ವಿಜಯಪುರ: ಜೀವನದಲ್ಲಿ(Life)/ಯಶಸ್ಸು(Success) ಗಳಿಸಲು ಛಲದಿಂದ(Will) ಮುಂದೆ ಸಾಗಬೇಕು. ಶಿಕ್ಷಣ(Education) ಆದ್ಯಾತ್ಮ ಮತ್ತು ವ್ಯಕ್ತಿತ್ವ ನಿರ್ಮಾಣದಿಂದ ಬದುಕು ರೂಪಿತವಾಗುತ್ತದೆ ಎಂದು ನಿರ್ಭಯಾನಂದ ಸ್ವಾಮೀಜಿ(Nirbhayanand Swamiji) ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಜ್ಞಾನ ಪರಂಪರೆ ಬಹಳಷ್ಟಿದೆ. ಮಕ್ಕಳಿಗೆ ಅನ್ಯಭಾಷೆಯಲ್ಲಿ ಶಿಕ್ಷಣ ನೀಡಿ, ಹಿಂಸೆ ನೀಡುವ ಬದಲು ಮಾತೃಭಾಷೆಯಲ್ಲಿ ಓದಿಸಬೇಕು. ಆ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಭಾವಿ ಶಿಕ್ಷಕಿಯರಿಗೆ ಅವರು ಸಲಹೆ ನೀಡಿದರು.
ಓದುವ ಹುಚ್ಚು ಹಿಡಿಸಿಕೊಳ್ಳಬೇಕು. ಆ ಹುಚ್ಚು ಸಾಧನೆಯ ಮಾರ್ಗವಾಗುತ್ತದೆ. ಭಾರತದಲ್ಲಿ ವಿವೇಕಾನಂದ, ಅಬ್ದುಲ ಕಲಾಂ ಆಜಾದ್‌ರಂಥ ಅನೇಕ ಸಾಧಕರಿದ್ದಾರೆ. ಅವರೆಲ್ಲರೂ ಯುವಜನರಿಗೆ ಪ್ರೇರಣೆಯಾಗಬೇಕು ಎಂದು ನಿರ್ಭಯಾನಂದ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕೋಬ ನಾರಾಯಣಪ್ಪ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಸಮಾಜದ ಸುಸ್ಥಿರ ಅಭಿವೃದ್ಧಿಗಾಗಿ ಪ್ರಯತ್ನಿಸಬೇಕು. ಅದಕ್ಕಾಗಿ ತಮ್ಮನ್ನು ಸಿದ್ದಪಡಿಸಿ ಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ವಿಷ್ಣು ಶಿಂದೆ, ಡಾ. ಯು. ಕೆ. ಕುಲಕರ್ಣಿ, ಡಾ. ಅಶೋಕಕುಮಾರ ಸುರಪುರ, ಡಾ. ಪ್ರಕಾಶ ಸಣ್ಣಕ್ಕನವರ, ಡಾ. ಸೌಭಾಗ್ಯ ಜಿ. ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ ಡಾ. ಪ್ರಕಾಶ ಬಡಿಗೇರ್ ಶಿಬಿರದ ಮೂರು ದಿನಗಳ ಕಾರ್ಯಕ್ರಮಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರು ಸರ್ವಧರ್ಮ ಪ್ರಾರ್ಥನೆ ಮಾಡಿದರು. ನೇತ್ರಾ ತೊರವಿ ಕಾರ್ಯಕ್ರಮ ನಿರೂಪಿಸಿದರು. ಸನಾ ಬಾನು ಬೀಳಗಿ ವಂದಿಸಿದರು.