Homeopathy Election: ಡಾ. ಅರುಣ ಹೂಲಿ ಗುಂಪಿಗೆ ಭರ್ಜರಿ ಗೆಲುವು

ಬೆಂಗಳೂರು: ಕರ್ನಾಟಕ(Karnataka) ಹೋಮಿಯೋಪಥಿ(Homeopathy) ಮಂಡಳಿಗೆ(Council) ನಡೆದ ಚುನಾವಣೆಯಲ್ಲಿ(Election) ಡಾ. ಅರುಣ ಹೂಲಿ(Dr Arun Hooli) ಅವರ ಗುಂಪು ಭರ್ಜರಿ ಗೆಲುವು ಸಾಧಿಸಿದೆ.

ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಡಾ. ಅರುಣ ಹೂಲಿ ಅವರ ಗುಂಪು ಎಲ್ಲ ಆರು ಸದಸ್ಯ ಸ್ಥಾನಗಳನ್ನು ಗೆದ್ದು ವಿಜಯ ಪತಾಕೆ ಹಾರಿಸಿದೆ.

ಈ ಚುನಾವಣೆಯಲ್ಲಿ ಬದಲಾವಣೆ ಮತ್ರು ಅಭಿವೃದ್ದಿ ಬಯಸಿ ಎಎಫ್ಆಯ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಲಬಿಸಿದೆ.

ಕರ್ನಾಟಕ ಹೋಮಿಯೋಪಥಿಕ ಮಂಡಳಿ ಚುನಾವಣೆ ಫಲಿತಾಂಶ

ಡಾ. ಅರುಣ ಹೂಲಿ ಬಾಗಲಕೋಟೆಯ ಬಿವಿವಿಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿದ್ದಾರೆ. ಇವರ ಸಾರಥ್ಯದಲ್ಲಿ ಎಲ್ಲ ಆರೂ ಸ್ಥಾನಗಳನ್ನು ಗೆಲ್ಲುವ ಮೂಲಕ‌ ಇವರ ಬಣ ಮೇಲುಗೈ ಸಾಧಿಸಿದೆ. ಈ ತಂಡದಲ್ಲಿ ಡಾ. ಜೊತೀಶ ಖೋತ, ಡಾ. ವೀರಭ್ರಹ್ಮ, ಡಾ. ಪ್ರವೀಣ, ಡಾ. ಸಂದೀಪ, ಡಾ. ಮೊಹಮ್ಮದ ಮುನಾವರ ಬೋಡೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಡಾ. ಅರುಣ ಹೂಲಿ ನೇತೃತ್ವದ ತಂಡಕ್ಕೆ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ‌ ಸಂಘದ ಕಾರ್ಯಾದ್ಯಕ್ಷ ಡಾ. ವೀರಣ್ಣಾ ಚರಂತಿಮಠ, ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಬವಿವಿ ಸಂಘದ ಎಲ್ಲ ಪದಾಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಕಾಲೇಜನ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌