Free Health Camp: ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ- 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ

ವಿಜಯಪುರ: ಉಚಿತ(Free) ಆರೋಗ್ಯ ತಪಾಸಣೆ(Health Check Up) ಬೃಹತ್ ಶಿಬಿರ(Big Camp) ನಗರದ ಎಪಿಎಂಸಿಯಲ್ಲಿರುವ(APMC) ಮರ್ಚಂಟ್ಸ್ ಅಸೋಸಿಯೇಷನ್(Merchants Association) ಮಂಗಲ ಕಾರ್ಯಾಲಯದಲ್ಲಿ ನಡೆಯಿತು.

ನಗರದ ಕಾರ್ಡಿಯಾಕ್ ಅಂಡ್ ಕ್ರಿಟಿಕಲ್ ಕೇರ್ ಸೆಂಟರ್ ಹಾಗೂ ಮರ್ಚಂಟ್ಸ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ಈ ಶಿಬಿರವನ್ನು ಉದ್ಯಮಿ ಮತ್ತು ಅಸೋಸಿಯೇ।ನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಭೂಮಿ, ಹಣ, ಐಶ್ವರ್ಯಗಳಿಗಿಂತ ಆರೋಗ್ಯ ಸಂಪತ್ತು ಬಹಳ ದೊಡ್ಡದು.  ಇಂದಿನ ದಿನಮಾನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮಹತ್ವದ್ದಾಗಿದೆ.  ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವಿಜಯಪುರ ಎಪಿಎಂಸಿ ಆವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೋಂಡ ಜನತೆ

ಕೊರೊನಾ ಸಂಕಷ್ಟದ ಸಮಯದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಜನರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್ ಹಗಲಿರುಳು ಶ್ರಮ ಪಟ್ಟಿದ್ದಾರೆ ಎಂದು ಹೇಳಿದರು.

ಖ್ಯಾತ ಹೃದ್ರೋಗ ತಜ್ಞ ಡಾ. ಸಂಜೀವ ಸಜ್ಜನರ, ಡಾ. ಸೋಮಲಿಂಗ ತಿಮಶೆಟ್ಟಿ(ಕಾಖಂಡಕಿ) ನೇತೃತ್ವದಲ್ಲಿ ಈ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.  ಅಲ್ಲದೇ, ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ, ಸೂಚನೆಗಳನ್ನು ನೀಡಲಾಯಿತು.

ಈ ಶಿಬಿರದಲ್ಲಿ ಬಿಪಿ, ಶುಗರ್, ರಕ್ತದ ಕಬ್ಬಿಣಾಂಶ, 2D ಇಕೋಕಾರ್ಡಿಯೋಗ್ರಾಫಿ, ಟಿಎಂಟಿಗಳ ಮೂಲಕ ಉಚಿತ ತಪಾಸಣೆ ನಡೆಸಿ ನಾನಾ ಕಂಪನಿಗಳಿಂದ ಉಚಿತ ಔಷಧ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮರ್ಚಂಟ್ಸ್ ಅಸೋಶಿಯೇಶನ್ ನಿರ್ದೇಶಕರಾದ ಜಯಾನಂದ ತಾಳಿಕೋಟಿ, ಮನೋಜ ಬಗಲಿ, ಪ್ರವೀಣ ವಾರದ, ನೀಲೇಶ ಶಹಾ, ರಮೇಶ  ನಿಡೋಣಿ ಮತ್ತು ವ್ಯಾಪಾರಸ್ಥರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌