ACB Arrest: ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ- ಇವರು ಎಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಗೊತ್ತಾ?

ಬೆಂಗಳೂರು: ಎಸಿಬಿ,(ACB) ಅಧಿಕಾರಿಗಳ(Officers) ಹೆಸರಿನಲ್ಲಿ(Name) ಸಾರ್ವಜನಿಕ ನೌಕರರನ್ನು(Government Servants) ವಂಚಿಸುತ್ತಿದ್ದ+Cheating) ಇಬ್ಬರು ವಂಚಕರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ರಾಜ್ಯಾದ್ಯಂತ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ನಾನಾ ಇಲಾಖೆಯ ಸಾರ್ವಜನಿಕ
ನೌಕರರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಮೇಲೆ ಎಸಿಬಿ ದಾಳಿ ಮಾಡಲಾಗುವುದು. ಅದರಿಂದ
ತಪ್ಪಿಸಿಕೊಳ್ಳಬೇಕಾದರೆ ಕೂಡಲೇ ತಮ್ಮ ಖಾತೆ(ಅಕೌಂಟ)ಗೆ ಆನ್‌ಲೈನ್ ಮೂಲಕ ಹಣ ಸಂದಾಯ
ಮಾಡಿ ಎಂದು ಹೇಳಿ ವಂಚಿಸಲಾಗುತ್ತಿತ್ತು. ಈ ಕುರಿತು ರಾಜ್ಯಾದ್ಯಂತ ಅನೇಕ ಪ್ರಕರಣಗಳು ದಾಖಲಾಗಿದ್ದು ಕೆಲವು ಪ್ರಕರಣಗಳು ತನಿಖೆ ಮತ್ತು ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ‌ಮಧ್ಯೆ ಈ ಪ್ರಕರಣಗಳಲ್ಲಿ ಆರೋಪಿತರನ್ನು ಬಂಧಿಸುವ ಕುರಿತು ಬಾಗಲಕೋಟೆ ಎಸ್ಪಿ ಲೋಕೇಶ್
ಜಗಲಾಸರ ಮತ್ತು ಹಾಸನ ಎಸ್ಪಿ ಆರ್. ಶ್ರೀನಿವಾಸ ಗೌಡ
ಮತ್ತು ಸಿಬ್ಬಂದಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ ಇವರ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ
ತಂಡಗಳ ಸಹಕಾರದೊಂದಿಗೆ ಎಸಿಬಿ ಉತ್ತರ ವಲಯ ಬೆಳಗಾವಿ ಎಸ್ಪಿ ಬಿ. ಎಸ್. ನೇಮಗೌಡ ಹಾಗೂ ಎಸಿಬಿ ದಕ್ಷಿಣ ವಲಯ ಮೈಸೂರು ಎಸ್ಪಿ ಸಜೀತ ವಿ. ಜೆ. ಹಾಗೂ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿತಗಳನ್ನು ಬಂಧಿಸಿದ್ದಾರೆ..

ಆರೋಪಿ ಮುರಿಗೆಪ್ಪ ನಿಂಗಪ್ಪ ಕುಂಬಾರ
ಆರೋಪಿ ರಜನಿಕಾಂತ ನಾಗರಾಜ

ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಮುರಿಗೆಪ್ಪಾ ನಿಂಗಪ್ಪ ಕುಂಬಾರ(56) ಮತ್ತು
ಹಾಸನ‌ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆಹೋಬಳಿಯ ಮುಗಲಿ ಗ್ರಾಮದ ರಜನಿಕಾಂತ ನಾಗರಾಜ(46) ಎಂದು ಗುರುತಿಸಲಾಗಿದೆ.

ಅಲ್ಲದೇ, ಆರೋಪಿಗಳಿಂದ ಕೆಲವು ಸಿಮ್ ಕಾರ್ಡ ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ‌ಆ

ರೊಪಿ ಮುರಿಗೆಪ್ಪಾ ನಿಂಗಪ್ಪ ಕುಂಬಾರ ರಾಜ್ಯಾದ್ಯಂತ ಸುಮಾರು 40ಕ್ಕೂ ಹೆಚ್ಚು ಮತ್ತು ಇನ್ನೊಬ್ಬ ಆರೋಪಿ ರಜನಿಕಾಂತ ನಾಗರಾಜ ರಾಜ್ಯಾದ್ಯಂತ ಸುಮಾರು ಆರಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೆಲವು ಪ್ರಕರಣಗಳು ತನಿಖೆಯಲ್ಲಿದ್ದು, ಇನ್ನು ಕೆಲವು ಪ್ರಕರ,ಣಗಳಿ ವಿಚಾರಣೆ ಹಂತದಲ್ಲಿವೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರಂಟಿ ಸಹ ಹೊರಡಿಸಲಾಗಿದೆ.  ಈ ಆರೋಪಿತರು ಕೆಲವು ಪ್ರಕರಣಗಳಲ್ಲಿ ಅರೆಸ್ಟ್ ಆಗಿ  ಜಾಮೀನು ಪಡೆದು ನಂತರ ಪರಾರಿತಾಗಿದ್ದರು.  ಈ ಆರೋಪಿತರು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಮತ್ತು ಮೊಬೈಲ್ ಖರೀದಿಸಿ ನಾನಾ ಇಲಾಖೆಗಳ ಸಾರ್ವಜನಿಕ ನೌಕರರಿಗೆ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಎಸಿಬಿ ದಾಳಿ ಮಾಡುವುದಾಗಿ ಹೆದರಿಸಿ ವಿವಿಧ ವ್ಯಕ್ತಿಗಳ ಖಾತೆಗಳಿಗೆ ಹಣ ಸಂದಾಯಮಾ ಡಿಸಿಕೊಳ್ಳುತ್ತಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದ್ದು, ವಿವರವಾದ ತನಿಖೆಮುಂ ದುವರೆದಿದೆ..  ಆರೋಪಿತರ ವಿಚಾರಣೆ ಸಮಯದಲ್ಲಿ ಇನ್ನು ಅನೇಕ ಸಾರ್ವಜನಿಕ ನೌಕರರಿಗೆ ಈ ರೀತಿ ವಂಚಿಸಿ ಹಣ ಪಡೆದಿರುವುದಾಗಿ ತಿಳಿಸಿರುತ್ತಾರೆ.  ಈ ರೀತಿ ವಂಚನೆಗೊಳಗಾದ ಸಾರ್ವಜನಿಕ ನೌಕರರು ಕೂಡಲೇ ಸ್ಥಳಿಯ ಪೊಲೀಸ್ ಠಾಣೆಗೆ ದೂರು ನೀಡಲು ಕೋರಲಾಗಿದೆ.  ಅದೇ ರೀತಿ ಇನ್ನು ಮುಂದೆ ಕೂಡ ಯಾವುದೆ ಸಾರ್ವಜನಿಕ ನೌಕರರಿಗೆ ಈ ರೀತಿ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಹೆದರಿಸಿ ಹಣ ಸಂದಾಯ ಮಾಡುವಂತೆ ದೂರವಾಣಿ ಕರೆಗಳು ಬಂದಲ್ಲಿ ಕೂಡಲೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಮತ್ತು ಎಸಿಬಿ ಅಧಿಕಾರಿಗಳ ಗಮನಕ್ಕೆ ತರಲು ಕೋರಲಾಗಿದೆ ಎಂದು ಎಸಿಬಿ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌