Shrishail Attacj: ಸುಕ್ಷೇತ್ರ ಶ್ರೀಶೈಲದಲ್ಲಿ ವಿಜಯಪುರ ಸರಕಾರಿ ಬಸ್ ಚಾಲಕನ ಮೇಲೆ ಹಲ್ಲೆ ಬಸ್ಸಿನ ಗಾಜು ಜಖಂ

ವಿಜಯಪುರ: ಯುಗಾದಿ(Ugadi) ಸಂದರ್ಭದಲ್ಲಿ(Time) ಕರ್ನಾಟಕದ(Karnataja)ನಾನಾ ವಾಹನಗಳು(Vehicles) ಮತ್ತು ಕನ್ನಡಿಗರ(Kanbadigas) ಮೇಲೆ ಹಲ್ಲೆ ನಡೆದಿದ್ದ ಆಂಧ್ರ ಪ್ರದೇಶದ ಶ್ರೀಶೈಲಂ ನಲ್ಲಿ ಮತ್ತೆ ಇಂಥದ್ದೆ ಘಟನೆ ನಡೆದಿದೆ.

ಗಾಯಗೊಂಡಿರುವ ಚಾಲಕ

ಶ್ರೀಶೈಲಂ ನಲ್ಲಿ ಮೊಕ್ಕಾಂ ಗೆ ತೆರಳಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರಕ್ಕೆ ಸೇರಿದ ಬಸ್ಸಿನ ಮೇಲೆ ರಾತ್ರಿ ವೇಳೆ ಕಲ್ಲು ತೂರಿರುವ ದುಷ್ಕರ್ಮಿಗಳು ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಇವರು ಗಾಯಗೊಂಡಿದ್ದಾರೆ.

ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಜನರ ಆರಾಧ್ಯ ದೈವವಾಗಿದ್ದು, ಅಲ್ಲಿಗೆ ಕರ್ನಾಟಕದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ವಿಜಯಪುರ ಡಿಪೊಗೆ ಸೇರಿದ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಬಸ್ಸಿನ ಗಾಜುಗಳು ಪುಡಿಪುಡಿಯಾಗಿವೆ. ಇದೇ ವೇಳೆ ಕಿಟಕಿ ಗಾಜು ಒಡೆದು ಚಾಲಕ ಮತ್ತು ನಿರ್ವಾಹಕನ ಮೇಲೂ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಬಸ್ಸಿನ ಚಾಲಕ ಬಸವರಾಜ ಬಿರಾದಾರ ಮೇಲೆ ಹಲ್ಲೆ ನಡೆಸಲಾಗಿದೆ.

ಜೂನ್ 2 ರಂದು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಆ ದಿನ ರಾತ್ರಿ ಶ್ರೀಶೈಲದಲ್ಲಿ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿದ್ದ ಚಾಲಕ ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದಾಗ ಏಕಾಏಕಿ ಬಂದ ಪುಂಡರ ಗುಂಪು ಈ ಹಲ್ಲೆ ನಡೆಸಿದೆ. ಅಲ್ಲದೇ, ಕನ್ನಡಿಗರ ಬಗ್ಗೆಯೂ ಅಶ್ಲೀಲವಾಗಿ ಬೈದು ದುಂಡಾವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆ ನಡೆಸಿದ ಗುಂಪಿನಲ್ಲಿ ಸುಮಾರು 10 ರಿಂದ 12 ಜನ ಪುಂಡರು ಇದ್ದರು.

 

ಈ ಘಟನೆಯಲ್ಲಿ ಚಾಲಕನ ಮುಖ ಮತ್ತು ಕಾಲಿಗೆ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಚಾಲಕ ಬಸವರಾಜ ಬಿರಾದಾರ ಚೀರಾಟ ಕೇಳಿ ಇತರೆ ಬಸ್ಸುಗಳ ಚಾಲಕರು ಹಾಗೂ ನಿರ್ವಾಹಕರು ಓಡಿ ಬಂದಿದ್ದಾರೆ. ಇತರರು ಓಡಿ ಬರುವುದನ್ನು ಗಮನಿಸಿದ ಪುಂಡರ ಗುಂಪು ಅಲ್ಲಿಂದ ಕಾಲಿಗೆ ಬುದ್ದಿ ಹೇಳಿ ಓಡಿ ಪರಾರಿಯಾಗಿದ್ದಾರೆ.

ಈ ಕುರಿತು ಶ್ರೀಶೈಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಯುಗಾದಿ ಸಂದರ್ಭದಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಮಾರ್ಚ 31 ರಂದು ನಡೆದ ಈ ಘಟನೆಯಲ್ಲಿ ಶ್ರೀಶೈಲದಲ್ಲಿ ಕರ್ನಾಟಕದ ನಾನಾ ವಾಹನಗಳು ಮತ್ತು ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿಯೂ ಅನೇಕ ಕನ್ನಡಿಗರು ಗಾಯಗೊಂಡಿದ್ದು, ಹಲವಾರು ವಾಹನಗಳು ಜಖಂ ಗೊಂಡಿದ್ದವು. ಗಾಜು ಒಡೆದು ಹಾಕಲಾಗಿತ್ತು
ಇದೀಗ ಮತ್ತೇ ಕ್ಯಾತೆ ತೆಗೆದು ಈ ಕೃತ್ಯ ನಡೆಸಲಾಗಿದೆ. ಮಾರ್ಚ್ 31 ರ ಘಟನೆ ಮಾಸುವ ಮುಂಚೆಯೇ ಮತ್ತೊಂದು ಮಾರಣಾಂತಿಕ ಹಲ್ಲೆಯ ಘಟನೆ ನಡೆದಿರುವುದು ಶ್ರೀಶೈಲದಲ್ಲಿ ಕನ್ನಡಿಗರಿಗೆ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ. ಇದು ಉದ್ದೇಶಪೂರಕವಾಗಿ ನಡೆದಿರುವ ಹಲ್ಲೆ ಎಂದೇ ಕನ್ನಡಿಗರು ಆರೋಪಿಸಿದ್ದಾರೆ.

Leave a Reply

ಹೊಸ ಪೋಸ್ಟ್‌