Journalists Health Insurance: ಪತ್ರಕರ್ತರಿಗೆ ಬಿ ಎಲ್ ಡಿ‌ ಇ ಆಸ್ಪತ್ರೆಯಿಂದ ಆರೋಗ್ಯ ಕವಚ ವಿಮೆ- ಎಂ. ಬಿ. ಪಾಟೀಲ

ವಿಜಯಪುರ: ಬಿ ಎಲ್ ಡಿ‌ಇ ಆಸ್ಪತ್ರೆಯ(BLDEA Hospital) ಆರೋಗ್ಯ ಕವಚ ವಿಮೆ(Health Insurance) ಯೋಜನೆಯಡಿ (Scheme) ವಿಜಯಪುರ ಜಿಲ್ಲೆಯ ಎಲ್ಲ ಪತ್ರಕರ್ತರಿಗೆ(Vijayapura District All Journalists) ಆರೋಗ್ಯ ಸೇವೆ (Health Service) ಒದಗಿಸಲು ಶಿಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಜಯಪುರದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಆರೋಗ್ಯ ರಕ್ಷಣೆಗಾಗಿ ಬಿಎಲ್‍ಡಿಇ ಸಂಸ್ಥೆ  ಬಿ ಎಲ್ ಡಿ ಇ ಹೆಲ್ತ್ ಕೇರ್ ಸರ್ವಿಸಿಸ್ ಯೋಜನೆಯಡಿ ಆರೋಗ್ಯ ಕವಚ ಕಾರ್ಡ್ ನೀಡಲಾಗುತ್ತಿದೆ.  ಈ ಸೇವೆಯನ್ನು ವಿಜಯಪುರ ಜಿಲ್ಲೆಯ ಪತ್ರಕರ್ತರಿಗೂ ವಿಸ್ತರಿಸಲಾಗುವುದು.  ಈ ವಿಮೆ ಕುರಿತು ನನ್ನ ಪುತ್ರ ಮತ್ತು ಬಿ ಎಲ್‍ ಡಿ ಇ ಸಂಸ್ಥೆಯ ನಿರ್ದೇಶಕರೂ ಆಗಿರುವ ಬಸನಗೌಡ ಪಾಟೀಲ ಕಳೆದ ಕೆಲವು ದಿನಗಳ ಹಿಂದೆಯೇ ಸಲಹೆ ನೀಡಿದ್ದರು.  ಈ ಸೇವೆಯನ್ನು ಪತ್ರಕರ್ತರಿಗೂ ವಿಸ್ತರಿಸಲು ಉತ್ಸುಕರಾಗಿರುವುದಾಗಿ ತಿಳಿಸಿದರು.

ಆಧುನಿಕ ತಂತ್ರಜ್ಞಾನದ ಫಲವಾಗಿ ಈಗ ಸುದ್ದಿ ಮತ್ತು ಮಾಹಿತಿಗಳು ಜನರಿಗೆ ಬಹುಬೇಗ ತಲುಪುತ್ತಿವೆ. ಹೀಗಾಗಿ ಧನಾತ್ಮಕ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಸಮಾಜಮುಖಿ ಕೆಲಸ ಕಾರ್ಯಗಳಿಗೆ ಉತ್ತೇಜನ ನೀಡಬೇಕಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಕರ್ತರು ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಅದೇ ರೀತಿ ತಪ್ಪುಗಳಾದಾಗ ಅವುಗಳ ಬಗ್ಗೆ ಬೆಳಕು ಚೆಲ್ಲಿ ತಿದ್ದುವ ಕೆಲಸವನ್ನೂ ಮಾಡಬೇಕು ಕಿವಿಮಾತು ಹೇಳಿದರು.

ರಾಜಕಾರಣಿಗಳಲ್ಲಿ ಕೆಟ್ಟವರೂ ಇದ್ದಾರೆ. ಒಳ್ಳೆಯವರೂ ಇದ್ದಾರೆ. ಅದೇ ರೀತಿ ವ್ಯಾಪಾರಿಗಳಲ್ಲಿ, ಉದ್ಯಮಿಗಳಲ್ಲಿ ಹಾಗೂ ಪತ್ರಕರ್ತರಲ್ಲಿಯೂ ಕೆಟ್ಟವರೂ ಇದ್ದಾರೆ. ಒಳ್ಳೆಯವರೂ ಇದ್ದಾರೆ. ಕೆಲವರಿಂದ ತಪ್ಪು ಸಂದೇಶಗಳು ಹೆಚ್ಚಾಗಿ ಪಸರಿಸುತ್ತವೆ. ಒಳ್ಳೆಯವರಿಗೆ ಪ್ರೋತ್ಸಾಹ ನೀಡುವುದು ಮುಖ್ಯವಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಹಿರಿಯ ಪತ್ರಕರ್ತರು ಯುವ ಪತ್ರಕರ್ತರಿಗೆ ತರಬೇತಿ ಶಿಬಿರ ನಡೆಸಿ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ, ಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರದಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರದಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾಶ ಜಿ.ಬೆಣ್ಣೂರ, ಫಿರೋಜ ರೋಜಿಂದಾರ್, ಕಾರ್ಯದರ್ಶಿಗಳಾದ ಅವಿನಾಶ ಬ.ಬಿದರಿ, ಶಕೀಲ ಬಾಗಮಾರೆ, ಮಲ್ಲಿಕಾರ್ಜುನ ಕೆಂಭಾವಿ, ಖಜಾಂಚಿ ರಾಹು ಆಪ್ಟೆ, ರಾಜ್ಯ ಕಾರ್ಯಕಾರಿ ಸದಸ್ಯ ಡಿ.ಬಿ.ವಡವಡಗಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ ನಗರದ ಗಣ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌