RSS HDK: ಆರ್ ಎಸ್ ಎಸ್, ಬಿಜೆಪಿ, ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ

ವಿಜಯಪುರ: ಆರ್‌ಎಸ್ಎಸ್‌(RSS) ಮುಂಚೆ(Before) ದೇಶದಲ್ಲಿ(Country) ಸಂಸ್ಕೃತಿ(Culture) ಇರಲಿಲ್ವಾ? ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ(H D Kumarswamy) ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ ವಾಯುವ್ಯ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ ಅವರು, ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಆರ್ ಎಸ್ ಎಸ್ ಗೂ ಮುಂಚೆ ನಮ್ಮ ಸಂಸ್ಕೃತಿಯನ್ನು ಜನತೆ ಉಳಿಸಿರಲಿಲ್ವಾ? ಆರ್‌ಎಸ್ಎಸ್‌ ನವರು ಯಾವ ಸಂಸ್ಕೃತಿ ಉಳಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಧರ್ಮದಲ್ಲಿ ಹೆಸರಿನಲ್ಲಿ ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.  ಅಮಾಯಕ ಮಕ್ಕಳಲ್ಲಿ  ದ್ವೇಷದ ರಾಜಕಾರಣ, ಸಹೋದರ ಬ್ರಾತೃತ್ವವನ್ನು  ಹಾಳು ಮಾಡುವ ವಾತಾವರಣ ಉಂಟು ಮಾಡುತ್ತಿದ್ದಾರೆ.  ಇದು ಕಲಿಸುವಂಥ ಸಂಸ್ಕೃತಿಯಾ ಎಂದು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ಅವರು ನಡೆಸಿದರು.

ಧರ್ಮದ ಹೆಸರಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ.  ಮಕ್ಕಳನ್ನು ‌ಶಾಲೆಗೆ ಕಳಿಸಲು ಪೋಷಕರು ಆತಂಕಪಡುವ ವಾತಾವರಣ ಸೃಷ್ಠಿಸಿದ್ದಾರೆ.  ಇದು ಆರ್ ಎಸ್ ಎಸ್ ಸಂಸ್ಕೃತಿನಾ ಅಥವಾ ಬಿಜೆಪಿ ಸಂಸ್ಕೃತಿನಾ? ಇವರಿಂದ ನಾವ್ಯಾರು ಸಂಸ್ಕೃತಿ‌ ಕಲಿಬೇಕಾಗಿಲ್ಲ.  ಸರಕಾರ ನಡೆಸುತ್ತಿರುವವರು ಸರಕಾರದ ಖಜಾನೆ ದುಡ್ಡನ್ನು ಕೈಯ್ಯಲ್ಲಿ ಬಾಚುತ್ತಿಲ್ಲ.  ಹಿಟಾಚಿಯಿಂದ ಬಗೆಯುತ್ತಿದ್ದಾರೆ.  ಇದು ಆರ್ ಎಸ್ ಎಸ್ ಸಂಸ್ಕೃತಿಯಾ? ಇದನ್ನು ಕಲಿಸುತ್ತಿದ್ದಾರಾ? ಎಂದು ಅವರು ಪ್ರಶ್ನಿಸಿದರು.

ವಿಪ ಚುನಾವಣೆ ಜೆಡಿಎಸ್ ಅಭ್ಯರ್ಥಿಗಳ ಪರ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಪ್ರಚಾರ ಸಭೆ ಉದ್ಘಾಟಿಸಿದರು

ಶನಿವಾರ ಮತ್ತು ಈಗ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಬಾಗಲಕೋಟ ಮತ್ತು ‌ವಿಜಯಪುರ‌ ಜಿಲ್ಲೆಗಳಲ್ಲಿ ಪರಿಷತ್ ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ.  ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ.  ವಾಯವ್ಯ ಶಿಕ್ಷಕರ  ಕ್ಷೇತ್ರದ. ಅಭ್ಯರ್ಥಿ ಚಂದ್ರಶೇಖರ್‌ ಲೋಣಿ ಪರವಾಗಿ ಮೂರು ಸಭೆಗಳಲ್ಲಿ ‌ಭಾಗಿಯಾಗಿದ್ದೇನೆ.  ಶಿಕ್ಷಕರ ವಿಚಾರದಲ್ಲಿ ನಾನು‌ ಸಿಎಂ ಆಗಿದ್ದಾಗ ಕೊಟ್ಟ ಹಲವಾರು ಬೇಡಿಕೆ ಗೌರವಿಸಿದ್ದೇನೆ.  ಅದನ್ನು ಇಂದು ನಾನು ಸ್ಮರಣೆ ಮಾಡಿಕೊಳ್ಳುತ್ತೇನೆ.  ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸರಕಾರಿ ಕಚೇರಿಗಳು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರವಾಗದೇ ಇರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಭಿವೃದ್ದಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಬಿಜೆಪಿ ಸರಕಾರಕ್ಕೆ ಬೇಕಿಲ್ಲ.  ಅಭಿವೃದ್ಧಿ ಬಗ್ಗೆ ಅವರಿಗೆ ಚಿಂತನೆ ಇಲ್ಲ.  ಅವರಿಗೆ ಅಕ್ರಮವಾಗಿ ಸರಕಾರದ ಹಣ ಲೂಟಿ ಮಾಡುವುದೇ ಕೆಲಸವಾಗಿದೆ.  ಮುಂದಿನ ಚುನಾವಣೆ ಗೆಲ್ಲಬೇಕು.  ಚುನಾವಣೆ ಗೆಲ್ಲಲು ಅವರು ಆದ್ಯತೆ ಕೊಟ್ಟಿದ್ದಾರೆಯ  ಶಿಕ್ಷಕರ ಚುನಾವಣೆಗೆ ಸಂಪೂರ್ಣ ಮಂತ್ರಿಮಂಡಳ ಬೀಡು ಬಿಟ್ಟಿದೆ.  ಸಿಎಂ ಸೇರಿದಂತೆ ಎಲ್ಲ ಸಚಿವರು ಚುನಾವಣೆ ಪ್ರಚಾರದಲ್ಲಿದ್ದಾರೆ.  ಇಂಥ ವಾತಾವರಣ ಪ್ರಥಮ ಬಾರಿಗೆ ಕಂಡಿರುವಂಥದ್ದು ಎಂದು ಸಿಎಂ ಆರೋಪಿಸಿದರು.

ರಾಜ್ಯದ ಸಮಸ್ಯೆಗಳು, ಅಕಾಲಿಕ‌ ಮಳೆಯಿಂದ ಆದ ಹಾನಿ‌ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಚಿಂತನೆ ಇಲ್ಲ.  ಅವರ ಮೂಲ ಚಿಂತನೆ ಹಣ ಯಾವ ರೀತಿ ಸಂಪಾದನೆ ಮಾಡಬೇಕು.  ಹಣದಿಂದ ಯಾವ ರೀತಿ ಚುನಾವಣೆ ಗೆಲ್ಲಬೇಕು ಎಂಬುದಾಗಿದೆ.  ಇದೇ ಬಿಜೆಪಿಗಿjರುವ ತಂತ್ರಗಾರಿಕೆಯಾಗಿದೆ.  ನಾಡಿನ ಜನತೆಯ ಬಗ್ಗೆ ಗೌರವವಾಗಲಿ

ನಾಡಿನ ಅಭಿವೃದ್ಧಿ ಅಗಬೇಕೆಂಬುದು ಎರಡು ವರ್ಷಗಳಿಂದ ಬಿಜೆಪಿಯಲ್ಲಿ‌ ಕಂಡಿಲ್ಲ.  ಇದೇ ವಿಚಾರವೇ ನಮ್ಮ ಮುಂದಿನ ಚುನಾವಣಾ ವಿಷಯವಾಗಲಿದೆ.  ಸರಕಾರ ಯಾವ ರೀತಿ ನಡೆದುಕೊಂಡಿದೆ? ಇದರಿಂದ ನಾಡಿನ ಜನರಿಗೆ ಆದ ಸಮಸ್ಯೆ ಏನು? ಜುಲೈ ತಿಂಗಳಿನಿಂದ ಆರಂಭವಾಗಲಿರುವ ಪ್ರಚಾರ ಸಮಯದಲ್ಲಿ ಇದೇ ವಿಷಯ ಪ್ರಚಾರ ಮಾಡುತ್ತೇವೆ,  ನೀರಾವರಿ  ವಿಚಾರ ರೈತರ ಸಮಸ್ಯೆ ಉದ್ಯೋಗ,  ಶಿಕ್ಷಣ. ಆರೋಗ್ಯ ಸಮಸ್ಯೆಗಳ ಅನಾಹುತಗಳನ್ನು ಜನತೆಯ ಮುಂದಿಡುತ್ತೇನೆ.  ಇದಕ್ಕೆ ಪರಿಹಾರದ ವಿಷಯಗನ್ನು ಜನರ ಮುಂದಿಟ್ಟು ಹೋರಾಟ ಆರಂಭಿಸುತ್ತೇನೆ ಎಂದು ಅವಕರು ತಿಳಿಸಿದರು.

ರಾಜ್ಯಸಭೆ  ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾರು ಕ್ರಾಸ್ ವೋಟ್ ಮಾಡ್ತಾರೆ? ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ.  ಇಲ್ಲಿ ಸಿದ್ದರಾಮಯ್ಯನವರು ಜೆಡಿಎಸ್ ನ್ನು ಬಿಜೆಪಿಯ ಬಿ ಟೀಂ ಎಂದು ನಿರಂತರವಾಗಿ ಭಜನೆ ಮಾಡಿಕೊಂಡು ಬಂದಿದ್ದಾರೆ.  ರಾಜ್ಯಸಭೆ ಚುನಾವಣೆಯಿಂದ ನಿಜವಾದ ಬಿಜೆಪಿ ಬಿ ಟೀಂ ಸಿದ್ದರಾಮಯ್ಯ ಎಂಬುದು ಸಾಬೀತಾಗಿದೆ.  ಅದನ್ನು ಹೊರತು ಪಡಿಸಿ ಸಿದ್ದರಾಮಯ್ಯ ಅಚೀವ್ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಈ‌ ಹಿಂದೆ  ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೇವೇಗೌಡರಿಗೆ ಸಹಾಯ ಮಾಡಿತ್ತು.  ಆದರೆ ಸಧ್ಯದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ ನಮಗೆ ಸಹಾಯ ಮಾಡುತ್ತಿಲ್ಲ ಎಂದು‌‌ ಕಾಂಗ್ರೆಸ್ ಮುಖಂಡರ ಆರೋಪ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಎಚ್. ಡಿ. ಕುಮಾರಸ್ವಾಮಿ, ಅಂದು ಬಿಜೆಪಿ ಅಭ್ಯರ್ಥಿ ಹಾಕಿದ್ದರೆ ಕಾಂಗ್ರೆಸ್ ನವರು ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದರು.  ಅಂದು ದೇವೇಗೌಡರನ್ನು ರಾಜ್ಯಸಭೆಗೆ ಅವಿರೋಧವಾಗಿ‌ ಕಳುಹಿಸಬೇಕೆಂದು ಕಾಂಗ್ರೆಸ್ ನ ರಾಜ್ಯ ನಾಯಕರು ಚಿಂತನೆ ಮಾಡಿರಲಿಲ್ವಾ? ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿಯ ಅವಶ್ಯಕತೆ ಇದೆ ಎಂದು ದೆಹಲಿಯ  ಎರಡೂ ರಾಷ್ಟೀಯ ಪಕ್ಷಗಳ ವರಿಷ್ಟರು ತೀರ್ಮಾನ ಮಾಡಿದ್ದರು.  ಅದನ್ನು ರಾಜ್ಯ ಮಟ್ಟದ ನಾಯಕರು ತೀರ್ಮಾನ ಮಾಡಿದ್ದಲ್ಲ,  ಅದರ ಕ್ರೆಡಿಟ್ ತೆಗೆದುಕೊಳ್ಳಲು ರಾಜ್ಯ ಮಟ್ಟದ ನಾಯಕರಿಗೆ ನೈತಿಕತೆ ಹಾಗೂ ಮನೋಭಾವ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ದೇವಾನಂದ ಚವ್ಹಾಣ, ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌