಯಪುರದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಮುಂದಾಗಿದೆ. 

ಈ ಕುರಿತು ಪ್ರಕಟಣೆ ನೀಡಿರುವ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಂದೆ- ತಾಯಿ ಇಲ್ಲದ ಮಕ್ಕಳಿಗಾಗಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ತನ್ನದೇ ಆದ ಅಳಿಲು ಸೇವೆ ಮಾಡುತ್ತಿದೆ. ಈಗ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ.  ಅನೇಕ ವಿದ್ಯಾರ್ಥಿಗಳು ಪಿಯುಸಿ.ಪ್ರಥಮ ವರ್ಷದ ಪ್ರವೇಶಕ್ಕೆ ಪರದಾಡುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳು ತಂದೆ- ತಾಯಿ ಇಲ್ಲದ ಮಕ್ಕಳು ತಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ.  ಅವರಿಗೆ ಕೈಲಾದ ಅಳಿಲು ಸೇವೆ ಮಾಡುತ್ತಲೇ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಬಬಲೇಶ್ವರ

ನಾನು ನಿಮ್ಮಂತೆ ಬಾಲ್ಯದಲ್ಲಿಯೇ ತಂದೆ- ತಾಯಿಯನ್ನು ಕಳೆದುಕೊಂಡು ಬದುಕು ಕಟ್ಟಿಕೊಂಡಿದ್ದೇನೆ.  ನಾನು ತಮಗೆ ಯಾವ ರೀತಿಯಿಂದ ನೆರವಾಗಲು ಸಾಧ್ಯವೋ ಅಷ್ಟನ್ನು ಮಾಡಲು ನಿರ್ಧರಿಸಿದ್ದೇನೆ.  ನನ್ನ ಸಂಚಾರಿ ದೂರವಾಣಿ ಸಂಖ್ಯೆ- 9740081300(ಕೇವಲ ವಾಟ್ಸಾಪ್ ಮಾಡಬೇಕು) ಈ ಸಂಖ್ಯೆಗೆ ತಂದೆ- ತಾಯಿಯ ಮರಣ ಪ್ರಮಾಣ ಪತ್ರ, ತಾವು ಓದಿದ ಶಾಲೆಯ ಮುಖ್ಯೋಪಾಧ್ಯಾಯರ ಹೆಸರು ಮತ್ತು ದೂರವಾಣಿ ಸಂಖ್ಯೆ ಹಾಗೂ ತಮ್ಮ ಅಂಕಪಟ್ಟಿಯನ್ನು ವ್ಯಾಟ್ಸಪ್ ಮೂಲಕ ನನಗೆ ಕಳುಹಿಸಿ ಕೊಡಬೇಕು. ನಮಗೆ ತಲುಪುವ ಕೋರಿಕೆಗಳಿಗೆ ನಮ್ಮ ಕಾರ್ಯಾಲಯದ ಸಿಬ್ಬಂದಿ ತಮ್ಮನ್ನು  ಸಂಪರ್ಕಿಸುತ್ತಾರೆ.  ಆದ್ಯತೆಯ ಮೇರೆಗೆ ಕೈಲಾದ ಅಳಿಲು ಸೇವೆ ಮಾಡಲು ಟ್ರಸ್ಟ್ ಸದಾ ಬದ್ಧವಾಗಿದೆ.  ತಂದೆ ಅಥವಾ ತಾಯಿಯನ್ನು ಅಥವಾ ತಂದೆ- ತಾಯಿ ಇಬ್ಬರನ್ನು ಕಳೆದುಕೊಂಡ ಮಾತ್ರಕ್ಕೆ ನಾವು ಅನಾಥರಲ್ಲ.  ನಾವು ಎಂದು ನಮ್ಮ ಮೇಲಿನ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತೇವೋ ಅಂದು ನಾವು ಅನಾಥರಾಗುತ್ತೇವೆ.  ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.   ಟ್ರಸ್ಟ್ ತಮ್ಮ ನೆರವಿಗೆ ಇರುತ್ತದೆ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌