ವಿಜಯಪುರ: ನಗರಕ್ಕೆ ಬರುವ ಪ್ರವಾಸಿಗರಿಗೆ(Tourists) ತಂಗಲು ಸುಸಜ್ಜಿತ ಹೊಟೇಲ್ ಗಳು(Good Hotels) ಮತ್ತು ಅಗತ್ಯ ಮೂಲಭೂತ ಸೌಕರ್ಯ(Basic Amenities) ಒದಗಿಸಲು ಸ್ಥಳಿಯ ಉದ್ದಿಮೆದಾರರು(Local Businessmen) ಮುಂದಾಗಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(KPCC Campaign Committee Chairman M B Patil)ಹೇಳಿದ್ದಾರೆ.
ನಗರದ ಎನ್ ಎಚ್-52ರಲ್ಲಿರುವ ಐಓಸಿ ಪೆಟ್ರೋಲ್ ಪಂಪ್ ಹತ್ತಿರ ಸಮೀರ್ ಆರ್ಕೆಟ್, ಹೊಟೇಲ್ ಫೋರ್ ವೇ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ಪ್ರವಾಸಿ ತಾಣ. ಇಲ್ಲಿಯ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರವಾಸಗಿರು ಬರುತ್ತಾರೆ. ಅಲ್ಲದೇ, ವಿಜಯಪುರ ಶಿಲ್ಪಕಲೆ, ಸಾಹಿತ್ಯ, ವಾಸ್ತುಶಿಲ್ಪದ ನಾಡಾಗಿದೆ. ಇವುಗಳನ್ನು ವೀಕ್ಷಿಸಲು ಒಂದು ದಿನದ ಅವಧಿ ಸಾಕಾಗುವುದಿಲ್ಲ. ಆದ್ದರಿಂದ ಪ್ರವಾಸಿಗರಿಗೆ ತಂಗಲು ಜಿಲ್ಲೆಯಲ್ಲಿ ಉತ್ತಮ ಹೊಟೇಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ. ಇದರಿಂದ ಜಿಲ್ಲೆಯ ಆದಾಯವೂ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಸ್ಥಳೀಯ ರಜಾಕಸಾಬ ಮನಗೂಳಿ ಸಾಮಾನ್ಯ ಕೆಲಸಗಾರರಾಗಿ ತಮ್ಮ ದುಡಿಮೆಯಿಂದ ಮುಂದೆ ಬಂದು ದೊಡ್ಡ ಉದ್ದಿಮೆದಾರರಾಗಿ ಬೆಳೆದು ನಿಂತಿದ್ದಾರೆ. ಇವರ ಎಲ್ಲ ಪ್ರಯತ್ನಗಳು ಯಶಸ್ಸು ಕಾಣಲಿ ಎಂದು ಎಂ. ಬಿ. ಪಾಟೀಲ ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಸೇರಿದಂತೆ ಗಣ್ಯ ಉದ್ದಿಮೆದಾರರಾದ ಜಗದೀಶ ಮಂಗಳವೆಡೆ, ಅರವಿಂದ ಮಂಗಳವೆಡೆ, ಬಾಬು ಜಾಧವ, ಅಲ್ಲಾಭಕ್ಷ ಕಮತಗಿ, ರಾಜು ಗುಡ್ಡೋಡಗಿ, ಅರವಿಂದ ಗೊಬ್ಬೂರ, ಎಸ್. ಸಿ. ಚಿಕರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.