ವಿಜಯಪುರ: ಖ್ಯಾತ(Famous) ಸಾಹಿತಿ (Literauaute) ದಿ. ಡಾ. ಆರ್. ಸಿ. ಮುದ್ದೇಬಿಹಾಳ(Dr R C Muddebihal)ಅವರ ಪುತ್ರ ದೌಲತರಾವ(ಸಂಜು) ಮುದ್ದೇಬಿಹಾಳ(Doulatrao Muddebihal)ಅವರಿಗೆ ಪಿ. ಎಚ್ ಡಿ ಪದವಿ (PhD Degree) ಲಭಿಸಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಇವರು ಮಂಡಿಸಿದ ಮಹಾಪ್ರಬಂಧಕ್ಜೆ ವಾರಣಾಸಿಯ ಬನಾರಸ ಹಿಂದೂ ವಿಶ್ವವಿದ್ಯಾಲಯ ಪಿ.ಎಚ್. ಡಿ. ಪ್ರದಾನ ಮಾಡಿದೆ. ವಿವಿಯ ಜ್ಯೋತಿಷ್ಯಾಸ್ತ್ರ ವಿಭಾಗದ ಮುಖ್ಯಸ್ಥೆ ಸುಶೀಲಾ ಚಕ್ರವರ್ತಿ ಅವರ ಮಾರ್ಗದರ್ಶನದಲ್ಲಿ ಇವರು ಮಹಾಪ್ರಬಂಧ ಮಂಡಿಸಿದ್ದರು.
ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಪಾರ್ಮಾಸ್ಯೂಟಿಕಲ್ ಕಾಲೇಜಿನ ಪ್ರಯೋಗಾಲಯ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿರುವ ದೌಲತರಾವ ಮುದ್ದೇಬಿಹಾಳ ಅವರು
2017 ರಿಂದ 2020ರ ವರೆಗೆ ಜ್ಯೊತಿಷ್ಯ ಶಾಸ್ತ್ರದಲ್ಲಿ ಬರುವ ಸಂಖ್ಯಾಶಾಸ್ತ್ರ, ಹಸ್ತರೇಖಾ ಜೋತಿಷ್ಯ, ವಾಸ್ತು ಶಾಸ್ತ್ರಗಳನ್ನೊಳಗೊಂಡವ ವೈದಿಕ ಜ್ಯೋತಿಷ್ಯ- ಆಧುನಿಕ ಮತ್ತು ವೈಜ್ಞಾನಿಕ ವಿಶ್ಲೇಷಣೆ, ಅಷ್ಟಮಂಗಲ, ತಾರೋಟ ಕಾರ್ಡ್ ಓದುವಿಕೆ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ್ದರು.
ಈ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಲಭಿಸಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರಾಗಿದ್ದ ದೌಲತರಾವ ಮುದ್ದೇಬಿಹಾಳ ಅವರಿಗೆ ವಾರಣಾಸಿಯ ಬನಾರಸ ಹಿಂದೂ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರಮಾಣ ಪತ್ರವನ್ನು ಮನೆಗೆ ತಲುಪಿಸಿದೆ.