MEDP Training: ಸಬಲಾ ಸಂಸ್ಥೆಯಲ್ಲಿ ನಡೆದ ಬಂಜಾರಾ ಆಭರಣ ತಯಾರಿಕೆ ತರಬೇತಿ ಸಮಾರೋಪ- ಜಿ. ಪಂ. ಸಿಇಓ ರಾಹುಲ ಶಿಂಧೆ ಭಾಗಿ

ವಿಜಯಪುರ: ನಗರದ ಪ್ರತಿಷ್ಠಿತ ಸಬಲಾ ಸಂಸ್ಥೆ ಮತ್ತು ನಬಾರ್ಡ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸಣ್ಣ ಉದ್ದಿಮೆಗಳ ಯೋಜನೆ(MEDP) ಅಡಿಯಲ್ಲಿ ನಡೆದ ಬಂಜಾರಾ ಆಭರಣ ತಯಾರಿಕಾ ತರಬೇತಿ ಶಿಬಿರ ಸಮಾರೋಪ ಸಮಾರಂಭ ನಡೆಯಿತು.

ಸಬಲಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ. ಪಂ. ಸಿಇಓ ರಾಹುಲ ಶಿಂಧೆ ಪಾಲ್ಗೋಂಡಿದ್ದರು

ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಜಿ. ಪಂ. ಸಿಇಓ ರಾಹುಲ ಶಿಂಧೆ, ದೆಹಲಿಯ ದಿಲ್ಲಿಹಾತ್ ಎಂಬಲ್ಲಿ ಲಭ್ಯವಾಗುವ ಕರಕುಶಲ ವಸ್ತುಗಳು ವಿಜಯಪುರ ನಗರದ ಸಬಲಾ ಸಂಸ್ಥೆಯಲ್ಲಿ ಸಿಗುತ್ತಿವೆ.  ಈ ತರಬೇತಿಯಲ್ಲಿ ಭಾಗವಹಿಸಿದ 30 ಜನ ತರಬೇತಿದಾರರು ಇಲ್ಲಿ ಕಲಿತದ್ದನ್ನು ಸುದಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲತೆ ಸಾಧಿಸಬಹುದಾಗಿದೆ.  ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ವಿಜಯಪುರದಲ್ಲಿಯೇ ವ್ಯವಸ್ಥೆ ಮಾಡಿಕೊಂಡರೆ ಇನ್ನೂ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಬಳಿಕ ಸಬಲಾ ಸಂಸ್ಥೆಯಲ್ಲಿ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳನ್ನು ರಾಹುಲ ಶಿಂಧೆ ವೀಕ್ಷಿಸಿದರು.

ಈ ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಾದ ನರೇಂದರಬಾಬು ಮಾತನಾಡಿ, ಜೀವ ವಿಮಾ ಯೋಜನೆಗಳ ಬಗ್ಗೆ ಬ್ಯಾಂಕನಿಂದ ಸಿಗುವ ಸಾಲ-ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.  ಅಲ್ಲದೇ, ಸಾಂಪ್ರದಾಯಕ ಕಲೆಯನ್ನು ಹಣದ ರೂಪದಲ್ಲಿ ಅಳೆಯಲಾಗುವದಿಲ್ಲ.  ಅದನ್ನು ನಾವು ಸಂರಕ್ಷಿಸಬೇಕು ಎಂದು ತಿಳಿಸಿದರು.

 

ಇದೇ ನಬಾರ್ಡ ಬ್ಯಾಂಕಿನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಕಾಸ ರಾಠೋಡ ಮಾತನಾಡಿ, ಲಂಬಾಣಿ ಕಸೂತಿ ಕಲೆ ಒಂದು ಮಹತ್ವವಾದ ಕೃಷಿಯೇತರ ತರಬೇತಿಯಾಗಿದೆ.  ವಿಜಯಪುರ ನಗರದಲ್ಲಿಯೇ ಕರಕುಶಲಕರ್ಮಿಗಳ ಕಂಪನಿಯನ್ನಾಗಿ ಮಾಡಿ ಉತ್ಪಾದನೆ ಮತ್ತು ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಸಬಲಾ ಸಂಸ್ಥೆಯ ಸಿಇಓ ಡಾ. ಮಲ್ಲಮ್ಮ ಯಾಳವಾರ  ಸ್ವಾಗತಿಸಿ, ಸಬಲಾ ಸಂಸ್ಥೆ ಸಾಧಿಸಿರುವ ಸಬಲತೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸಬಲಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಈರಮ್ಮ ಪಾಟೀಲ, ಮೈಸೂರಿನ ಕರಕುಶಲ ವಸ್ತುಗಳ ವಿನ್ಯಾಸಕಕಿ ವಸುಧಾ ಶರ್ಮಾ, ವಿಜಯಪುರದ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಇಓ ಡಾ. ಬಾಬು ಸಜ್ಜನ, ಸಬಲಾ ಸಂಸ್ಥೆಯ ತರಬೇತುಗಾರ್ತಿ ರೇಣುಕಾ ಕಟ್ಟಿಮನಿ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌