BSY Vijayendra: ಅಸೆಂಬ್ಲಿ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸ್ತಾರೆ- ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಎದುರಿಸ್ತೇವೆ- ಯಡಿಯೂರಪ್ಪ

ವಿಜಯಪುರ: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ. ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದೇನೆ. ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳಿದರು.

ರಾಜ್ಯಸಭೆ ಚುನಾವಣೆ ವಿಚಾರ

ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನಕ್ಕೆ ಸ್ಪರ್ದೆ ಮಾಡಿದ್ದೇವೆ. ಮೂರೂ‌ ಸ್ಥಾನಗಳಲ್ಲಿ ‌ಗೆಲ್ಲುತ್ತೇವೆ. ಲೆಹರಸಿಂಗ್ ಅವರೂ ದೊಡ್ಡ ಅಂತರದಿಂದ ಗೆಲ್ಲುತ್ತಾರೆ
ಎಂದು‌ ಅವರು ಹೇಳಿದರು.

ರಾಜ್ಯಸಭೆ ಚುನಾವಣೆಯಲ್ಲಿ ಆತ್ಮಸಾಕ್ಷಿ ಮತದಾನ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ. ಆತ್ಮಸಾಕ್ಷಿ ಎನ್ನುವ ಶಬ್ದಕ್ಕೂ ಅವರಿಗೂ ಸಂಬಂಧವೇ ಇಲ್ಲ. ಆತ್ಮಸಾಕ್ಷಿ ಎನ್ನುವಂಥದ್ದು ಸಿದ್ದರಾಮಯ್ಯ ಅವರಿಗೆ ಎಲ್ಲಿದೆ?
ಆದ್ದರಿಂದ ಆ ಪ್ರಶ್ನೆ ಉದ್ಬವವಾಗಲ್ಲ. ಸಿದ್ದರಾಮಯ್ಯನವರಿಗೆ ಎಲ್ಲಾ ಗೊತ್ತಿದೆ. ಒಂದ ರೀತಿ ರಾಜಕೀಯ‌ ಡೊಂಬರಾಟ ಮಾಡಿಕೊಂಡು
ಈ ರೀತಿ ಹೇಳಿಕೆ ಕೊಡುವ ಮೂಲಕ ಪ್ರಚಾರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗವಾಗಲ್ಲ. ನೂರಕ್ಕೆ ನೂರರಷ್ಟು‌ ಲೆಹರಸಿಂಗ್ ಸೇರಿ ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ವಿಜಯೇಂದ್ರ ಭವಿಷ್ಯ ಸಿಎಂ ಮಾತುಗಳ ವಿಚಾರ

ಬಿ. ವೈ. ವಿಜಯೇಂದ್ರ ಮುಂದಿನ ಸಿಎಂ ಆಗು ಲಕ್ಷಣಗಳಿವೆ ಎಂಬ ಮಾತುಗಳು ಕೇಳಿವರುತ್ತಿರುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿ ಎಸ್ ವೈ
ನಾವು ಆ ಥರಾ ಮಾತನಾಡಿಲ್ಲ. ಯಾರೋ ಅವರ ಸ್ನೇಹಿತರು ಆತ್ಮೀಯರು ಹೇಳಿದ್ದಾರೆ. ಅದಕ್ಕೆಲ್ಲ ನಾನಿ ರಿಯಾಕ್ಷನ್ ಕೊಡಲು ಆಗುವುದಿಲ್ಲ. ವಿಜಯೇಂದ್ರಗೆ ಒಳ್ಳೆಯ ಭವಿಷ್ಯವಿದೆ. ಕೆಲಸ ಮಾಡುತ್ತಿದ್ದಾನೆ. ಒಳ್ಳೆಯ ಕೆಲಸ ಮಾಡಿ ಮುಂದೆ ಬರಲಿ ಎಂದು ಆಶಿಸುತ್ತೇನೆ ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದರು.

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು‌ ಪಕ್ಕಕ್ಕೆ ಸರಿಸಿದೆ‌ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿ ಎಸ್ ಟಾಂಗ್ ನೀಡಿದರು.

ಸಿದ್ದರಾಮಯ್ಯ ಅವರಿಂದ ನನಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ. ಬಿಜೆಪಿ‌ ನನಗೆ ಕೊಟ್ಟಿರುವ ಸ್ಥಾನಮಾನಗಳು ಬೇರೆ ಯಾರಿಗೂ‌ ಸಿಕ್ಕಿಲ್ಲ. ನಾಲ್ಕು ಬಾರಿ ಸಿಎಂ ಆಗಿದ್ದೇನೆ. ಎಲ್ಲಾ ಅವಕಾಶ ಸಿಕ್ಕಿವೆ. ನಾನೇ ಸಿಎಂ ಸ್ಥಾನಕ್ಕೆ ರಾಜೀನಾಮೆ‌ ಕೊಟ್ಟು ಬಂದವನು.  ಆದರೂ ಅದೇ ಗೌರವವನ್ನು ಜನ ಮತ್ತು ಪಕ್ಷ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಬಹುಮತ ಪಡೆಯಲು ಏನೇನು ಪ್ರಯತ್ನ ಮಾಡಬೇಕೊ ಅದನ್ನು ಮಾಡೇ ಮಾಡುತ್ತೇವೆ. ನಿಶ್ಚಿತವಾಗಿಯೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ140ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವವರಿದ್ದೇವೆ. ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ಧರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ. ಅದಕ್ಕೆ ನಾವು ಅವಕಾಶ ನೀಡಲ್ಲ. ನಾವೆಲ್ಲರೂ ಒಟ್ಟಾಗಿ, ಒಂದಾಗಿ ವಿಧಾನಸಭೆ ಚುನಾವಣೆಯಲ್ಲಿ 140 ಸೀಟ್ ಗಳನ್ನು‌ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮಾಜಿ ಸಿಎಂ ತಿಳಿಸಿದರು.

ವಿಜಯೇಂದ್ರಗೆ ವಿಧಾನ ಪರಿಷತ ಟಿಕೆಟ್ ಕೈ ತಪ್ಪಿದ ವಿಚಾರ

ವಿಧಾನ ಪರಿಷತ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಕೊಡಿಸಲಾಗಲಿಲ್ಲಾ ಎಂದು ಮಾಜಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ಪ್ರಶ್ನೆನೇ ಇಲ್ಲ. ಒಂದು ಕುಟುಂಬದವರಿಗೆ ಕೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ‌ ತೀರ್ಮಾನ ತೆಗೆದುಕೊಂಡಿದ್ದು‌ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ ಎಂದು ಅವರು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿ. ವೈ. ವಿಜಯೇಂದ್ ಸ್ಪರ್ಧಿಸಲಿದ್ದಾರೆ. ಅವರು ಎಲ್ಲಿ ನಿಂತರೂ ಗೆದ್ದು‌ ಬರುತ್ತಾರೆ ಎಂದು ಬಿ ಎಸ್ ವೈ ಹೇಳಿದರು.

ಇನ್ನೂ 10 ವರ್ಷ ರಾಜಕೀಯದಲ್ಲಿರುವೆ ಎಂದು ಬಿಎಸ್ವೈ ನಿನ್ನೆ ಹೇಳಿಕೆ ನೀಡಿದ್ದರ ಕುರಿತು ಸ್ಪಷ್ಟನೆ

ರಾಜ್ಯದಲ್ಲಿ ಓಡಾಡೋಣ ಎಂದು‌‌ ನಿಶ್ಚಯ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವಿದ್ದು, ಆರೋಗ್ಯ ಚೆನ್ನಾಗಿದ್ದರೆ
ಇನ್ನೂ 10 ವರ್ಷ ರಾಜ್ಯದ ಉದ್ದಗಲಕ್ಕೂ‌ ಪ್ರವಾಸ ಮಾಡಿ ಪಕ್ಷ ಕಟ್ಟೋ ಕೆಲಸ ಮಾಡುತ್ತೇನೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನೇತ್ರತ್ವದಲ್ಲಿ ಎದುರಿಸುತ್ತೇವೆ. ಎಲ್ಲರೂ ಒಟ್ಟಾಗಿ ಸೇರಿಕೊಂಡು ಕೆಲಸ ಮಾಡಿ‌ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು. ಈ ಸಂದರ್ಭದಲ್ಲಿ ಸಚಿವ ಮುರಿಗೇಶ ನಿರಾಣಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌