Syllabus Warn: ಪಠ್ಯಪುಸ್ತಕ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಬಸವಣ್ಣ ಸರ್ಕಲ್ ನಲ್ಲಿ ಉಳಿಯಬೇಕಾಗುತ್ತದೆ- ಡಾ ಮಹಾಂತೇಶ ಬಿರಾದಾರ ಎಚ್ಚರಿಕೆ

ವಿಜಯಪುರ: ಕನ್ನಡದ(Kannada) ಸಾಕ್ಷಿ ಪ್ರಜ್ಞೆಯ ಪ್ರತೀಕದಂತಿರುವ ಬಸವಣ್ಣ(Baavanna), ಕುವೆಂಪುರವರು(Kuvempu) ನೀಡಿದ ಪರಂಪರೆಯನ್ನು(Traditon) ಒಡೆಯುವ ಪ್ರಯತ್ನಗಳನ್ನು ಕೇಶವ ಕೃಪಾ ಪೋಷಿತ ಮಂಡಳಿ ನಡೆಸುತ್ತಿದ್ದಾರೆ ಎಂದು ಚಿಂತಕ ಡಾ. ಮಹಾಂತೇಶ ಬಿರಾದಾರ(Dr Mahantesh Biradar) ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಸವಣ್ಣ ಮತ್ತು ಕುವೆಂಪು ಅವರು ನೀಡಿದ ಪರಂಪರೆಯನ್ನು ಒಡೆಯುವುದಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ.  ವಿಶ್ವಮಾನವ ಕುವೆಂಪು ಇಂದು ಒಕ್ಕಲಿಗೆ ಜನಾಂಗಕ್ಕೆ ಸೀಮಿತವಾಗಿರುವುದು ಇಡೀ ಮನುಕುಲಕ್ಕೆ ನಾಚಿಕೆಗೇಡು.  ಆದರೂ ಆ ಸಮುದಾಯದ ಆದಿಚುಂಚನಗಿರಿ ಮಠಾಧೀಶರು ಪ್ರಥಮ ಬಾರಿಗೆ ಧ್ವನಿ ಎತ್ತಿದ್ದಾರೆ.  ಅವರ ಧ್ವನಿಗೆ ಎಷ್ಟು ಶಕ್ತಿ ಇದೆ ಎಂದರೆ ಶಿಕ್ಷಣ ಮಂತ್ರಿ ನಾಗೇಶ ಅವರು ಮಠಕ್ಕೆ ಹೋಗಿ, ನಿಂತುಕೊಂಡೆ ಸಬೂಬು ನೀಡಿ ಬಂದಿದ್ದಾರೆ.  ಕನಿಷ್ಠ ಕುವೆಂಪುರವರಿಗೆ ಅಷ್ಟಾದರೂ ಮರ್ಯಾದೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಇನ್ನು ಬಸವಣ್ಣನವರನ್ನು ಕೇಳುವವರೇ ಇಲ್ಲ.  ಬಸವತತ್ವ ಪ್ರಚಾರ ಮಾಡಲು  ನಾಡಿನಲ್ಲಿ ಸ್ಥಾಪಿತವಾಗಿರುವ ವಿರಕ್ತಮಠಗಳ ಪೂಜ್ಯರೆಲೢರೂ ಇನ್ನೂ ಬೆಳಗಿನ ಪೂಜೆಯಲ್ಲಿ ಇದ್ದಾರೆ.  ಪ್ರಸಾದವಾದ ನಂತರವಷ್ಟೇ ಮುಂದಿನ ಮಾತು.  ಆದರೂ ಸಾಣೆಹಳ್ಳಿಯ ಕೂಡಲಸಂಗಮದ ಶ್ರೀಗಳು ಧ್ವನಿ ಎತ್ತಿದ್ದಾರೆ.  ಇದು ನಾಡಿನುದ್ದಕ್ಕೂ ಪ್ರತಿಧ್ವನಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆ ಪ್ರತಿಧ್ವನಿಗೆ ಮಣಿದರೆ, ವಿಚಾರವಾದಿ ಎಂ. ಎನ್. ರಾಯ್ ಅವರ ತತ್ತ್ವ ಸಿದ್ಧಾಂತಗಳ ಪ್ರತಿಪಾದಕರಾಗಿದ್ದ ಕರ್ನಾಟಕದಲ್ಲಿ ರಾಯ್ ಅವರ ಕಟ್ಟಾ ಅನುಯಾಯಿಯಾಗಿದ್ದ ಎಸ್. ಆರ್. ಬೊಮ್ಮಾಯಿ ಅವರ ಸುಪುತ್ರ ಬಸವರಾಜ ಬೊಮ್ಮಾಯಿ ಅವರು ಬಸವಣ್ಣನವರ ಹೆಸರು ಇಟ್ಟುಕೊಂಡದ್ದಕ್ಕೂ ಸಾರ್ಥಕ.  ಇಲ್ಲದಿದ್ದರೆ ಬಸವಣ್ಣ ಸರ್ಕಲ್ ನಲ್ಲಿ ಉಳಿಯುತ್ತಾನೆ ಎಂದು ಡಾ. ಮಹಾಂತೇಶ ಬಿರಾದಾರ ಎಚ್ಚರಿಕೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌