KSWJA: ಸಂಗಮೇಶ ಟಿ ಚೂರಿ ನೇತೃತ್ವದಲ್ಲಿ ಪದಗ್ರಹಣ ಮಾಡಿದ ಕಾನಿಪ ನೂತನ ಪದಾಧಿಕಾರಿಗಳು- ಅತಿಥಿಗಳು ಹೇಳಿದ್ದೇನು ಗೊತ್ತಾ?

ವಿಜಯಪುರ: ಹಿರಿಯ ಪತ್ರಕರ್ತ(Senior Journalist) ಸಂಗಮೇಶ ಟಿ. ಚೂರಿ(Sangamesh T Churi) ನೇತೃತ್ವದಲ್ಲಿ(Leadership) ಕಾರ್ಯನಿರತ ಪತ್ರಕರ್ತರ ಸಂಘದ(Working Journalists Association) ವಿಜಯಪುರ ಜಿಲ್ಲೆಯ ನೂತನ ಪದಾಧಿಕಾರಿಗಳು ಪದಗ್ರಹಣ(New Office Bearers Took Oath) ಮಾಡಿದ್ದಾರೆ.

ಕಾನಿಪ ವಿಜಯಪುರ ಜಿಲ್ಲಾ ನೂತನ ಪದಾಧಿಕಾರಿಗಳು ಪತಿಜ್ಞಾ ವಿಧಿ ಸ್ಕೀಕರಿಸಿದರು

ವಿಜಯಪುರ ನಗರದ ಶ್ರೀ ಸಂಗನಬಸವ ಸಮುದಾಯ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸಂಗಮೇಶ ಟಿ. ಚೂರಿ ನೇತೃತ್ವದ ನೂತನ ಪದಾಧಿಕಾರಿಗಳ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಮತ್ತು ಹಿರಿಯ ಪತ್ರಕರ್ತ ಡಾ. ಓಂಕಾರ ಕಾಕಡೆ, ಪತ್ರಕರ್ತರ ಸಧ್ಯದ ಪರಿಸ್ಥಿತಿ ಕುರಿತು ವಿವರಿಸಿದರು.  ಪತ್ರಕರ್ತರ ಸಮಸ್ಯೆಗಳು, ಎದುರಿಸುತ್ತಿರುವ ಸವಾಲುಗಳು, ಸಿಗಬೇಕಿರುವ ಸೌಲಭ್ಯಗಳ ಕುರಿತು ಅವರು ಮಾತನಾಡಿದರು.

ಮಹಿಳಾ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಮಾತನಾಡಿದರು

ಒತ್ತಡದ ಬದುಕಿನಿಂದಾಗಿ ಪತ್ರಕರ್ತರು ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿರುವ ಮಾಧ್ಯಮದ ಶಕ್ತಿ ಈಗ ಕುಂದಿದೆ ಎಂಬ ಮಾತು ಕೇಳಿ ಬರುತ್ತಿದೆ.  ದುಡ್ಡು ಕೊಟ್ಟರೆ ಬರೆಯುತ್ತಾರೆ ಎಂಬ ಮಾತುಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ.  ಬೇರೊಬ್ಬರ ತಪ್ಪು ಎತ್ತಿತೋರಿಸುವ ನಾವು ಎಂದಿಗೂ ತಪ್ಪು ಮಾಡಬಾರದು,  ಉದ್ಯಮದ ಎಲ್ಲ ಲಕ್ಷಣಗಳು ಪತ್ರಿಕೋಧ್ಯಮದಲ್ಲಿ ಗೋಚರಿಸುತ್ತಿವೆ.   ಸಾಮಾಜಿಕ ಕಳಕಳಿ ಗೌಣವಾಗುತ್ತಿದೆ ಎಂಬ ಟೀಕೆ ಕೇಳಿ ಬರುತ್ತಿದೆ.  ಈ ಟೀಕೆಯನ್ನು ನಾವು ಅರ್ಥೈಸಿಕೊಂಡು ಸಾಮಾಜಿಕ ಕಳಕಳಿಯನ್ನು ಇನ್ನಷ್ಟೂ ಬಲಗೊಳಿಸಿಕೊಳ್ಳಬೇಕಿದೆ ಎಂದು ಡಾ. ಓಂಕಾರ ಕಾಕಡೆ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿದರು

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ವರದಿಗಳ ಮೂಲಕ ಯಾರದೇ ಮಾನಹಾನಿ ಮಾಡುವುದು ಪತ್ರಿಕೋದ್ಯಮದ ಲಕ್ಷಣವಲ್ಲ.  ಮಹಾತ್ಮಾ ಗಾಂಧಿ ಮತ್ತು ಡಾ. ಬಿ. ಆರ್. ಅಂಬೇಡ್ಕರ ಅವರು ಶ್ರೇಷ್ಠ ಪತ್ರಕರ್ತರಾಗಿದ್ದರು.  ಅವರು ನಮಗೆಲ್ಲರಿಗೂ ಮಾದರಿಯಾಗಬೇಕು.  ಧಾವಂತ ಪತ್ರಿಕೋದ್ಯಮ ಸರಿಯಲ್ಲ.  ಸುದ್ದಿಗೋಷ್ಠಿ ಮುಂತಾದ ಕಡೆ ಪತ್ರಕರ್ತರ ಮೇಲೆ ವಿಶ್ವಾಸವಿಟ್ಟು ಮುಖಂಡರು ಹೇಳುವ ಆಫ್ ದಿ‌ ರೆಕಾರ್ಡ್ ಗೆ ಮಾತಿಗೆ ಬೆಲೆ ಇರಬೇಕು.  ಆದರೆ, ಇಂದು ಅದನ್ನು ಕಡೆಗಣಿಸುತ್ತಿರುವುದು ಪತ್ರಿಕೋದ್ಯಮಕ್ಕೆ ತಕ್ಕುದಲ್ಲ.  ವಾಮಮಾರ್ಗ‌ ಸರಿಯಲ್ಲ.  ಪತ್ರಕರ್ತರಾದವರು ವಿಸಿಟಿಂಗ್ ಕಾರ್ಡ್ ನೀಡಿ ಪರಿಚಯ ಮಾಡಿಕೊಳ್ಳುವುದಕ್ಕಿಂತ ತಾವು ಮಾಡುವ ವರದಿಗಳ ಮೇಲೆ ಜನ ಗುರುತಿಸುವ ಕೆಲಸ ಮಾಡಬೇಕು.  ವಿದ್ಯುನ್ಮಾನ ಬಂದ ಮೇಲೆ ಶಬ್ದ ಬಳಕೆ ನೀತಿ ಬದಲಾಗಿದೆ ಎಂದು ಹೇಳಿದರು.

ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮಾತನಾಡಿದರು

 

ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮಾತನಾಡಿ, ಪತ್ರಕರ್ತರೆಂದರೆ ಹರಿತವಾದ ಆಯುಧವಿದ್ದಂತೆ‌.  ಚಾಕುವಿನಿಂದ ಸೇಬು ಹಣ್ಣನ್ನು ಕತ್ತಿರಿಸಿ ತಿನ್ನಬಹುದು.  ಅಲ್ಲದೇ, ದುರುದ್ದೇಶಕ್ಕಾಗಿ ಬಳಸಿ ಪ್ರಾಣಕ್ಕೂ ಕುತ್ತು ತರಬಹುದು.  ಅದನ್ನು ಸದ್ಬಳಕೆ ಮಾಡಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂಘದ ನೂತನ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾರ ಜಿ. ಬೆಣ್ಣೂರ, ಫಿರೋಜ ರೋಜಿನದಾರ, ಕಾರ್ಯದರ್ಶಿಗಳಾದ ಅವಿನಾಶ ಬ. ಬಿದರಿ, ಶಕೀಲ್ ಬಾಗಮಾರೆ, ಮಲ್ಲಿಕಾರ್ಜುನ ಕೆಂಭಾವಿ, ಖಜಾಂಚಿ ರಾಹುಲ ಡಿ. ಆಷ್ಟೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ. ಬಿ. ವಡವಡಗಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿ ಮೆಂಡೆಗಾರ, ಲಕ್ಷ್ಮೀಪತ್ರ ಬಮ್ಮನಳ್ಳಿ, ಸುನೀಲ ಗೋಡೆನ್ನವರ, ಸದ್ದಾಂಹುಸೇನ ಜಮಾದಾರ, ಗುರಪ್ಪ ಲೋಕುರಿ, ಮಹ್ಮದ ಸಮೀರ ಇನಾಂದಾರ, ಬಸವರಾಜ ಉಳ್ಳಾಗಡ್ಡಿ, ಅರವಿಂದ ಖಡೆಖಡೆ, ಸುರೇಶ ಸಿ. ತೇರದಾಳ, ಪರಶುರಾಮ ಗಣಿ, ವಿನೋದ ಎಂ. ಸಾರವಾಡ, ಸುನೀಲ ಕಾಂಬಳೆ, ನಾಗಪ್ಪ ನಾಗೂರ, ಆಸೀಫ್ ಬಾಗವಾನ, ಶಂಕ್ರಪ್ಪ ಹಾವಿನಾಳ, ನಾಮ ನಿರ್ದೇಶಿತ ಸದಸ್ಯರಾದ ಗುರುರಾಜ ಗದ್ದನಕೇರಿ, ದಾನಪ್ಪ ಸೂರಗೊಂಡ, ನವೀದಅಂಜುಮ್ ಮಮದಾಪೂರ, ವಿಜಯ ಸಾರವಾಡ ಪ್ರತಿಜ್ಞಾವಿಧಿ ಸ್ವೀಕರಿಸಿದರು.  ಅಲ್ಲದೇ, ಅವರನ್ನು ಸನ್ಮಾನಿಸಲಾಯಿತು.

ಅಷ್ಟೇ ಅಲ್ಲ, ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಪಿ. ಕುಲಕರ್ಣಿ, ರಫಿ ಭಂಡಾರಿ, ರಾಜು ಕೊಂಡಗೂಳಿ, ಶರಣು ಮಸಳಿ, ಸಚೇಂದ್ರ ಲಂಬು ಅವರನ್ನೂ ಸನ್ಮಾನಿಸಲಾಯಿತು.  ಅಲ್ಲದೇ, ಬಸವನ ಬಾಗೇವಾಡಿ, ಸಿಂದಗಿ, ಮುದ್ದೇಬಿಹಾಳ, ಇಂಡಿ, ದೇವರ ಹಿಪ್ಪರಗಿ, ಆಲಮೇಲ, ಚಡಚಣ, ನಿಡಗುಂದಿ, ತಾಳಿಕೋಟಿ, ಕೊಲ್ದಾರ ತಾಲೂಕು ಘಟಕಗಳ ತಾಲೂಕು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನೂ ಕೂಡ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ ಉಪಸ್ಥಿತರಿದ್ದರು.

ಇದನ್ನೂ ಓದಿ:

Journalists Health Insurance: ಪತ್ರಕರ್ತರಿಗೆ ಬಿ ಎಲ್ ಡಿ‌ ಇ ಆಸ್ಪತ್ರೆಯಿಂದ ಆರೋಗ್ಯ ಕವಚ ವಿಮೆ- ಎಂ. ಬಿ. ಪಾಟೀಲ

ಸಂಗಮೇಶ ಟಿ. ಚೂರಿ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಪರಿಚಯಿಸಿದರು.  ಮುರುಗೇಶ ಸಂಗಮ ಕಾರ್ಯಕ್ರಮ ನಿರೂಪಿಸಿದರು.  ಡಿ. ಬಿ. ವಡವಡಗಿ ವಂದಿಸಿದರು.

 

Leave a Reply

ಹೊಸ ಪೋಸ್ಟ್‌