Handicap Unique Card: ಬಸವನ ಬಾಗೇವಾಡಿಯಲ್ಲಿ 2ನೇ ದಿನ 174 ಜನರಿಗೆ ಗುರುತಿನ ಚೀಟಿ ವಿತರಣೆ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ(Basavana Bagewadi) ತಾಲೂಕಾಸ್ಪತ್ರೆಯಲ್ಲಿ(Taluku Hospital) ನಡೆದ ವಿಕಲ ಚೇತನರಿಗೆ(Handicap) ವಿಶಿಷ್ಠ ಗುರುತಿನ ಚೀಟಿ(Unique Identity Card) ನೀಡುವ ಶಿಬಿರದಲ್ಲಿ 174 ಜನ ವಿಕಲಚೇತನರು ತಪಾಸಣೆಗೊಳಪಟ್ಟು(Check Up) ಸೌಲಭ್ಯ ಪಡೆದರು. ಶ್ರವಣದೋಷವುಳ್ಳ ವಿಕಲಚೇತನರನ್ನು ಹೊರತುಪಡಿಸಿ ಇನ್ನುಳಿದ ದೈಹಿಕ, ಬೌದ್ಧಿಕ ವಿಕಲತೆ, ಮಾನಸಿಕ ಅಸ್ವಸ್ಥರು, ದೃಷ್ಟಿ ದೋಷವುಳ್ಳ ವಿಕಲಚೇತನರು ವಿಶೇಷ ತಪಾಸಣೆಗೊಳಪಟ್ಟು ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ಪಡೆದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳಾದ ಆಶು ನದಾಫ್, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಶಾಬೀರ್ ಪಟೇಲ್ ಹಾಗೂ ಇತರರು ಉಪಸ್ಥಿತರಿದ್ದರು.

ಜೂನ್ 9ರಿಂದ ಮುದ್ದೆಬಿಹಾಳದಲ್ಲಿ ಶಿಬಿರ: ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಬ್ಬ ಅರ್ಹ ವಿಕಲಚೇತನ ಫಲಾನುಭವಿಗೆ ಗುರುತಿನ ಚೀಟಿ ನೀಡುವ ಶಿಬಿರವು ಜಿಲ್ಲಾ ಪಂಚಾಯತ್ ಮತ್ತು ವಿವಿಧ ಇಲಾಖೆಗಳ ಮೂಲಕ ಆಂದೋಲನ ಮಾದರಿಯಲ್ಲಿ ನಡೆಯುತ್ತಿದೆ. ಜೂನ್ 9 ಮತ್ತು ಜೂನ್ 10ರಂದು ಎರಡು ದಿನಗಳ ಕಾಲ ಶಿಬಿರವು ಮುದ್ದೆಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ನಡೆಯಲಿದೆ. ಶಿಬಿರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದು ಹೋಗಲು ಗ್ರಾಮ ಪಂಚಾಯತಿಗಳಿಂದ ವಾಹನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮುದ್ದಿಬಿಹಾಳ ತಾಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌