ವಿಜಯಪುರ: ಕಲ್ಯಾಣ(Kalyan) ಕರ್ನಾಟಕ(Karnataka) ರಸ್ತೆ(Road) ಸಾರಿಗೆ(Transport) ನಿಗಮ(Corporation) ವಿಜಯಪುರ ವಿಭಾಗದ ವಿವಿಧ ಘಟಕಗಳಿಂದ ಒಟ್ಟು 49 ಜನ ಸಿಬ್ಬಂದಿಯು ವಯೋ ನಿವೃತ್ತಿ ಹೊಂದಿದರು.
ಅಲ್ತಾಫಅಹ್ಮದ್ ಮೊಹಮ್ಮದಗೌಸ ಜಹಾಗೀರದಾರ, ಯುನೂಸ್ ಹುಸೇನಬಾಷಾ ರಿಸಾಲದಾರ, ಬಸೀರಅಹಮದ್ ಕಾಸೀಮಸಾಬ ಮುರಾಳ, ತುಕಾರಾಮ ಸಿದ್ಲೆಪ್ಪ ಮಮದಾಪೂರ, ಯಮನಪ್ಪಾ ಲಚ್ಚಪ್ಪಾ ತಳವಾರ, ಶ್ರೀಶೈಲ ಸಿದ್ದಪ್ಪಾ ಕಮ್ಮಾರ, ರವೀಂದ್ರ ದುಂಡಪ್ಪ ಶಾಪೇಟಿ, ಬಾಬು ಗುಜ್ಜು ರಾಠೋಡ, ಅಶೋಕ ಶಂಕರರಾವ್ ಲಾಟ್ನೆ, ಸಿದ್ರಾಮಯ್ಯಾ ಮಹಾದೇವಯ್ಯಾ ಮಠ, ಶಿವಣ್ಣಾ ಹಾವಪ್ಪ ಹದರಿ, ನಿಂಗಪ್ಪಾ ಚನ್ನಮಲ್ಲಪ್ಪ ಕಾಗವಾಡ, ಶ್ರೀಶೈಲ ಭೋಜಪ್ಪಾ ತಳವಾರ, ಇಮಾಮಹುಸೇನ ಸುಲ್ತಾನಸಾಬ ಮಾಣಿಕ, ಹುಸೇನಬಾಷಾ ಅಲ್ಲಾವುದ್ದೀನ ಜಮಾದಾರ, ಶರಣಪ್ಪಾ ನೀಲಪ್ಪಾ ಅಥಣಿ, ಬಾಬು ನರಸಿಂಗ ಚವ್ಹಾಣ, ಶಫೀಅಹಮದ್ ಗೈಬಿಸಾ ಬಳಗಾರ, ಶಮಶುದ್ದಿನ ಹಾಸೀಮಶಾ ಉಸ್ತಾದ, ಮಲ್ಲನಗೌಡ ಬಸನಗೌಡ ಪಾಟೀಲ, ರಮೇಶ ನಾಗಪ್ಪ ಬಡಿಗೇರ, ಭೀಮರಾಯ್ ಕಲ್ಲಪ್ಪಾ ಜಿಗಜಿಣಗಿ, ವಿರೂಪಾಕ್ಷಪ್ಪಾ ರಾಚೋಟೆಪ್ಪಾ ಪಟ್ಟಣಶೆಟ್ಟಿ, ಅರವಿಂದ ಗಂಗಪ್ಪ ಅಂಗಡಿ, ನಂದಬಸಪ್ಪ ನಾಗಪ್ಪ ಕೋಲಾರ, ಸುರೇಂದ್ರ ಯಶವಂತ ಜಾಮದಾರ, ಮಲ್ಲಪ್ಪ ಶಿವಲಿಂಗಪ್ಪ ಚಾವರ, ಲಕ್ಷ್ಮಣ ಹುಸನಪ್ಪ ಹರಿಜನ, ಶೌಕತಲಿ ಮಹೆಬೂಬಸಾಬ ಮಾಶ್ಯಾಳಕರ, ಮಲ್ಲಪ್ಪಾ ಭೀಮರಾಯ ಹರವಾಳ ಮತ್ತು ಶಿವಪ್ಪಾ ಹಣಮಪ್ಪಾ ಭೋವೇರ ಎಂಬುವರು ವಯೋನಿವೃತ್ತಿಹೊಂದಿದ ಸಿಬ್ಬಂದಿ.
ಈ ಸಿಬ್ಬಂದಿಗೆ ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪ ವಿಜಯಪುರದಲ್ಲಿ ಬಿಳ್ಕೋಡುಗೆ ಸಮಾರಂಭ ಮೇ 31ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕಕರಸಾ ನಿಗಮ ಕೇಂದ್ರ ಕಚೇರಿ ಕಲಬುರಗಿಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾದ ಕೆ.ಎಂ.ಅಶ್ರಪ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾನ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಎಸ್.ಪುಲೇಕರ ಹಾಗೂ ವಿಭಾಗದ ಎಲ್ಲ ಅಧಿಕಾರಿಗಳು, ಕಾರ್ಮಿಕ ಸಂಘಟನೆಯ ಮುಖಂಡರು, ವಿಭಾಗದ ಎಲ್ಲ ಸಿಬ್ಬಂದಿ ವರ್ಗದವರು, ನಿವೃತ್ತ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರು ಹಾಜರಿದ್ದರು.