Ganayogi Work: ಗಬ್ಬೆದ್ದು ಹೋಗಿದ್ದ ನೀರಿನ ಟ್ಯಾಂಕುಗಳಿಗೆ ಬಣ್ಣದ ಬಳಿದು ರಾಷ್ಟ್ರ ನಾಯಕರ ಚಿತ್ರ ಬಿಡಿಸಿ ಗಮನ ಸೆಳೆದ ಗಾನಯೋಗಿ ಸಂಘ

ವಿಜಯಪುರ: ಈ ಯುವಕರ ಸಂಘ(Youth Association) ಒಂದಿಲ್ಲೊಂದು ಸಮಾಜಕ್ಕೆ(Society) ಪೂರಕವಾಗುವ ಕಾರ್ಯಗಳನ್ನು(Works) ಮಾಡುವ ಮೂಲಕ ಆಗಾಗ ಗಮನ ಸೆಳೆಯುತ್ತಲೇ ಇರುತ್ತದೆ.  ಈ ಹಿಂದೆ ಪಾಳುಬಿದ್ದ ಭಾವಿಯನ್ನು(Ruined Well) ಸ್ವಚ್ಛಗೊಳಿಸಿ ನೀರನ್ನೂ ಶುದ್ಧ(Cleaned) ಮಾಡಿತ್ತು.  ನಂತರ ಪ್ರಯಾಣಿಕರು ನಿಂತುಕೊಳ್ಳಲು ಅಸಹ್ಯ ಪಡುತ್ತಿದ್ದ ಬಸ್ ತಂಗುದಾಣಗಳನ್ನು ಸುಣ್ಣ ಬಣ್ಣ ಬಳಿದು ಅದಕ್ಕೋಂದು ಆಕರ್ಷಣೆ ಬರುವಂತೆ ಮಾಡಿತ್ತು.  ನಂತರ ಮಾರುಕಟ್ಟೆಯಲ್ಲಿ ಜನ ಪ್ರವೇಶಿಸುವ ದ್ವಾರಗಳು ಗಬ್ಬೆದ್ದು ನಾರುವುದನ್ನು ಗಮನಿಸಿ ಅಲ್ಲಿಯೂ ಉತ್ತಮ ಸಂದೇಶಗಳನ್ನು ಬರೆಯುವ ಮೂಲಕ ಭೇಷ್ ಎನಿಸಿಕೊಂಡಿತ್ತು.

ಅಂದು
ಇಂದು

ಈಗ ಇದೇ ಯುವಕರ ತಂಡ ಮತ್ತೋಂದು ಜನೋಪಕಾರಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ.  ಬಸವ ನಾಡು ವಿಜಯಪುರದ ಗಾನಯೋಗಿ ಸಂಘದ ಯುವಕರು ಈಗ ಮತ್ತೋಂದು ಘನಕಾರ್ಯ ಮಾಡುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ.  ವಿಜಯಪುರ ನಗರದ ಬಾಗಲಕೋಟೆ ಕ್ರಾಸ್ ಹತ್ತಿರ ಇರುವ ಎರಡು  ನೀರಿನ ಟ್ಯಾಂಕುಗಳು ಅದರ ಸುತ್ತಮುತ್ತಲಿದ್ದ ಕೆಸರು, ಅಲ್ಲಿ ನಿಂತ ಗಲೀಜಿನಿಂದಾಗಿ ಜನ ಮೂಗು ಮುಚ್ಚಿಕೊಂಡು ತಿರುಗಾಡುವಂತೆ ಮಾಡಿದ್ದವು.  ಇದನ್ನು ಗಮನಿಸಿದ ಗಾನಯೋಗಿ ತಂಡದ ಪ್ರಕಾಶ ಆರ್. ಕೆ. ಮತ್ತೀತರರು ಅದನ್ನು ಅಂದವಾಗಿ ಚಂದ ಮಾಡುವ ಮೂಲಕ ಪ್ರೀತಿಗೆ ಪಾತ್ರರಾಗಿದ್ದಾರೆ.

ಅಂದು
ಇಂದು

 

ಬಣ್ಮ ಕಳೆದುಕೊಂಡು ನಿಂತಿದ್ದ ನೀರಿನ ಟ್ಯಾಂಕ್ ಗಳಿಗೆ ಬಣ್ಣಗಳನ್ನು ಬಳಿದಿದ್ದಾರೆ.  ಅಷ್ಟೇ ಅಲ್ಲ, ಅದರ ಮೇಲೆ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಭಾವಚಿತ್ರ ಬಿಡಿಸಿ ರಾಷ್ಟ್ರಪ್ರೇಮ ಮೆರೆದಿದ್ದಾರೆ.  ಅಷ್ಟೇ ಅಲ್ಲ, ಅವುಗಳ ಮೇಲೆ ನೀರನ್ನು ಮಿತವಾಗಿ ಬಳಸಿ ಎಂದು ಜಲದ ಮಹತ್ವವನ್ನೂ ಜನರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಗಾನಯೋಗಿ ಸಂಘದ ಮುಖಂಡ ಪ್ರಕಾಶ್ ಆರ್. ಕೆ.,  ವಿಕಾಸ ಕಂಬಾಗಿ, ಬಾಹುಬಲಿ ಶಿವಣ್ಣವರ, ವಿಠ್ಠಲ ಗುರುವಿನ, ಸಚಿನ ವಾಲಿಕಾರ, ಪ್ರಮೋದ ಚವ್ಹಾಣ, ಆನಂದ ಹೊನವಾಡ,  ಕಿರಣ ಕುಂಬಾರ, ಬಾಬು, ಅಭಿಷೇಕ ಮುಂತಾದವರು ಈ ಕಾರ್ಯದಲ್ಲಿ ಪಾಲ್ಗೋಂಡು ಬಸವ ನಾಡಿನ ಜನತೆ ಮೆಚ್ಚುವ ಕಾಯಕ ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌