ವಿಜಯಪುರ: ಹಲವಾರು ಕೆಲಸ(Several Works) ಕಾರ್ಯಗಳ ಒತ್ತಡದ(Duty Pressure) ಮಧ್ಯೆಯೂ ವಿಜಯಪುರ ಜಿ. ಪಂ.(Vijayaura Zilla Panchayat) ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ(Chief Executive Officer) ರಾಹುಲ ಶಿಂಧೆ(Rahul Shindhe) ಅವರು ವಿಶೇಷ ಚೇತನ ಮಕ್ಕಳಿರುವ ಸಂಸ್ಥೆಯೊಂದಕ್ಕೆ ಭೇಟಿ ನೀಡಿ, ಅವರೊಂದಿಗೆ ಬೆರೆತು ಕೆಲಕಾಲ ಕಳೆದರು.
ವಿಜಯಪುರ ನಗರದಲ್ಲಿರುವ ವಿಕಲ ಚೇತನರ ಪುನಶ್ಚೇತನ ಕೇಂದ್ರವಾದ ಶ್ರೀಮತಿ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಗೆ ಭೇಟಿ ನೀಡಿದ ಸಿಇಓ ಅವರು, ವಿಕಲ ಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಕೇಂದ್ರದ 2022-23ನೇ ವರ್ಷದ ಸಂಸ್ಥೆಯ ಪ್ರಾರಂಭೋತ್ಸಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಸಂಸ್ಥೆಯು ವಿಶೇಷಚೇತನ ಮಕ್ಕಳಿಗೆ ಒದಗಿಸುತ್ತಿರುವ ವಿಶೇಷ ಮೂಲಭೂತ ಸೌಲಭ್ಯಗಳ ಬಗ್ಗೆ ತಿಳಿದು, ಆ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕಂಡು ಸಿಇಓ ಅವರು ಹರ್ಷ ವ್ಯಕ್ತಪಡಿಸಿದರು.
ವಿಕಲಚೇತನ ಮಕ್ಕಳು ಪ್ರಸಕ್ತ ಸಾಲಿನ ಶಿಕ್ಷಣವನ್ನು ಸಹ ಅತ್ಯಂತ ಉತ್ಸಾಹದಿಂದ ಕಲಿಯಲು ಪ್ರೋತ್ಸಾಹಿಸಿ, ಅವರಿಗೆ ಶುಭಾಶಯಗಳನ್ನು ತಿಳಿಸಿದರು.
ಉತ್ತಮ ಅವಕಾಶ: ಈ ವೇಳೆ ಮಾತನಾಡಿದ ರಾಹುಲ ಶಿಂಧೆ, ವಿಕಲ ಚೇತನರ ಪುನಶ್ಚೇತನ ಕೇಂದ್ರವೊಂದು ವಿಜಯಪುರದಲ್ಲಿರುವುದು ಒಂದು ಉತ್ತಮ ಅವಕಾಶವಾಗಿದೆ. ವಿಕಲ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮಾಡುವಲ್ಲಿ ಇದನ್ನು ಉಪಯೋಗಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಸಂಸ್ಥೆಯಲ್ಲಿರುವ ಮಕ್ಕಳಿಗೆ ನಿಯಮಾನುಸಾರ ಸರಕಾರದಿಂದ ಬರುವ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಸಿಬ್ಬಂದಿಗೆ ಸಲಹೆ
ಈ ಸಂಸ್ಥೆಯಲ್ಲಿ ಪ್ರತಿನಿತ್ಯ ಮಕ್ಕಳಿಗೆ ದೈಹಿಕ ವ್ಯಾಯಾಮ ಹಾಗೂ ಮಾನಸಿಕವಾಗಿ ಮಕ್ಕಳನ್ನು ಸದೃಢಗೊಳಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಸಂಸ್ಥೆಯ ಸಿಬ್ಬಂದಿಯವರಿಗೆ ಇದೆ ವೇಳೆ ಸಿಇಓ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಪ್ರಶಾಂತ ಎಸ್. ದೇಶಪಾಂಡೆ, ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷ ಅಜಿತ ಕುಲಕರ್ಣಿ, ಸಂಸ್ಥೆಯ ಮುಖ್ಯ ಗುರುಗಳಾದ ಕವಿತಾ ಗದ್ವಾಲ, ಸಂಸ್ಥೆಯ ದೈಹಿಕ ಶಿಕ್ಷರ ಅಶ್ವಿನಿ ಬುರಾಣಪುರ ಮುಂತಾದವರು ಉಪಸ್ಥಿತರಿದ್ದರು.