Rain DC Visit: ಮಳೆಯಿಂದ ಹಾನಿಗೀಡಾದ ತೋಟಗಾರಿಕೆ ಪ್ರದೇಶಕ್ಕೆ ಡಿಸಿ ಡಾ. ವಿಜಯ ಮಹಾಂತೇಶ ಭೇಟಿ; ಪರಿಶೀಲನೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ(Rain) ತೋಟಗಾರಿಕೆ ಬೆಳೆಗಳು(Horticulture Crop) ಹಾನಿಯಾದ ನಾನಾ ಸ್ಥಳಗಳಿಗೆ(Loss Places) ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ(DC Dr Vijayamahantesh B Danammanavar) ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮಳೆಯಿಂದ ಬೆಳೆಹಾನಿಯಾದ ಸ್ಥಳಗಳಿಗೆ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಭೇಟಿ ನೀಡಿದರು

 

ಮೊದಲಿಗೆ ಕೋಲಾರ ತಾಲೂಕಿನ ಕೂಡಗಿಯ ಗ್ರಾಮದಲ್ಲಿ ಈರುಳ್ಳಿ ಮತ್ತು ವಿಳ್ಯದೆಲೆ ಹಾಳಾದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈತರಾದ ದಸ್ತಗೀರ್ ಮೋಮಿನಸಾಬ, ಗುರುಬಾಯಿ ಗೋಪಾಲ ರಾಠೋಡ್ ಮತ್ತು ಮಹೆಬೂಬಸಾಬ ತಾಳಿಕೋಟೆ ಜಮೀನುಗಳಲ್ಲಿ ಉಂಟಾಗಿರುವ ಬೆಳೆಹಾನಿ ವೀಕ್ಷಿ,ಸಿದರು.

 

ನಂತರ ನಿಡಗುಂದಿ ಪಟ್ಟಣಕ್ಕೆ ಭೇಟಿ ನೀಡಿ ರೈತ ಗೌತಮ ಬಸವರಾಜ ಕಲ್ಯಾಣಶೆಟ್ಟಿ, ಮಳೆಯಿಂದಾಗಿ ಟೊಮೆಟೋ ಮತ್ತು ಕಲ್ಲಗಂಡಿ ಬೆಳೆಹಾನಿಯನ್ನು ಪರಿಶೀಲನೆ ನಡೆಸಿದರು.  ಈ ಸಂದರ್ಭದಲ್ಲಿ ಕೋಲಾರ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಭೀಮಪ್ಪ ನಂದ್ಯಾಳ ಅವರು ತೋಟಗಾರಿಕೆ ಬೆಳೆಹಾನಿಯಾದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಒಟ್ಟು 44.90 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.  ಇದರಲ್ಲಿ 23.60 ಹೆಕ್ಟೇರನಲ್ಲಿ ಬೆಳೆಯಲಾದ ಈರಳ್ಳಿ, 15 ಹೆಕ್ಟೇರ್‌ನಲ್ಲಿ ವೀಳ್ಯದೆಲೆ, 6.50 ಹೆಕ್ಟೇರನಲ್ಲಿ ಬಾಳೆ ಬೆಳೆಗಳು ಹಾನಿಯಾಗಿದೆ.  ಈ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದ್ದು, ಕೂಡಲೇ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಎಚ್. ಡಿ. ಆನಂದ ಕುಮಾರ, ಕೋಲ್ಹಾರ ತಹಸೀಲ್ದಾರ ಎಸ್. ಡಿ. ಮುರಾಳ, ನಿಡಗುಂದಿ ತಹಸೀಲ್ದಾರ ಎಸ್. ಬಿ. ಕೂಡಲಗಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌