No Groupism: ಬಿಜೆಪಿಯಲ್ಲಿ ಗುಂಪುಗಾರಿಕೆಯಿಲ್ಲ ಬಿಜೆಪಿ ಸೇರ್ಪಡೆ ಅಸಮಧಾನ ವ್ಯಕ್ತಪಡಿಸಿಲ್ಲ ಎಂದ ಚಿವ ಎಂಟಿಬಿ ನಾಗರಾಜ

ವಿಜಯಪುರ: ಪಠ್ಯಪುಸ್ತದಲ್ಲಿ(Syllabus) ಹೆಗ್ಡೆವಾರ(Hegdewar) ಭಾಷಣ (Speech) ಸೇರ್ಪಡೆಗೆ ವಿರೋಧ ವಿಚಾರ ಕುರಿತು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು(CM and Education Minister) ತೀರ್ಮಾನ ಮಾಡಲಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ(MTB Nagaraj) ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಕುರಿತು ಸಿಎಂ ಮತ್ತು ಶಿಕ್ಷಣ ಸಚಿವರು ಅಂತಿಮ ತೀರ್ನಾನ ಮಾಡುತ್ತಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿ. ಎಲ್. ಸಂತೋಷ ಮಧ್ಯೆ ಗುಂಪುಗಾರಿಕೆ ನಡೆಯುತ್ತಿದೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ಬಿಜೆಪಿಯವವರೇ ಆಗಿದ್ದೇವೆ. ಯಾವುದೇ ಗುಂಪುಗಾರಿಕೆ ಇಲ್ಲ. ಅದೇಲ್ಲಾ ಊಹಾಪೋಹ ಎಂದು ಹೇಳಿದರು.

ಯತ್ನಾಳ್ ಗೆ ಸಚಿವ ಸ್ಥಾನದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ಸಿನಿಯರ್ ಇದ್ದಾರೆ. ಒಳ್ಳೆಯ ಶಾಸಕ, ಸಂಘಟನಾ ಚತುರಿದ್ದಾರೆ. ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಅವಕಾಶ ಸಿಗಬೇಕಾಗಿತ್ತು. ಸಿಗಲಿಲ್ಲ. ಈಗ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ರಾಜ್ಯ ಮತ್ತು ಕೇಂದ್ರದ ವರಿಷ್ಠರು ಈಗ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಎನ್ನುಬ ಭರವಸೆ ಇದೆ ಎಂದು ಸಚಿವರು ಹೇಳಿದರು.

ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು ನಾನು ಹಾಗೆ ಹೇಳಲ್ಲ. ನಮಗೆ ಹೇಳದೇ ನೀವೇಕೇ ಪಕ್ಷ ಬಿಟ್ಟು ಹೋಗಿದ್ದೀರಿ? ನಮ್ಮನ್ನು ಏಕೆ ಕೇಳಲಿಲ್ಲ? ಎಂದು ಕಾರ್ಯಕರ್ತರು ಪ್ರಶ್ನಿಸಿದ್ದರು. ಆಗ ನಾನು ನಿಮ್ಮನ್ನೆಲ್ಲ ಕೇಳದೇ ಹೋಗಿದ್ದು ತಪ್ಪಾಯ್ತಪ್ಪಾ ಎಂದು ಹೇಳಿದ್ದೆ. ಕೇಳದೇ ಎಬ್ನುವ ಶಬ್ದವನ್ನು ಕಟ್ ಮಾಡಿ ನಾನು ಹೋಗಿ ತಪ್ಪು ಮಾಡಿದೆ ಎಂದು ಮಾಧ್ಯಮಗಳಲ್ಲಿ ಬಂತು. ನಾನು ಹೇಳಿದ್ದು ಹಾಕಬೇಕಿತ್ತು. ಕಾರ್ಯಕರ್ತರು ಹೇಳಿರೋದು ನಾನು ಹೇಳಿದ್ದು ತಪ್ಪಾ ಎಂದು ಅವರು ಮರು ಪ್ರಶ್ನಿಸಿದರು.

ವಿಜಯೇಂದ್ರ ಟಿಕೇಟ್ ತಪ್ಪಿದ ವಿಚಾರ

ಬಿಜೆಪಿ ಯುವ ನಾಯಕ ಬಿ. ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ ಟಿಕೆಟ್ ಕೈತಪ್ಪಿದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ವಿಜಯೇಂದ್ರ ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಲಿ. ಪಕ್ಷದ ಸಂಘಟನೆ ಮಾಡಲಿ ಎಂದು ಟಿಕೆಟ್ ನೀಡಿರಲಿಕ್ಕಿಲ್ಲ.‌‌ ಇದು ನನ್ನ ಊಹೆ‌ ಇನ್ನು ವಯಸ್ಸಿದೆ, ಯುವಕರಿದ್ದಾರೆ. ಅವರ ತಂದೆಯವರ ಹೆಸರಿದೆ‌ ತಂದೆ ಮೂರು ಬಾರಿ ಮುಖ್ಯಮಂತ್ರಿಯಾದವರು. ಮುಂದಿನ ದಿನಗಳಲ್ಲಿ ಯುವ ನಾಯಕರಾಗಿ ಬೆಳೆಯುವ ಎಲ್ಲ ಅವಕಾಶ ಇವೆ. ಮುಂದೆ ಜನರಲ್ ಎಲೆಕ್ಷನ್ ನಲ್ಲಿ ಗೆದ್ದು ಶಾಸಕನಾಗಿ, ಪಕ್ಷವನ್ನು ಕಟ್ಟುತ್ತಾರೆ. ತಂದೆ ಪಕ್ಷ ಕಟ್ಟಿದಂಗೆ ಮಗ ವಿಜಯೇಂದ್ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಪಕ್ಷ ಕಟ್ಟುತ್ತಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಿಂದ ಬಂದವರು ವಾಪಾಸ್ ವದಂತಿ ವಿಚಾರ

15 ಜನ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿದ್ದೇವೆ. ನಾವ್ಯಾರು ವಾಪಸ್ ಹೋಗಲ್ಲ. ವಾಪಾಸ್ ಹೋಗುವ ಪ್ರಮೇಯ ಇಲ್ಲ. ಬಿಜೆಪಿ ಸೇರಿ ಸಚಿವರಾಗಿದ್ದೇವೆ. ಖಾತೆಯ ಬಗ್ಗೆ ಯಾವುದೇ ಅಸಮಾಧಾನ ಇಲ್. ಮುಂದಿನ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಮತ್ತೆ ಗೆದ್ದು ಬರುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಬಹುಮತಗಳಿಂದ ಅಧಿಕಾರಕ್ಕೆ ಬರಲಿದೆ ಎಂದು ಎಂಟಿಬಿ ಹೇಳಿದರು.

Leave a Reply

ಹೊಸ ಪೋಸ್ಟ್‌