Governor Visti: ಬಸವ ನಾಡಿನ ಆಲಮಟ್ಟಿಯಲ್ಲಿ ಸಂಗೀತ ಕಾರಂಜಿ, ಲೇಸರ್ ಶೋ ವೀಕ್ಷಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ್

ವಿಜಯಪುರ: ರಾಜ್ಯಪಾಲ(Governoor) ಥಾವರಚಂದ ಗೆಹ್ಲೋಟ್(Thawarchand Gehlot) ಎರಡು ದಿನಗಳ(Two Days) ಪ್ರವಾಸದಲ್ಲಿದ್ದು(Tour), ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಿದ್ದಾರೆ. 

ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ವೀಕ್ಷಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ್

ರಾತ್ರಿ 9 ಗಂಟೆಗೆ ಬಿಗೀ ಬಂದೋಬಸ್ತ್ ಮಧ್ಯೆ ಆಲಮಟ್ಟಿಗೆ ಆಗಮಿಸಿದ ರಾಜ್ಯಪಾಲರನ್ನು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದ ಕುಮಾರ ಹಾಗೂ ಇತರ ಅಧಿಕಾರಿಗಳು ಬರಮಾಡಿಕೊಂಡರು.

ನಂತರ  ಬಿಡುವು ಮಾಡಿಕೊಂಡ ರಾಜ್ಯಪಾಲರು ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ವೀಕ್ಷಿಸಿದರು.   ಅಲ್ಲದೇ, ಜಲಾಷಯದ ಆವರಣದಲ್ಲಿರುವ ಸಂಗೀತ ಕಾರಂಜಿ ಸ್ಥಳಕ್ಕೆ ತೆರಳಿ ಮೊದಲು ಲೇಸರ್ ಶೋ ವೀಕ್ಷಿಸಿದರು.  ನಂತರ ಸಂಗೀತ ಕಾರಂಜಿ ವೀಕ್ಷಿಸಿ ಸಂತಸಪಟ್ಟರು. ಡ್ಯಾಂ ‌ನಲ್ಲಿರೋ ನೀರಿನ ಸಂಗ್ರಹ ಪಡೆದುಕೊಂಡ ರಾಜ್ಯದ ಪ್ರಥಮ ಪ್ರಜೆಯೂ ಆಗಿರುವ ಥಾವರಚಂದ ಗೆಲ್ಹೋಟ್, ಡ್ಯಾಂ ಆವರಣದಲ್ಲಿ ಸುಮಾರು ಒಂದೂವರೆ ಕಿ. ಮೀ. ನಡೆದುಕೊಂಡೆ ತೆರಳಿ ವೀಕ್ಷಣೆ ಮಾಡಿದ್ದು ಗಮನ ಸೆಳೆಯಿತು.  ಈ ಸಂದರ್ಭದಲ್ಲಿ ಇತರೆ ಉದ್ಯಾನವನಗಳನ್ನು ವೀಕ್ಷಿಸಿದ ಅವರು, ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದ ನಾಮಫಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದರ ಬಗ್ಗೆ ಮಾಹಿತಿ ಪಡೆದರು.  ತ್ರೀಡಿ(3D)  ಪ್ರೊಜೆಕ್ಷನ್ ಮ್ಯಾಪಿಂಗ್ ನಾಮಫಲಕ‌ದ ಕುರಿತು ಅಧಿಕಾರಿಗಳು ರಾಜ್ಯಪಾಲರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಕೆಬಿಜೆಎನ್ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಲೇಸರ್ ಶೋ ಮತ್ತು ಸಂಗೀತ ಕಾರಂಜಿ ವೀಕ್ಷಣೆಯ ಬಳಿಕ ರಾಜ್ಯಪಾಲ ಥಾವರಚಂದ ಗೆಲ್ಹೋಟ್ ಜಲಾಷಯದ ಮೇಲ್ಬಾಗದಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಇಲಾಖೆಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಬುಧವಾರ ಬೆಳಿಗ್ಗೆ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮಕ್ಕೆ ತೆರಳಲಿರುವ ರಾಜ್ಯಪಾಲರು ನಂತರ ಬಾಲಕೋಟೆಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿ ನಡೆಯಲಿರುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.

Leave a Reply

ಹೊಸ ಪೋಸ್ಟ್‌