Syllabus Issue: ಪಠ್ಯಪುಸ್ತಕ ಸಮಿತಿ ರದ್ದುಪಡಿಸಲು ಆಗ್ರಹಿಸಿ ಬಸವಣ್ಣನವರ ಜನ್ಮಸ್ಥಳದಲ್ಲಿ ಪ್ರತಿಭಟನೆ

ವಿಜಯಪುರ: ಒಂಬತ್ತನೇ ತರಗತಿಯ(Ninth Standard) ಪಠ್ಯದಲ್ಲಿ(Syllabus) ಅಣ್ಣ ಬಸವಣ್ಣನವರನ್ನು(Anna Basavanna) ವೈದಿಕ ಗೊಳಿಸಲಾಗಿದೆ ಎಂದು ಆರೋಪಿಸಿ ಮತ್ತು ಪಠ್ಯಪುಸ್ತಕ ಸಮಿತಿ ರದ್ದು(Cancel) ಮಾಡುವಂತೆ ಒತ್ತಾಯಿಸಿ ಬಸವಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ(Basavanadu Bagewadi) ಪ್ರತಿಭಟನೆ ನಡೆಸಲಾಯಿತು.

ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಂಕರಗೌಡ ಬಿರಾದಾರ ಮಾತನಾಡಿದರು.

ಬಸವಣ್ಣನವರನ್ನು ವೀರಶೈವರನ್ನಾಗಿ ಚಿತ್ರಿಸಿದ್ದು ಖಂಡನೀಯ. ಬಸವಣ್ಣನವರು ವೈದಿಕ ಧರ್ಮವನ್ನು ಧಿಕ್ಕರಿಸಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದು ಜಗಜ್ಜಾಹಿರವಾಗಿದೆ. ಆದರೆ ಇದೀಗ ಮುದ್ರಣವಾಗಿರಿವ 9ನೇ ತರಗತಿಯ ಪಠ್ಯದಲ್ಲಿ ಬಸವಣ್ಣನವರು ಸಂಸ್ಕೃತ ಮತ್ತು ಕನ್ನಡ ಕಲಿತು ತಮ್ಮ ಉಪನಯನವಾದ ನಂತರ ಕೂಡಲ ಸಂಗಮಕ್ಕೆ ತೆರಳಿ ಅಲ್ಲಿ ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆಯನ್ನು ಪಡೆದು ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ಪ್ರಕಟಿಸಿರುವುದು ದುರದೃಷ್ಟಕರ. ಕೂಡಲೇ ಪಠ್ಯಪುಸ್ತಕವನ್ನು ಸರಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿಶ್ವಗುರು ಬಸವಣ್ಣನವರು ವೈದಿಕ ಧರ್ಮವನ್ನು ದಿಕ್ಕರಿಸಿದ್ದರು. ಬಸವಣ್ಣನವರಿಗೆ ಯಾರೂ ಗುರುಗಳಿಲ್ಲ. ಅರಿವೇ ಗುರು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಉಪನಯನವನ್ನು ಕೂಡ ಮಾಡಿಕೊಳ್ಳದೆ ಕೂಡಲ ಸಂಗಮಕ್ಕೆ ತೆರಳುತ್ತಾರೆ. ಉಪನಯನ ಮಾಡುವುದಾದರೆ ನನಗೂ ಮತ್ತು ನನ್ನ ಅಕ್ಕ ಅಕ್ಕನಾಗಮ್ಮನ ಅವರಿಗೂ ಕೂಡ ಮಾಡಿ ಎಂದು ವೈದಿಕ ಧರ್ಮವನ್ನು ವಿರೋಧಿಸಿ ಕೂಡಲ ಸಂಗಮಕ್ಕೆ ತೆರಳಿದ್ದರು. ಇದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಈ ಪಠ್ಯಪುಸ್ತಕದಲ್ಲಿ ಪ್ರಕಟವಾದ ವಿಷಯದಲ್ಲಿ ಬಸವತತ್ವ ಮತ್ತು ಬಸವ ಧರ್ಮಕ್ಕೆ ಅಪಚಾರ ಎಸಗಲಾಗಿದೆ. ಕೂಡಲೇ ರಾಜ್ಯದಲ್ಲಿರುವ ಬಸವ ಭಕ್ತರು ಎಚ್ಚರಗೊಂಡು ಈ ಪಠ್ಯಪುಸ್ತಕ ಸಮಿತಿಯ ವಿರುದ್ಧ ಹೋರಾಟ ಮಾಡದೆ ಹೋದರೆ ನಮ್ಮ ಮಕ್ಕಳಿಗೆ ಇತಿಹಾಸವನ್ನು ತಿರುಚಿ ಬರೆದು ಏನೇನು ಕಲಿಸುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕೂಡಲೇ ರಾಜ್ಯ ಸರಕಾರ ಪುಸ್ತಕ ಸಮಿತಿಯನ್ನು ರದ್ದು ಪಡಿಸಬೇಕು. ಮುದ್ರಣಗೊಂಡ ಪಠ್ಯಪುಸ್ತಕಗಳನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಸವ ಭಕ್ತರು ಆಕ್ರೋಶಗೊಂಡು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶಂಕರಗೌಡ ಬಿರಾದಾರ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಹಸೀಲ್ದಾರ ವಿಜಯಕುಮಾರ ಕಡಕೋಳ ಅವರಿಗೆ ಬಸವ ಸೈನ್ಯದ ಮುಖಂಡ ಮನ್ಬಾನ ಶಾಬಾದಿ ಮನವಿ ಪತ್ರ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯದ ರಾಷ್ಟ್ರೀಯ ಉಪಾಧ್ಯಕ್ಷರಾದ ಸುನಿಲ ಚಿಕ್ಕೊಂಡ, ನಿಂಗಪ್ಪ ಅವಟಿ, ಜಟ್ಟಿಂಗರಾಯ ಮಾಲಗಾರ, ಪ್ರಶಾಂತ ಮುಂಜಾನೆ, ಮಲ್ಲು ಬನಾಸಿ, ಮಹಾಂತೇಶ ಹೆಬ್ಬಾಳ, ರಾಮನಗೌಡ ಚಿಕ್ಕೊಂಡ, ಮಾಂತೇಶ ಹಾರಿವಾಳ, ಬಸನಗೌಡ ಬಿರಾದಾರ, ಸಂದೀಪ ಕೋಟ್ಯಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

ಹೊಸ ಪೋಸ್ಟ್‌