MLC Voting: ಬಸವ ನಾಡಿನಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ- ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಎಂ ಎಲ್ ಸಿ

ವಿಜಯಪುರ: ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಮತದಾನ ಬಿಸಿಲೇರುತ್ತಿದ್ದಂತೆ ವೇಗ ಪಡೆದುಕೊಂಡಿದೆ.

ಮತದಾನ ಮಾಡಲು ಪಾಳಿಯಲ್ಲಿ ನಿಂತ ಎಂ ಎಲ್ ಸಿ ಅರುಣ ಶಹಾಪುರ

ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರ ನಗರದಲ್ಲಿರುವ ಸರಕಾರಿ‌ ಬಾಲಕರ ಪ್ರೌಢ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 120 ರಲ್ಲಿ ಮತ ಚಲಾಯಿಸಿದ್ದಾರೆ. ಬೆಳಿಗ್ಗೆ ಮತಗಟ್ಟೆಗೆ ಆಗಮಿಸಿದ ಅವರು ಪಾಳಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮತಗಟ್ಟೆಯಿಂದ ಹೊರ ಬಂದ ಅವರು ಮತ ಹಾಕಿರುವ ಕುರುಹಾಗಿ ತಮ್ಮ ಬೆರಳಿಗೆ ಹಾಕಲಾಗಿರು ಶಾಹಿಯ ಗುರುತನ್ನು ತೋರಿಸಿ ಸಂತಸ ಪಟ್ಡರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಕಡೆಯವರು ಹಣ ಹಂಚಿದ್ದಾರೆ. ಇದರಿಂದ ನಮಗೇನು ಸಮಸ್ಯೆಯಾಗಿಲ್ಲ. ನಾನು ಸಂತಸವಾಗಿದ್ದೇನೆ ಎಂದು ಹೇಳಿದರು.

ಮತದಾನದ ಬಳಿಕ ಗೆಲುವಿನ ವಿಶ್ವಾಸ ವ್ಯಕ್ತಡಿಸಿದ ಎಂ ಎಲ್ ಸಿ ಅರುಣ ಶಹಾಪುರ

ನಾನು ಈ ಸಂಧರ್ಭದಲ್ಲಿ ಬಹಳ ಸಂತಸ ವಾಗಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿಕೆ ಬಗ್ಗೆ ಶಿಕ್ಷಕರಿಗೆ ಎಲ್ಲ ತಿಳಿದಿದೆ. ಹಣ ಹಂಚಿಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿರುವುದು ನನಗೆ ವರವಾಗಿದೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಹೆಚ್ಚಿನ ಅಂತರದಲ್ಲಿ ಮೊದಲ ಸುತ್ತಿನಲ್ಲಿ ಗೆಲ್ಲುವ ವಿಶ್ವಾಸವಿದೆ. ಬೆಳಗಾವಿ ಯಲ್ಲೂ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅರುಣ ಶಹಾಪುರ ತಿಳಿಸಿದರು.

ಮತದಾನದ ಬಳಿಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಅರುಣ ಶಹಾಪುರ

ಕಾಂಗ್ರೆಸ್ ಹಣ ಹಂಚಿದರೂ ನಮಗೇನು ಸಮಸ್ಯೆಯಾಗಿಲ್ಲ. ಚುನಾವಣಾ ಆಯೋಗಕ್ಕೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಹಣ ಹಂಚಿಕೆ ಬಗ್ಗೆ ಚುನಾವಣೆ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ ಅವರು, ಹಣ ಹಂಚಿಕೆ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಹೊಂದಾಣಿಕೆ ರಾಜಕಾರಣದ ಆರೋಪದ ಬಗ್ಗೆ ಫಲಿತಾಂಶದ ದಿನ ಉತ್ತರ ಸಿಗುತ್ತದೆ.‌ ಕಾಂಗ್ರೆಸ್ ಅಭ್ಯರ್ಥಿ ಹತಾಶರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಹತಾಶರಾಗಿದ್ದಾರೆ. ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದಾರೆ ಎನಿಸುತ್ತಿದೆ ಎಂದು ಅರುಣ ಶಹಾಪುರ ವಾಗ್ದಾಳಿ ನಡೆಸಿದರು‌.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂಪತ ಕೋವಳ್ಳಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಚಂದ್ರಶೇಖರ ಕವಟಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌