ಬೆಂಗಳೂರು: ಬೆಂಗಳೂರಿನ(Bengaluru) ಪ್ರಾವಿಡೆಂಟ್(Provident) ಸನ್ಬರ್ಥ್(Sunworth) ಅಪಾರ್ಟಮೆಂಟ್ ಗೆ ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ+Pollution Control Board) ಗ್ರೀನ್ ಅಪಾರ್ಟಮೆಂಟ್(Green Apartment) ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಮೈಸೂರು ರಸ್ತೆಯಲ್ಲಿರುವ ಕೆಂಗೇರಿ ಹೋಬಳಿಯ ವೆಂಕಟಾಪುರ ವ್ಯಾಪ್ತಿಯಲ್ಲಿ ಬರುವ ಈ ಅಪಾರ್ಟಮೆಂಟ್ 2017ರಲ್ಲಿ ಆರಂಭವಾಗಿದೆ. 56 ಎಕರೆ ವಿಶಾಲವಾದ ಪ್ರದೇಶದಲ್ಲಿ ವಸತಿ ಸಮುಚ್ಛಯ ನಿರ್ಮಿಸಲಾಗಿದ್ದು, ಬೆಂಗಳೂರು ಆರ್ಕಿಟೆಕ್ಟ್ ವೆಂಕಟರಮಣನ್ ಅಸೋಸಿಯೇಟ್ಸ್ ಈ ಅಪಾರ್ಟಮೆಂಟ್ ವಿನ್ಯಾಸ ರೂಪಿಸಿದೆ. ಇಲ್ಲಿ 2800 ಮನೆಗಳನ್ನು ನಿರ್ಮಿಸಲಾಗಿದ್ದು ಸುಶಿಕ್ಷಿತ ಮತ್ತು ಸುಸಂಸ್ಜೃತರಾಗಿರುವ ಇಲ್ಲಿನ ನಿವಾಸಿಗಳು ಪರಿಸರಕ್ಕೆ ಪೂರಕವಾಗುವ ಕೆಲಸ ಮಾಡುವ ಮೂಲಕ ಈ ಗೌರವಕ್ಕೆ ಭಾಜನರಾಗಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ(Environmental Management and Policy Research Institute) ಈ ಅಪಾರ್ಟಮೆಂಟ್ ನಲ್ಲಿರುವ ಒಳಚರಂಡಿ ನಿರ್ವಗಹಣೆ ಘಟಕ, ಉದ್ಯಾನ, ಮಳೆ ನೀರು ಸುಗ್ಗಿ, ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ ಅಂಶಗಳನ್ನು ಪರಿಗಣಿಸಿ ಈ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ, ಪ್ರಾವಿಡೆಂಟ್ ಸನ್ವರ್ಥ್ ನಿವಾಸಿಗಳ ಸಂಘದ ಅಧ್ಯಕ್ಷೆ ಡಾ. ನೇತ್ರಾ ರಾಣಿ, ನಮ್ಮಲ್ಲಿರುವ ಪರಿಸರಪೂರಕ ಕಾಳಜಿಯನ್ನು ತೋರಿಸಲು ಇದು ಒಂದು ವೇದಿಕೆಯಾಗಿದೆ. ಇಲ್ಲಿನ ಜನರ ಸಹಕಾರದಿಂದ ನಾವು ಈಗಾಗಲೇ 1500 ಗಿಡಗಳನ್ನು ನೆಟ್ಟಿದ್ದೇವೆ. ನಮ್ಮ ಅಪಾರ್ಟ್ಮೆಂಟ್ ಪಕ್ಕದಲ್ಲಿಯೇ ವೃಷಭಾವತಿ ನದಿ ಕೂಡ ಹರಿಯುತ್ತಿದೆ. ಈ ನದಿಯ ಮೂಲಕ ತ್ಯಾಜ್ಯ ವಸ್ತುಗಳು ಹೊರಗೆ ಬರದಂತೆ ತಡೆಯಲು ಗೋಡೆ ನಿರ್ಮಿಸಲು ಯೋಚಿಸಿದ್ದೇವೆ. ಸುಂದರ ಪರಿಸರ ನಿರ್ಮಾಣ ನಮ್ಮ ಉದ್ದೇಶವಾಗಿದೆ. ಸಾಧ್ಯವಾದಷ್ಟು ಸೌರಶಕ್ತಿ ಬಳಸಲು ಉತ್ಸುಕರಾಗಿದ್ದೇವೆ. ಮಳೆ ನೀರು ಸುಗ್ಗಿಯನ್ನು ಮಾಡಿದ್ದೇವೆ. ಇದರಿಂದಾಗಿ ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರು ಸಿಗುತ್ತಿದೆ. ಈ ನೀರನ್ನು ನಾವು ಮಳೆ ನೀರಿನೊಂದಿಗೆ ಸೇರಿಸುತ್ತಿದ್ದೇವೆ. ನಮಗೆ ಪ್ರೋತ್ಸಾಹ ಸಿಕ್ಕರೆ ಸಾಧ್ಯವದಷ್ಟು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇರುವ ನೀರನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಈ ಅಪಾರ್ಟಮೆಂಟ್ ನಿವಾಸಿ ಮತ್ತು ಆರ್ಕಿಟೆಕ್ಟ್ ಬಸವರಾಜ ಕಪಾಳೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಂಘದ ಅಧ್ಯಕ್ಷರಾದ ಡಾ. ನೇತ್ರಾ ರಾಣಿ ನೇತೃತ್ವದಲ್ಲಿ ಈ ಅಪಾರ್ಟಮೆಂಟ್ ನಲ್ಲಿ ಪರಿಸರಕ್ಕೆ ಪೂರಕವಾಗಿರುವ ಶುಚಿತ್ವ, ನಿವಾಸಿಗಳ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾವು ಇಲ್ಲಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದರೂ ಇಲ್ಲಿನ ಎಲ್ಲ ನಿವಾಸಿಗಳು ಮಾನಸಿಕವಾಗಿ ಒಂದೇ ಕುಟುಂಬದವರಂತಿದ್ದೇವೆ. ಎಲ್ಲರೂ ಪರಸ್ಪರ ಕಾಳಜಿ ಮತ್ತು ಮುತುವರ್ಜಿ ವಹಿಸುವುದರಿಂದ ಇಲ್ಲಿ ಸುಂದರ ಪರಿಸರ ಸೃಷ್ಠಿಯಾಗಿದೆ. ಇಲ್ಲಿ ಸಂಗ್ರಹಿಸಲಾಗುವ ಕಸದಲ್ಲಿ ಪರಿಸರಕ್ಜೆ ಪೂರಕವಾದ ತ್ಯಾಜ್ಯಗಳನ್ನು ಸಂಗ್ರಹಿಸಿ ನೈಸರ್ಗಿಕ ಗೊಬ್ಬರವನ್ಬಾಗಿ ಮಾಡಿ ಇಲ್ಲಿನ ಉದ್ಯಾನಗಳಿಗೆ ಬಳಸಲಾಗುತ್ತದೆ. ಅಧ್ಯಕ್ಷರ ನೇತೃತ್ವದ ಸಮಾಜ ಮತ್ತು ಪರಿಸರಮುಖಿ ಕಾರ್ಯನ್ನು ಗುರುತಿಸಿ ರಾಜ್ಯ ಸರಕಾರ ಗ್ರೀನ್ ಅಪಾರ್ಟಮೆಂಟ್ ಪ್ರಶಂಸಾ ಪತ್ರ ನೀಡಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದು ಬಸವ ನಾಡು ವೆಬ್ ಗೆ ತಿಳಿಸಿದ್ದಾರೆ.
ಒಟ್ಟಾರೆ, ಅಪಾರ್ಟಮೆಂಟ್ ಆರಂಭವಾಗಿ ಕೇವಲ ಐದು ವರ್ಷಗಳಲ್ಲಿ ಪ್ರಾವಿಡೆಂಟ್ ಸನ್ಬರ್ಥ್ ಅಪಾರ್ಟಮೆಂಟ್ ಗೆ ಗ್ರೀನ್ ಅಪಾರ್ಟಮೆಂಟ್ ಪ್ರಶಂಸಾ ಪತ್ರ ದೊರೆತಿರುವುದು ಬೆಂಗಳೂರಿನ ಇತರ ವಸತಿ ಸಮುಚ್ಛಯಗಳಿಗೆ ಸ್ಪೂರ್ತಿಯಾಗಿದೆ.