Rajyasabha Election: ಸಿದ್ಧರಾಮಯ್ಯ ಹಾಕಿರುವ ಮೂರನೇ ಕ್ಯಾಂಡಿಡೇಟ್ ರಾಜ್ಯ ಸಭೆ ಚುನಾವಣೆಯಲ್ಲಿ ಗೆಲ್ಲಲ್ಲ- ಎನ್. ರವಿಕುಮಾರ

ವಿಜಯಪುರ: ಸಿದ್ಧರಾಮಯ್ಯ ಅವರಿಗೆ ಡೌಟ್ ಇದೆ.  ಅವರು ಹಾಕಿರುವ ಕ್ಯಾಂಡಿಡೇಟ್ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಸದಸ್ಯ ಎಸ್. ರವಿಕುಮಾರ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಮೋಸ ಮಾಡುವುದಕ್ಕಾಗಿ ಮತ್ತು ಅಲ್ಪ ಸಂಖ್ಯಾತರಿಗೆ ಆಸೆ ತೋರಿಸುವ ಸಲುವಾಗಿ ಗೆಲ್ಲುವ ಸೀಟು ಕೊಡುವುದಿಲ್ಲ.  ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧಾರಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅಲ್ಪಸಂಖ್ಯಾತರಿಗೆ ಮೊದಲನೇ ಸೀಟು ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.

ಯಾರೂ ಓಟ್ ಹಾಕದಿದ್ದರೂ  ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಓಟ್ ಹಾಕುತ್ತಾರೆ.  ಅಲ್ಪಸಂಖ್ಯಾತರನ್ನು ಸೋಲಿಸುವುದಕ್ಕೆ ಟಿಕೇಟ್ ಕೊಡುತ್ತಿದ್ದೀರಾ? ಅಲ್ಪಸಂಖ್ಯಾತರಿಗೆ ಮೋಸ ಮಾಡ್ತಿರಾ? ಎಂದು ಪ್ರಶ್ನೆ ಮಾಡಿದ ಅವರು, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ನಲ್ಲಿ ಯೂಸ್ ಅಂಡ್ ಥ್ರೋ ಮಾಡಲು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅನೈತಿಕ ಸರಕಾರವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಅವರಿಗೆ ಅನೈತಿಕ ಎಂಬ ಪದದ ಅರ್ಥ ಗೊತ್ತಿದೆಯಾ? ಸಿದ್ದರಾಮಯ್ಯ ಅವರಿಗಾಗಲಿ, ಡಿ. ಕೆ. ಶಿವಕುಮಾರ ಅವರಿಗಾಗಲಿ ಯಾವ ನೈತಿಕತೆ ಇದೆ? ಅವರ ಪಾರ್ಟಿಯಲ್ಲಿ ಏನು ನೀತಿ ಇದೆ? ಅನೈತಿಕ ಎಂಬುದು ಕಾಂಗ್ರೆಸ್ ಗೆ ಮಾತ್ರ ಅನ್ವಹಿಸುವ ಶಬ್ದ ಎಂದು ಟಾಂಗ್ ನೀಡಿದರು.

ನಾವು ನೀತಿ ಸಿದ್ಧಾಂತದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ.  ವೆಸ್ಟ ಬೆಂಗಾಲ್ ನಲ್ಲಿ ಒಂದು ಪಾರ್ಟಿಯಲ್ಲಿ, ಕೇರಳದಲ್ಲಿ ಮತ್ತೊಂದು ಪಾರ್ಟಿಯಲ್ಲಿ, ಮಹಾರಾಷ್ಟ್ರದಲ್ಲಿ ಮತ್ತೊಂದು ಪಾರ್ಟಿಯಲ್ಲಿ ಹೊಂದಾಣಿಕೆ ಮಾಡುತ್ತಾರೆ.  ಇವರಿಗೆ ಯಾವ ನೈತಿಕತೆ ಇದೆ? ಇವರಿಗೆ ಯಾವ ನೀತಿಯನ್ನು ಪಾಠ ಮಾಡುತ್ತಿದ್ದಾರೆ? ಅವರು ಮೊದಲು ಇನ್ನೊಂದು ಸಲ ಸರಿಯಾಗಿ ಡಿಗ್ರಿ ಮಾಡಲಿ.  ಫಿಲಾಸಫಿ, ಅನೈತಿಕೆ, ಇವೆಲ್ಲದರ ಬಗ್ಗೆ ಇನ್ನೊಮ್ಮೆ ಡಿಗ್ರಿ ಮಾಡಲಿ ಎಂದು ಎಸ್ ರವಿಕುಮಾರ ವಾಗ್ದಾಳಿ ನಡೆಸಿದರು.

ನಮ್ಮ ರಾಜ್ಯಾಧ್ಯಕ್ಷರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.  ಡಿ. ಕೆ. ಶಿವಕುಮಾರ, ಎಸ್. ಸಿದ್ಧಾರಮಯ್ಯ ಅವರ ಕೈಯಲ್ಲಿ ಇದು ಆಗುವುದಿಲ್ಲ.  ಹೀಗಾಗಿ ಏನಾದರೂ ಒಂದು ಹೇಳಬೇಕು ಎಂದು ಅಪ್ರಭುದ್ದವಾಗಿ ಹೇಳುತ್ತಾರೆ.  ಆರ್ ಎಸ್ ಎಸ್  ಚಡ್ಡಿ ಸುಡುವಂತಹವರು ಇವರು ಯಾವ ಪ್ರಭುದ್ದರು? ಯಾವ ಪ್ರಭುದ್ದತೆ ಇದೆ? ಯಾವ ಮಿನಿಮಮ್ ಸ್ಟ್ಯಾಂಡರ್ಡ್ ಇದೆ? ಸಾಮಾಜಿಕ ಸ್ಥರವನ್ನು ಅತ್ಯಂತ ಅಧಃಪತನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.  ಮಹಿಳೆಯರು, ಮಕ್ಕಳು ಅಸಹ್ಯ ಪಡುವಂತೆ ಮಾಡಿದವರು ಕಾಂಗ್ರೆಸ್ ನವರು.  ಕಾಂಗ್ರೆಸ್ ಕಲ್ಚರ್ ಇರೋದೆ ನಮ್ಮ ದೇಶಕ್ಕೆ ಅಸಹ್ಯ ತರುವಂಥದ್ದು.  ನಮ್ಮ ದೇಶಕ್ಕೆ ಅಪಮಾನ ಮಾಡುವಂತಹ ಕಲ್ಚರ್ ಕಾಂಗ್ರೆಸ್ ನಲ್ಲಿದೆ.  ಹೀಗಾಗಿ ಚಡ್ಡಿ ಸುಡುತ್ತಿದ್ದಾರೆ.  ಅವರಿಗೆ ಆರ್ ಎಸ್ ಎಸ್ ಥರ ಒಂದು ಸಂಘಟನೆ ಕಟ್ಟೋಕಾಗಲ್ಲ.  ಅವರಿಗೆ ಬೆಳೆಯೋಕಾಗಲ್ಲ.  ಸಿದ್ದಾಂತದ, ತತ್ವದ ಆಧಾರದ ಮೇಲೆ ಬಿಜೆಪಿ ರೀತಿ ಒಂದು ಪಾರ್ಟಿ ಕಟ್ಟೋಕಾಗಲ್ಲ.  ಅವರು ಮನೆತನದ ಆಧಾರದ ಮೇಲೆ, ಕುಟುಂಬದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ ಕಾಂಗ್ರೆಸ್ ಅನ್ನು ಕಟ್ಟಿದ್ದಾರೆ.  ಸಿದ್ದರಾಮಯ್ಯ ಅವರು ಎಲ್ಲೋ ಯಾವುದೋ ಜಗತ್ತಿನಲ್ಲಿದ್ದಾರೆ.  ರಿಯಾಲಿಟಿ, ನೈಜವಾಗಿರುವ, ಸಹಜವಾಗಿರುವ, ಸತ್ಯವಾಗಿರುವ ವಿಚಾರಗಳನ್ನು ಕೈಬಿಟ್ಟು ಅವರು ಬೊಂಬಾಟ ಮಾಡುತ್ತಿದ್ದಾರೆ ಎಂದು ಎನ್. ರವಿಕುಮಾರ ವಾಗ್ದಾಳಿ ನಡೆಸಿದರು.

ನಮ್ಮ ಐಡಿಯಾಲಜಿ ಅಂದರೆ ಅದು ಸಂಘದ ಐಡಿಯಾಲಜಿ.  ನಿಮ್ಮ ಐಡಿಯಾಲಜಿ ಯಾವುದು ಎಂದು ಕಾಂಗ್ರೆಸ್ ನವರಿಗೆ ಪ್ರಶ್ನೆ ಮಾಡಿದ ಅವರು, ನಮ್ಮ ಸಿದ್ಧಾಂತ ಹಿಂದುತ್ವ, ಹಿಂದುತ್ವ ಎಂದರೆ ವೇ ಆಫ್ ಲೈಫ್.  ಅದರಲ್ಲಿ ಹಿಂದೂಗಳು, ಮುಸ್ಲಿಂರು, ಜೈನರು, ಸಿಖ್ ರು ಸೇರಿದಂತೆ ಎಲ್ಲರೂ ಬರ್ತಾರೆ.  ಈ ದೇಶಕ್ಕೆ ಒಳ್ಳೆಯದಾಗುವಂತಹ ಜೀವನ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಅನ್ನುವುದು ನಮ್ಮ ಸಿದ್ಧಾಂತ.  ಸೋನಿಯಾ ಗಾಂಧಿ, ರಾಹುಲ ಗಾಂಧಿ ಅವರು ಯಾವ ಸಿದ್ಧಾಂತ ಹೇಳುತ್ತಾರೆ? ಡಿ. ಕೆ. ಶಿವಕುಮಾರ ಯಾವ ಸಿದ್ಧಾಂತ ಹೇಳುತ್ತಾರೆ?  ಎಂದು ಎನ್. ರವಿಕುಮಾರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಾರ್ಟಿ ಯಾವ ಸಿದ್ಧಾಂತದ ಮೇಲಿದೆ? ಕಾಂಗ್ರೆಸ್ ಎಂಬುದು ಮುಳುಗಿರುವ ಹಡಗು.  ಉತ್ತರ ಪ್ರದೇಶದಲ್ಲಿ ಸಿಂಗಲ್ ಡಿಜಿಟ್ ಪಡೆದು ಡೆಪಾಸಿಟ್ ಕಳೆದುಕೊಂಡಿದೆ.  ಇಂಟರನ್ಯಾಷನಲ್‌ ಲೆವೆಲ್ ನಲ್ಲಿ ಕಾಂಗ್ರೆಸ್ ಮರ್ಯಾದೆ ಹೋಗಿದೆ.  ಯುವ ನಾಯಕರು ಏನಾಯ್ತು? ಯುವ ನಾಯಕರ ಮುಖ ನೋಡಿ ಎಟಲಿಸ್ಟ್ 10 ಜನ ಓಟ್ ಹಾಕಿಲ್ಲ.  ನ್ಯಾಷನಲ್‌ ಪಾರ್ಟಿ ಅಪಹಾಸ್ಯ ಆಗುತ್ತಿದೆ.  ಸಿದ್ದರಾಮಯ್ಯನವರು ತಮ್ಮ ಪಾರ್ಟಿ ಹೇಗಿದೆ? ನಾವು ಬೇರೆ ಪಾರ್ಟಿ ಬಗ್ಗೆ ಮಾತನಾಡಬೇಕು ಎಂದರೆ ಯಾವ ನೈತಿಕತೆ ಇದೆ ಎಂಬುದನ್ನು ಸಿಂಹಾವಲೋಕನ ಮಾಡಿಕೊಳ್ಳಬೇಕು ಎಂದು ಎನ್. ರವಿಕುಮಾರ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ಯುವ ಮುಖಂಡ ಸನ್ನಿ ಗವಿಮಠ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌