Environment Day: ಇರುವದೊಂದು ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಅಂಬಾದಾಸ ಜೋಶಿ

ವಿಜಯಪುರ: ಇರುವುದೊಂದೇ(one) ಭೂಮಿ(Earth).  ಅದರ ಸಂರಕ್ಷಣೆ(Protection) ನಮ್ಮೆಲ್ಲರ ಹೊಣೆ(Everone Responsibility) ಎಂದು ಪಿಡಿಜೆ ಶಾಲೆಯ ನಿವೃತ್ತ ಶಿಕ್ಷಕ ಅಂಬಾದಾಸ್ ಜೋಶಿ(Ambadas Joshi) ಹೇಳಿದರು.

ಸೋಮವಾರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಪರಿಸರ ಜಾಗೃತ ವೇದಿಕೆ ವಿಜಯಪುರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ- 2022 “ಇರುವುದೊಂದೇ ಭೂಮಿ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಿತ್ಯ ಜೀವನದಲ್ಲಿ ವಿಜ್ಞಾನದ ಜೊತೆಗೆ ಪರಿಸರ, ವಾತಾವರಣಕ್ಕೆ ಸಂಬಂಧಿಸಿದ  ಕುರಿತು ಗಮನ ಹರಿಸುವುದು ಅವಶ್ಯಕವಾಗಿದೆ.  ಹಸಿರೇ ನಮ್ಮೆಲ್ಲರ ಉಸಿರಾಗಗಲಿ. ಪ್ರಕೃತಿ ಹಸಿರಾಗಲಿ ಎಂಬಂತೆ ಶ್ರದ್ಧೆಯಿಂದ ಕಾರ್ಯ ಮಾಡಬೇಕಿದೆ.  ಅತಿಯಾದ ವೈಜ್ಞಾನಿಕತೆ ತಾಂತ್ರಿಕತೆ ಜೊತೆಗೆ ಭೂಮಿಯಲ್ಲಿರುವ ಸಹಜೀವಿಗಳು, ನೀರು,ಗಾಳಿಯ ಕುರಿತು ತಿಳಿದುಕೊಂಡು ಅದರ ಉಳಿವಿನತ್ತ ಕಾರ್ಯಮಾಡಬೇಕಿದೆ. ದೇಶ, ಸಂಸ್ಕೃತಿ, ಪರಿಸರ ಉಳಿಸಿ ಬೆಳೆಸುವುದು ಇಂದಿನ ಯುವಕರ ಕೈಯಲ್ಲಿದೆ ಎಂದು ಅವರು ತಿಳಿಸಿದರು.

ಜೆಎಸ್ಎಸ್ ಬಿ ಎಡ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು

ಅತಿಥಿಯಾಗಿ ಪಾಲ್ಗೋಂಡಿದ್ದ ಬಿ ಎಲ್ ಡಿ ಇ ಸಂಸ್ಥೆಯ ಪಿ. ಜಿ. ಹಳಕಟ್ಟಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಅನುರಾಧ ಠಂಕಸಾಲಿ ಮಾತನಾಡಿ,  ಪರಿಸರ ಸಂರಕ್ಷಣೆ ಸಾಮರ್ಥ್ಯ  ನಮ್ಮಲ್ಲಿದೆ.  ಅದಕ್ಕೆ ಮುಖ್ಯವಾಗಿ ನಾನು, ನನ್ನದು ಎಂಬ ಭಾವನೆ ಬೇಕಾಗಿದೆ.  ಈ ಭೂಮಿ ನಮ್ಮದು.  ಗಾಳಿ ನಮ್ಮದು.  ಇಲ್ಲಿರುವ ನೀರು ನಮ್ಮದು ಎಂಬ ಭಾವನೆಯೇ ಪರಿಸರ ಸಂರಕ್ಷಣೆಗೆ ಮೊದಲ ಹಜ್ಜೆ ಇದ್ದ ಹಾಗೆ ಎಂದು ಹೇಳಿದರು.

ಸಂಸ್ಥೆಯ ಆಡಳಿತಾಧಿಕಾರಿ ಆಯ್. ಎಸ್. ಕಾಳಪ್ಪನ್ನವರ  ಮಾತನಾಡಿ, ಪರಿಸರ ಸಂರಕ್ಷಣೆ ಒಂದೇ ದಿನಕ್ಕೆ ಸಿಮೀತವಾಗಿರದೆ ಪ್ರತಿದಿನವು ಪರಿಸರದ ಪರ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ವೈ. ಖಾಸನಿಸ್ ಮಾತನಾಡಿ, ಪರಿಸರವು  ಹಸಿರಿಗೆ ಸಂಬಂಧಿಸಿದ ಪರಿಕಲ್ಪನೆ ಅಲ್ಲ.  ಅದು ಸಂಪೂರ್ಣ ಒಬ್ಬ ಮನುಷ್ಯನ  ಜೀವನಕ್ಕೆ ಸಂಬಂಧಿಸಿದೆ. ಶಿಕ್ಷಕರಾಗಲು ಹೊರಟ ಪ್ರತಿಯೂಬ್ಬರಿಗೂ ಪರಿಸರ ಕುರಿತು ಒಲವು ಇರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಸಹನಾ ಕುಲಕರ್ಣಿ ಪ್ರಾರ್ಥಿಸಿದರು. ಪ್ರಿಯಾಂಕಾ ವಂದಿಸಿದರು. ಮೀನಾಕ್ಷಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಮಹಾವಿದ್ಯಾಲಯದ ಆವರಣದಲ್ಲಿ ಅತಿಥಿಗಳು,ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು.

Leave a Reply

ಹೊಸ ಪೋಸ್ಟ್‌