ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ(Exam) ಅದ್ವೀತಿಯ ಸಾಧನೆ(Good Performance) ಮಾಡಿದ ಏಳು ವಿದ್ಯಾರ್ಥಿಗಳನ್ನು(Seven) ಜಲಸಂಪನ್ನೂಲ ಸಚಿವ ಗೋವಿಂದ ಕಾರಜೋಳ(Irrigation Minister Govind Karjol) ವಿಜಯಪುರದಲ್ಲಿ ಸನ್ಮಾನಿಸಿದರು.
625ಕ್ಕೆ 625 ಅಂಕ ಪಡೆದ ಎಲ್ಲ ಏಳು ಜನ ವಿದ್ಯಾರ್ಥಿಗಳನ್ನು ತಮ್ಮ ನಿವಾಸಕ್ಕೆ ಬರ ಮಾಡಿಕೊಂಡ ಸಚಿವ ಗೋವಿಂದ ಕಾರಜೋಳ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಮೈಸೂರ ಪೇಟ ತೊಡಿಸಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಚಿವರು, ವಿಜಯಪುರ ಜಿಲ್ಲೆ ಪ್ರತಿಭಾನ್ವಿತರ ತವರೂರು. ಈ ಜಿಲ್ಲೆಗೆ ಇನ್ನಷ್ಟು ಮೆರಗು ಎನ್ನುವಂತೆ ಏಳು ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಟಾಪರ್ ಆಗಿ ಹೊರ ಹೊಮ್ಮುವ ಮೂಲಕ ಈ ಸಾಧನೆಯ ಪರಂಪರೆ ನಿರಂತರವಾಗಿ ಸಾಗುವಂತೆ ಮಾಡಿದ್ದಾರೆ. ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸುವುದು ಉದಯೋನ್ಮುಖ ಸಾಧಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗುತ್ತದೆ ಎಂದು ಹೇಳಿದರು.
ನನ್ನ ತವರು ಗ್ರಾಮ ಕಾರಜೋಳ ಕಿತ್ತೂರ ರಾಣಿ ಚೆನ್ಮಮ್ಮ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯದಲ್ಲಿಯೇ ಅಗ್ರಸ್ಥಾನ ಗಳಿಸಿರುವುದು ವೈಯುಕ್ತಿಕವಾಗಿ ನನಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ತಂದಿದೆ. ಈ ಎಲ್ಲ ವಿದ್ಯಾರ್ಥಿಗಳು ಇನ್ನೂ ಸಾಧನೆಯ ಪರ್ವತ ಏರಲಿ ಎಂದು ಜಲಸಂಪನ್ಮ ಸಚಿವ ಗೋವಿಂದ ಕಾರಜೋಳ ಶುಭಹಾರೈಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಸಾಧನೆ ತೋರಿದ ಅಮೀತ ಮಾದರ, ಐಶ್ವರ್ಯ ಲಕ್ಷ್ಮಣ ಕನಸೆ, ಸ್ವಾತಿ ಗೌಡಪ್ಪ ಮಾಳೇದ, ಪಲ್ಲವಿ ಚಂದ್ರಶೇಖರ ಬಾಗೇವಾಡಿ, ಕೀರ್ತನಾ ಅರಳದಿನ್ನಿ, ಅರ್ಪಿತಾ ಮನೋಹರ ಕಟ್ಟಿಮನಿ, ಶ್ರೀದೇವಿ ಹಣುಮಂತ ಹನುಮಕಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಶಿವಯೋಗೆಪ್ಪ ನೇದಲಗಿ, ಬಿಜೆಪಿ ಹಿರಿಯ ಮುಖಂಡ ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ, ಶೀಲವಂತ ಉಮರಾಣಿ ಮುಂತಾದವರು ಉಪಸ್ಥಿತರಿದ್ದರು.