Govt Job@49: ಆತ್ಮೀಯ ರಾಜಕುಮಾರನನ್ನು ಪ್ರೀತಿಯಿಂದ ಸನ್ಮಾನಿಸಿ ಸಂತಸಪಟ್ಟ ಸ್ನೇಹಿತರು

ವಿಜಯಪುರ: ಇದು ವ್ಯಕ್ತಿಯಲ್ಲಿರುವ ಒಳ್ಳೆಯತನ, ಪರೋಪಕಾರಕ್ಕೆ ಹಿತೈಷಿಗಳ ಶುದ್ಧ ಮನಸ್ಸಿನ ಶುಭ ಹಾರೈಕೆಗಳು ಹಾಗೂ ತಾಯಿಯ ಶುಭಾಶಿರ್ವಾದಕ್ಕೆ ಸಿಕ್ಕ ತಕ್ಕ ಪ್ರತಿಫಲ. ಸದಾ ಪರೋಪಕಾರದಲ್ಲಿ ಸಂತಸ ಕಾಣುತ್ತ ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತಚಾಗಿ ಸ್ನೇಹಿತರ ಬಳಗವನ್ನು ಸಂಪಾದಿಸಿರುವ ವ್ಯಕ್ತಿಗೆ ದಶಕದ ನಂತರ ಸಿಕ್ಕ ಸರಕಾರಿ ಕೆಲಸದ ಸಂಭ್ರಮಾಚರಣೆ ಎಂದರೂ ತಪ್ಪಲ್ಲ. ಇಂಥ ಅಪರೂಪದ ಮತ್ತು ಪ್ರೀತಿಯ ಚಿಕ್ಕದಾದ ಕಾರ್ಯಕ್ರಮ ಬಸವ ನಾಡು ವಿಜಯಪುರ ನಗರದ ಜಲನಗರದಲ್ಲಿರುವ ಶಿವಶರಣೆ ನೆಲ್ಲೂರು ನಿಂಬೆಕ್ಕ ಸಮುದಾಯ ಭವನದಲ್ಲಿ ನಡೆಯಿತು. ಜಲನಗರ ಗೆಳೆಯರು […]

MLC Election: ನಾಲ್ಕೂ ಸ್ಥಾನಗಳಲ್ಲಿ ಗೆಲುವು- ಆ್ಯಸಿಡ್ ಧಾಳಿಕೋರರ ವಿರುದ್ಧ ಕಠಿಣ ಕಾನುನು- ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಎಲ್ಲಕಡೆ ಬಿಜೆಪಿ ಪರವಾದ ಪ್ರತಿಕ್ರಿಯೆಯನ್ನು ಗಮನಿಸಿದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕೂ ಸ್ಥಾನ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದು, ಇದುವರೆಗೂ ನಡೆದಿರುವ ಅಭಿಯಾನ ಮತ್ತು ಪ್ರತಿಕ್ರಿಯೆಗಳನ್ನು ಪರಿಗಣಿಸಿದರೆ ಭಿಜೆಪಿಗೆ ಗೆಲುವು ಖಚಿತ ಎಂಬ ವಿಶ್ವಾಸ ಮೂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಆ್ಯಸಿಡ್ ದಾಳಿ ಮಾಡುವವರ ವಿರುದ್ಧ ಕಠಿಣ ಕಾನೂನು […]

Airport Basaveshwar: ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರರ ಹೆಸರಿಡಿ- ಯತ್ನಾಳ ಮನವಿ

ಬೆಂಗಳೂರು: ವಿಜಯಪುರದಲ್ಲಿ ನಿರ್ಮಾನವಾಗುತ್ತಿರುವ ನೂತನ‌ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರರ ಹೆಸರಿಡುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಸಿದ್ದು ಸವದಿ, ಅರವಿಂದ ಬೆಲ್ಲದ ಉಪಸ್ಥಿತರಿದ್ದರು.

Rajyasabha Election: ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿ ತಂತ್ರಗಾರಿಕೆ ಶ್ಲಾಘಿಸಿದ ಪ್ರಧಾನಿ ಮೋದಿ, ನಡ್ಡಾ, ಅಮಿತ ಶಾ

ಬೆಂಗಳೂರು: ಕರ್ನಾಟಕ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ತಮ್ಮ ತಂತ್ರಗಾರಿಕೆಯ ಮೂಲಕ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ‌. ವಿಜೆಪಿಯ ಮೂರು ರಾಜ್ಯಸಭೆಗೆ ಕಳುಹಿಸುವಲ್ಲಿ ತಾವು ಪಟ್ಟ ಪ್ರಯತ್ನ ಅಮೂಲ್ಯವಾದದ್ದು ಕರ್ನಾಟಕ ರಾಜ್ಯದ ಈ ಕೊಡುಗೆ ಇನ್ನಷ್ಟು ಅತ್ಯುತ್ತಮವಾಗಿ ಕೆಲಸ ಮಾಡುವಂತಾಗಲಿ ಎಂದು ಪ್ರಧಾನಿ ಮೋದಿ ಅವರು ಬೊಮ್ಮಾಯಿ ಅವರನ್ನು ಪ್ರೋತ್ಸಾಹಿಸಿ, ಶ್ಲಾಘಿಸಿದರು. ಜೆ. ಪಿ. ನಡ್ಡಾ […]