MLC Election: ಬಿಜೆಪಿ ಶಿಕ್ಷಣ ಕ್ಷೇತ್ರ, ಪದವೀಧರರಿಗಾಗಿ ಮಾಡಿರುವ ಕೆಲಸಗಳನ್ನು ಮತದಾರರಿಗೆ ತಿಳಿಸಿ- ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ

ವಿಜಯಪುರ: ಬಿಜೆಪಿ(BJP) ಶಿಕ್ಷಣ ಕ್ಷೇತ್ರ(Education) ಮತ್ತು ಪದವೀಧರರ(Graduates) ಹಿತಕ್ಕಾಗಿ(Welfare) ಕೈಗೊಂಡಿರುವ ಕೆಲಸಗಳನ್ನು ಮತಾದರರಿಗೆ(Voters) ತಲುಪಿಸುವ ಕೆಲಸ ಮಾಡಬೇಕು ಎೞದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ(Arunkumar) ಹೇಳಿದ್ದಾರೆ.

ವಿಜಯಪುರ ನಗರದ ಗುರುದತ ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆಗೆ ಹಿನ್ನೆಲೆಯಲ್ಲಿ ನಡೆದ ಘಟನಾಯಕರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಘಟನಾಯಕರ ಸಭೆಯಲ್ಲಿ ಅರುಣಕುಮಾರ ಮಾತನಾಡಿದರು

ಬಿಜೆಪಿ ಸರಕಾರ ಮಾಡಿರುವ ಜನಪರ ಕೆಲಸ ಕಾರ್ಯಗಳನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು.  ಮತದಾನದ ದಿನಾಂಕ ಮತ್ತು ಚುನಾವಣೆ ಪ್ರಕ್ರಿಯೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಬೇಕು.  ಜೊತೆಗೆ ಅಭ್ಯರ್ಥಿಗಳು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು.  ಪ್ರತಿಯೊದಂದು ಭೂತಗಳಲ್ಲಿ ಶೇ. 80 ರಷ್ಟು ಮತಗಳು ಬಿಜೆಪಿ ಅಭ್ಯರ್ಥಿಗೆ ಬರುವಂತೆ ಘಟನಾಯಕರು ಶ್ರಮಿಸಬೇಕು ಎಂದು ರವಿಕುಮಾರ ಹೇಳಿದರು.

ಈ ಸಂದರ್ಭದಲ್ಲಿ ವಾಯುವ್ಯ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಹಣಮಂತ ನಿರಾಣಿ, ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ವಿಜಯಪುರ ನಗರ ಮಂಡಳ ಅಧ್ಯಕ್ಷ ಮಳುಗೌಡ ಪಾಟೀಲ, ಬೆಳಗಾವಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಬಿಜೆಪಿ ಮುಖಂಡರಾದ ಪ್ರಮುಖರಾದ ಉಮೇಶ ಕಾರಜೋಳ, ಮಲ್ಲಿಕಾರ್ಜುನ ಜೋಗೂರ, ಭೀಮಾಶಂಕರ ಹದನೂರ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ರಾಜಶೇಖರ ಮಗಿಮಠ, ಡಾ. ಸುರೇಶ ಬಿರಾದಾರ, ವಿವೇಕಾನಂದ ಡಬ್ಬಿ, ಚಿದಾನಂದ ಚಲವಾದಿ, ಸಂಜಯ ಪಾಟೀಲ ಕನಮಡಿ, ಅನೀಲ ಜಮಾದಾರ, ಗೀತಾ ಕುಗನೂರ, ಭರತ ಕೋಳಿ, ಪಾಪುಸಿಂಗ್ ರಜಪೂತ, ಗೋಪಾಲ ಘಟಕಾಂಬಳೆ, ಪಾಲಿಕೆ ಮಾಜಿ ಸದಸ್ಯರು ಹಾಗೂ ಪಕ್ಷದ ಘಟನಾಯಕರು, ನಾನಾ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌