MLC Election: ಹಣ ಪಡೆದು ಬಿತ್ತರಿಸುವ ಸುದ್ದಿಗಳ‌ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಡಿಸಿ ಸೂಚನೆ

ವಿಜಯಪುರ: ಹಣ ಪಡೆದು ಬಿತ್ತರಿಸುವ ಸುದ್ದಿಗಳ‌(Paid News) ಮೇಲೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ(MCMC) ಚುನಾವಣೆ ಆಯೋಗದ(Election Commission) ಮಾರ್ಗಸೂಚಿ ಅನುಸಾರ(Guidelines) ನಿಗಾವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ(DC Dr Vijayamahantesh B Danammanavar) ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಂಬಂಧ ರಚಿಸಿದ ನಾನಾ ಸಮಿತಿಗಳ ಅಧ್ಯಕ್ಷರು, ಸದಸ್ಯರು ಮತ್ತು ನೋಡಲ್ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಎಂ ಎಲ್ ಸಿ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಡಿಸಿ ನೇತೃತ್ವದಲ್ಲಿ ನಾನಾ ಸಮಿತಿಗಳ ಸಭೆ ನಡೆಯಿತು

 

ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ, ಜಾಹೀರಾತು, ಅಭ್ಯರ್ಥಿಯ ಪರ ಮನವಿ, ಅಭ್ಯರ್ಥಿಗಳಿಗೆ ಸಂಬಂಧಿತ ಜಾಹೀರಾತುಗಳ ಬಗ್ಗೆ, ಶಂಕಿತ ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಹಾಗೂ ಸೋಷಿಯಲ್ ಮೀಡಿಯಾದ ಮೇಲೆ ಎಂಸಿಎಂಸಿ ಸೇರಿದಂತೆ ಜಿಲ್ಲಾ ಮೀಡಿಯಾ ಮಾನಿಟರಿಂಗ್ ಸೆಲ್ ಮತ್ತು ಮೀಡಿಯಾ ಸರ್ಟಿಪಿಕೇಶನ್ ಸೆಲ್ ನಲ್ಲಿರುವ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸೂಚಿಸಿದರು.

ಮಾಧ್ಯಮದಲ್ಲಿನ ರಾಜಕೀಯ ಜಾಹೀರಾತುಗಳ‌‌ ಮೇಲೆ ಕೂಡ ನಿಗಾ ಇಡಬೇಕು. ಜಹೀರಾತು, ಪ್ರಸಾರ ಪೂರ್ವ ಎಂಸಿಎಂಸಿಯಿಂದ ಪ್ರಮಾಣೀಕರಣ ಮಾಡಿರುವ ಕುರಿತು ಪರೀಶೀಲಿಸಬೇಕು. ಅಭ್ಯರ್ತಿಯ ಒಪ್ಪಿಗೆಯೊಂದಿಗೆ ಜಾಹೀರಾತು ಬಿತ್ತರಿಸಲ್ಪಡುತ್ತಿದೆಯೇ ಎಂಬುದರ ಬಗ್ಗೆ ಕೂಡ ಗಮನಿಸಬೇಕು ಎಂದು ತಿಳಿಸಿದರು.

ಅಭ್ಯರ್ಥಿಯ ಪರವಾಗಿ ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತು ಕಂಡುಬಂದಲ್ಲಿ ಕೂಡಲೇ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಪತ್ರಿಕೆಗಳು,‌ ಮುದ್ರಣ ‌ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಕೇಬಲ್ ನೆಟ್ ವರ್ಕ್ ಗಳು, ಇತರ ರೂಪದ ಮಾದ್ಯಮಗಳಲ್ಲಿನ ಜಾಹೀರಾತುಗಳನ್ನು ಎಂಸಿಎಂಸಿ ಸಮಿತಿ ಸರಿಯಾಗಿ ದಾಖಲಿಸಿ ಮೇಲ್ವಿಚಾರಣೆ ಮಾಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿ ಸೂಚಿಸಿದರು.

ಹಣ ಹಂಚುವ ಬಗ್ಗೆ ಹಾಗೂ ಇತರೆ ದೂರುಗಳು ಬಂದರೆ ರಿಜಿಸ್ಟರ್ ನಲ್ಲಿ ನಮೂದು ಮಾಡಿಕೊಂಡು ಸಂಬಂಧಿಸಿದ ಫ್ಲಾಯಿಂಗ್ ಸ್ಕಾಡ್ ಹಾಗೂ ಸೆಕ್ಟರ್ ಅಧಿಕಾರಿಗಳಿಂದ ನೈಜ ವರದಿ ಪಡೆದುಕೊಂಡು ಅನುಪಾಲನೆ ವರದಿಯನ್ನು ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ದೂರು ನಿರ್ವಹಣಾ ಕೋಶ(ಸಿಎಂಸಿ)ದ ಅಧಿಕಾರಿಗಳಿಗೆ ಡಾ. ವಿಜುಮಹಾಂತೇಶ ಬಿ. ದಾನಮ್ಮನವರ ಸೂಚನೆ ನೀಡಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಹಾಯಕ ಆಯುಕ್ತರಾದ ಬಲರಾಮ ಲಮಾಣಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಎಂಎಂಸಿ, ಎಂಸಿಸಿ, ಸಿಎಂಸಿ ಸೇರಿದಂತೆ ನಾನಾ ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌