Syllabus Issue: ಪಠ್ಯಪುಸ್ತಕ ಸಮಿತಿ ರದ್ದುಪಡಿಸಲು ಆಗ್ರಹಿಸಿ ಬಸವಣ್ಣನವರ ಜನ್ಮಸ್ಥಳದಲ್ಲಿ ಪ್ರತಿಭಟನೆ

ವಿಜಯಪುರ: ಒಂಬತ್ತನೇ ತರಗತಿಯ(Ninth Standard) ಪಠ್ಯದಲ್ಲಿ(Syllabus) ಅಣ್ಣ ಬಸವಣ್ಣನವರನ್ನು(Anna Basavanna) ವೈದಿಕ ಗೊಳಿಸಲಾಗಿದೆ ಎಂದು ಆರೋಪಿಸಿ ಮತ್ತು ಪಠ್ಯಪುಸ್ತಕ ಸಮಿತಿ ರದ್ದು(Cancel) ಮಾಡುವಂತೆ ಒತ್ತಾಯಿಸಿ ಬಸವಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ(Basavanadu Bagewadi) ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಂಕರಗೌಡ ಬಿರಾದಾರ ಮಾತನಾಡಿದರು. ಬಸವಣ್ಣನವರನ್ನು ವೀರಶೈವರನ್ನಾಗಿ ಚಿತ್ರಿಸಿದ್ದು ಖಂಡನೀಯ. ಬಸವಣ್ಣನವರು […]

Mother Temple: ತಾಯಿಯ ಹೆಸರಿನಲ್ಲಿ ಅಮ್ಮನ ಮಂದಿರ ನಿರ್ಮಿಸಿದ ಬಸವ ನಾಡಿನ ಕುಮಾನಿ ಕುಟುಂಬದ ಕುಡಿಗಳು

ಮಹೇಶ ವಿ. ಶಟಗಾರ ವಿಜಯಪುರ: ಅವ್ವ, ಅಮ್ಮ, ತಾಯಿ(Mother) ಈ ಒಂದು ಶಬ್ದ ಮಕ್ಕಳಲ್ಲಿ(Children) ಚೈತನ್ಯ ತುಂಬುತ್ತದೆ. ಪ್ರತಿಯೊಬ್ಬ ಮಕ್ಕಳ ಯಶಸ್ಸಿನಲ್ಲಿ(Success) ತಾಯಿಯೇ ಮೊದಲ ಗುರುವಾಗಿರುತ್ತಾಳೆ(Teacher). ಸದಾ ಮಕ್ಕಳ ಶ್ರೇಯೋಭಿವೃದ್ಧಿ(Welfare) ಬಯಸುವ ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ತಮ್ಮ ಜೀವನ ರೂಪಿಸಿದ ತಾಯಿಯ ನೆನಪಿನಲ್ಲಿ ಆಕೆಯ ಮಕ್ಕಳು ಸೇರಿಕೊಂಡು ಪಿರಾಮಿಡ್ ಮಾದರಿಯಲ್ಲಿ ಅಮ್ಮನ ಮಂದಿರ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಅಮ್ಮನ ಮಂದಿರ ನಿರ್ಮಾಣವಾಗಿರುವುದು ಬಸವ ನಾಡು ವಿಜಯಪುರ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ. ವಿಜಯಪುರ […]