World Cycle Day: ಸೈಕಲ್ ಬಳಕೆಯಿಂದ ದೇಹ, ದೇಶ ಎರಡಕ್ಕೂ ಉಪಯೋಗ- ಎಸ್ಪಿ ಎಚ್. ಡಿ. ಆನಂದ ಕುಮಾರ

ವಿಜಯಪುರ: ಸೈಕಲ್(Cycle) ಬಳಕೆಯಿಂದ(Use) ದೇಹಕ್ಕೆ(Body), ದೇಶಕ್ಕೆ(Nation) ಎರಡಕ್ಕೂ ಉಪಯೋಗವಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ(H D An and Kumar) ಹೇಳಿದ್ದಾರೆ.

ವಿಶ್ವ ಸೈಕಲ್ ದಿನಾಚರಣೆಗೆ ಎಸ್ಪಿ ಎಚ್. ಡಿ. ಆನಂದ ಕುಮಾರ ಚಾಲನೆ ನೀಡಿದರು

 

ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಬಿ ಎಲ್ ಡಿ‌ ಇ ಸಂಸ್ಥೆಯ ಮುಖ್ಯದ್ವಾರದಲ್ಲಿ, ವಿಜಯಪುರ ಸೈಕ್ಲಿಂಗ್ ಗ್ರುಪ್ ಏರ್ಪಡಿಸಿದ್ದ ಸೈಕಲ್ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗನಿಂದ ವಿಕಾಸವಾದ ಮಾನವ ತನ್ನ ವಿಕಾಸದ ಪ್ರಕ್ರಿಯೆಯಲ್ಲಿ ವಾಹನ ಬಳಕೆಗೆ ಮುಂದಾದಾಗ ಮೊದಲು ಕಂಡು ಹಿಡಿದದ್ದು ಸೈಕಲ್. ಸೈಕಲಿನಿಂದ ಆರಂಭವಾದ ವಾಹನಗಳ ವಿಕಾಸ ಅಂತರಿಕ್ಷಯಾನದವರೆಗೂ ಮುಂದುವರೆದಿದೆ. ಆದರೆ ಸೈಕಲ್ ಬಳಕೆಯಿಂದ ದೇಹಕ್ಕೆ ಉತ್ತಮ ಆರೋಗ್ಯ ದೊರೆಯುತ್ತದೆ. ಅಲ್ಲದೆ, ದೇಶಕ್ಕೆ ಆರ್ಥಿಕ ಉಳಿತಾಯದ ಜೊತೆಗೆ ಶುದ್ಧ ಪರಿಸರ ದೊರೆಯುತ್ತದೆ ಎಂದು ಹೇಳಿದರು.

ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ವಿಜಯಪುರ ಸೈಕ್ಲಿಂಗ್ ಗ್ರುಪ್ ತನ್ನ ಕ್ರೀಯಾಶೀಲ ಚಟುವಟಿಕೆಗಳಿಂದ ಗಮನ ಸೆಳೆದಿದೆ. ಕೇವಲ ಸೈಕ್ಲಿಂಗ್ ಅಲ್ಲದೇ ನಾನಾ ಕ್ರೀಡೆ, ಕಲೆಗಳು, ಸಾಹಿತ್ಯ, ಸಂಗೀತ, ಪರಿಸರ ಪ್ರೇಮ ಸೇರಿದಂತೆ ಹಲವು ಬಗೆಗಳಲ್ಲಿ ಇಲ್ಲಿನ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದೈಹಿಕ ಆರೋಗ್ಯದ ಜೊತೆಗೆ ಪೂರಕ ಚಟುವಟಿಕೆಗಳು ಅಗತ್ಯ. ಮುಂದಿನ ದಿನಗಳಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿವಿ ಆವರಣ, ವಾಹನ ಮುಕ್ತ ಪರಿಸರ ಸ್ನೇಹಿ ಕ್ಯಾಂಪಸ್ ಮಾಡಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು.

ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಮೂರು ವರ್ಷಗಳ ಹಿಂದೆ ವಿಜಯಪುರದಲ್ಲಿ ಗೆಳೆಯರೊಂದಿಗೆ ಸೈಕಲ್ ತುಳಿಯಲು ಆರಂಭಿಸಿದಾಗ ಜನರು ನಮ್ಮನ್ನು ಪ್ರೋತ್ಸಾಹಿಸಿದರು. ಸಂಘದ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಗಮನಿಸಿದ ಜನರು ಜಿಲ್ಲೆಯ ನಾನಾ ಕಡೆ ಇಂದು ಸೈಕಲ್ ತುಳಿಯುತ್ತಿದ್ದಾರೆ. 10 ವರ್ಷದ ಬಾಲಕನಿಂದ ಹಿಡಿದು 80 ವರ್ಷದ ಹಿರಿಯರು ಈ ಸೈಕ್ಲಿಂಗ್ ಗ್ರುಪ್‍ನಲ್ಲಿದ್ದಾರೆ. ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಕಷ್ಟ-ಸುಖದಲ್ಲಿ ಜೊತೆಯಾಗುತ್ತೇವೆ. ಇದು ಜೀವನದಲ್ಲಿ ಬಹಳ ಖುಷಿ ನೀಡುತ್ತದೆ ಎಂದು ಹೇಳಿದರು.

ಸೆಂಟ್ರಲ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ 82 ವರ್ಷದ ಧನಶೆಟ್ಟಿ ನಿತ್ಯ ಸೈಕಲ್ ಮೇಲೆ ನನ್ನ ಸಂಚಾರ. ಇದರಿಂದ ಈ ವಯಸ್ಸಿನಲ್ಲಿ ಫಿಟ್ ಆ್ಯಂಡ್ ಪೈನ್ ಆಗಿದ್ದೇನೆ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಸೋಮಶೇಖರ ಸ್ವಾಮಿ ಸ್ವಾಗತಿಸಿದರು. ಗುರುಶಾಂತ ಕಾಪಸೆ ನಿರೂಪಿಸಿದರು. ಉಪಾಧ್ಯಕ್ಷ ಶಿವನಗೌಡ ಪಾಟೀಲ, ಆರ್ ಕೆ‌ ಎಂ ಸಂಸ್ಥೆಯ ಶಂಭು ಕರ್ಪೂರಮಠ, ಡಾ. ರುದ್ರಗೌಡ, ಅಮೀತ ಬಿರಾದಾರ, ಸಂದೀಪ ಮಡಗೊಂಡ, ಸಂತೋಷ ಅವರಸಂಗ, ಸುರೇಶ ಘೋಣಸಗಿ, ವೀರೇಂದ್ರ ಗುಚ್ಚಟ್ಟಿ, ಸೋಮು ಮಠ, ಮುರುಗೇಶ ಪಟ್ಟಣಶೆಟ್ಟಿ, ಸಮೀರ ಬಳಗಾರ, ಮಹಾಂತೇಶ ಜಾನಮಟ್ಟಿ, ಆರ್ ಕೆ ಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಬಿ ಎಲ್ ಡಿ ಇ ಮುಖ್ಯದ್ವಾರದಿಂದ ಸೈಕಲ್ ತುಳಿಯುತ್ತ ಪರಿಸರ ರಕ್ಷಣೆ, ಸೈಕಲ್ ಬಳಕೆ ಘೋಷಣೆಗಳನ್ನು ಹಾಕುತ್ತ, ಸಿದ್ಧೇಶ್ವರ ದೇವಸ್ಥಾನ, ಗಾಂಧಿವೃತ್ತ, ಶಿವಾಜಿ ವೃತ್ತ, ಅಥಣಿ ರಸ್ತೆ, ರಿಂಗ್ ರಸ್ತೆ ಮೂಲಕ ಆರ್ ಕೆ ಎಂ ಕಾಲೇಜು ತಲುಪಿದರು.

Leave a Reply

ಹೊಸ ಪೋಸ್ಟ್‌