Siddhasiri GB: ಸಿದ್ಧಸಿರಿ ಸೌಹಾರ್ದ 16 ವರ್ಷಗಳಲ್ಲಿ ರೂ. 1500 ಕೋಟಿ ಠೇವಣಿ ಪೂರೈಸಿದ ಹೆಮ್ಮೆ- ಯತ್ನಾಳ

ವಿಜಯಪುರ: ರಾಜ್ಯದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಹೆಸರು ಮಾಡಿರುವ ಸಿದ್ಧಸಿರಿ ಸೌಹಾರ್ದ 2023 ಕ್ಕೆ ಮಿಶನ್ ರೂ. 3000 ಕೋ. ಠೇವಣಿ ಪೂರೈಸಬೇಕು ಎೞದು ಸಿಬ್ಬಂದಿಗಳಿಗೆ ಶಾಸಕ ಮತ್ತು ಸೌಹಾರ್ದದ ಅಧ್ಯಕ್ಷ ಬಸನಗಡೌ ಪಾಟೀಲ ಯತ್ನಾಳ ಸೂಚನೆ ನೀಡಿದ್ದಾರೆ. 

ವಿಜಯಪುರದಲ್ಲಿ ನಡೆದ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದ 2021-22ನೇ ವರ್ಷದ 16ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಈ ವರ್ಷದ ಅವಧಿಯಲ್ಲಿ ರೂ. 6.66 ಕೋ. ಲಾಭ ಗಳಿಸಿ, ಸಹಕಾರಿಯ ಸದಸ್ಯರಿಗೆ ಶೇ 25 ರಷ್ಟು ಶೇರು ಲಾಭಾಂಶ ಘೋಷಿಸಲಾಗಿದೆ.  ಸಾಮಾನ್ಯ ಸಭೆ ಸದಸ್ಯರು ತಮಗೆ 21% ಶೇರು ಲಾಭಾಂಶ ನೀಡಿ, ಉಳಿದ  ಶೈ. 4 ರಷ್ಟು ಲಾಭಾಂಶವನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಗೆ ದೇಣಿಗೆ ರೂಪವಾಗಿ ನೀಡಲು ಸದಸ್ಯರು ಈ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ಜಾರೆ ಎಂದು ತಿಳಿಸಿದ ಅವರು, ಪಿಗ್ಮಿ ಸಂಗ್ರಾಹಕರಿಗೆ ವೈದ್ಯಕೀಯ ಸೌಲಭ್ಯಕ್ಕಾಗಿ ರೂ. 5000 ಮತ್ತು ಸಿಬ್ಬಂದಿಗಳಿಗೆ ಬೊನಸ್ ನೀಡುವುದಾಗಿ ಸಭೆಯಲ್ಲಿ ಅವರು ಘೋಸಿಸಿದರು.

ಸಿದ್ಧಸಿರಿ ಸೌಹಾರ್ದ ಸಾಮಾನ್ಯ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು

ಈ ವರ್ಷದಲ್ಲಿ ಸೌಹಾರ್ದ ರಾಜ್ಯಾದ್ಯಂತ 145 ಘಣಕೀಕೃತ ಶಾಖೆಗಳನ್ನು ಹೊಂದಿದೆ.  ವಿಜಯಪುರ ನಗರದ ಕೇಂದ್ರ ಕಚೇರಿಯಲ್ಲಿ ದಿನದ 24 ಘಂಟೆ ಕಾರ್ಯ ನಿರ್ವಹಿಸುವ ಶಾಖೆ ಆರಂಭಿಸಲಾಗಿದೆ.  ಅಲ್ಲದೇ, ಮಹಿಳೆಯರು ವ್ಯವಹಾರ ನಡೆಸಲು ಡಲು ವಿಜಯಪುರ, ಇಂಡಿ, ಕಲಬುರಗಿ ಮತ್ತು ಮುದ್ದೇಬಿಹಾಳದಲ್ಲಿ ಮಹಿಳಾ ಶಾಖೆಗಳನ್ನು, 36 ಕಡೆ ಇ- ಸ್ಟ್ಯಾಂಪ್ ವ್ಯವಹಾರ ನಿರ್ವಹಿಸಲಾಗುತ್ತಿದೆ.  ಸಹಕಾರಿಗಳ ಷೇರು ಬಂಡವಾಳ  ರೂ. 21 ಕೋ., ರೂ. 31 ಕೋ. ನಿಧಿಗಳು, ರೂ. 1393 ಕೋ. ಸದಸ್ಯರ ಠೇವಣಿಗಳು, ಸಾಲ ಮತ್ತು ಮುಂಗಡ  ರೂ. 1156 ಕೋ.,  ದುಡಿಯುವ ಬಂಡವಾಳ ರೂ. 1445 ಕೋ. ಇದೆ ಎಂದು ಅವರು ಮಾಹಿತಿ ನೀಡಿದರು.

ಸೌಹಾರ್ದದಲ್ಲಿ ಒಟ್ಟು ಸದಸ್ಯರು 13210 ಸಹಕಾರಿಗಳಿದ್ದಾರೆ.  ಕೇವಲ 16 ವರ್ಷಗಳಲ್ಲಿ 25 ಸ್ವಂತ ನಿವೇಶನಗಳನ್ನು ಹಾಗೂ 13 ಸ್ವಂತ ಕಟ್ಟಡಗಳನ್ನು ಸೌಹಾರ್ದ ಹೊಂದಿದೆ.  ಲೇವಾದೇವಿ ವ್ಯವಹಾರವಲ್ಲದೆ ಸಿದ್ಧಸಿರಿ ಇಂಧನ ಕೇಂದ್ರ, 5100 ಮ್ಯಾಟ್ರಿಕ್ ಟನ್, ಸಿದ್ಧಸಿರಿ ಶೀತಲ ಮತ್ತು ಸಂಸ್ಕರಣ ಘಟಕ, ಭಾರತೀಯ ಪ್ರಧಾನಂತ್ರಿ ಜನೌಷಧಿ ಕೇಂದ್ರಗಳು, ವಿಜಯಪುರ, ಸಿಂದಗಿ, ಬಬಲೇಶ್ವರ,  ಬಿಜ್ಜರಗಿ, ಝಳಕಿ ಹೀಗೆ ಐದು ಕಡೆ ಸಿದ್ಧಸಿರಿ ಕೃಷಿ ಕೇಂದ್ರಗಳನ್ನು ನಡೆಸುತ್ತಿದೆ.   ಗುಲಬುರ್ಗಾ ಜಿಲ್ಲೆಯ ಚಿಂಚೋಳಿಯಲ್ಲಿ 423 ಕೆ ಎಲ್ ಪಿ ಡಿ ಸಾಮರ್ಥ್ಯದ ಸಿದ್ಧಸಿರಿ ಇಥೆನಾಲ್ ಹಾಗೂ ಪವರ್ ಉತ್ಪಾಧನಾ ಘಟಕ ಹಾಗೂ 30 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಘಟಕ ಮತ್ತು ಪ್ರತಿ ದಿನ 5000 ಟನ್ ಕಬ್ಬು ನುರಿಸುವ ಸಾಮರ್ಥ್ಯದ ಸಕ್ಕರೆ ಕಾರ್ಖಾನೆಯ ಕೆಲಸ ಶರವೇಗದಲ್ಲಿ ನಡೆಯುತ್ತಿವೆ.  ಈ ವರ್ಷ ಅಕ್ಟೋಬರ್ 5 ಕಾರ್ಖಾನೆ ಕಾರ್ಯಾರಂಭ ಮಾಡಲಿದೆ.  ಸಿದ್ಧಸಿರಿ ಶೀತಲ ಘಟಕದಲ್ಲಿ ದಾಸ್ತಾನು ಇಡುವ ಒಣ ದ್ರಾಕ್ಷಿಯ ಮೇಲೆ ರೈತರಿಗೆ ಶೇ. 15 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ.  ದ್ರಾಕ್ಷಿ ಬೆಳೆಗಾರರಿಗೆ ಕನಿಷ್ಟ ಒಂದು ಎಕರೆಗೆ ರೂ. 1 ಲಕ್ಷ ಮತ್ತು ಗರಿಷ್ಠ 5 ಎಕರೆಗೆ ರೂ. 5 ಲಕ್ಷ ಸಾಲವನ್ನು ನೀಡಲಾಗುತ್ತಿದೆ.  ಅದರಲ್ಲಿ ಶೇ. 50 ರಷ್ಟು ಸಿದ್ಧಸಿರಿ ಕೃಷಿ ಕೇಂದ್ರದಿಂದ ಉತ್ತಮ ಗುಣಮಟ್ಟದ ಕ್ರಿಮಿನಾಶಕ ಮತ್ತು ರಸಗೊಬ್ಬರ ಹಾಗೂ ಇನ್ನುಳಿದ ಶೇ. 50 ರಷ್ಟನ್ನು ನಗದು ರೂಪದಲ್ಲಿ ನೀಡಲಾಗುತ್ತಿದೆ. ಅಲ್ಲದೇ, ಸಮಾಜ ಸೇವೆಯಾಗಿ ಬೀದಿ ಬಡ ವ್ಯಾಪಾರಿಗಳಿಗೆ ಕೇಸರಿ ಸ್ವಾವಲಂಭಿ ಸಾಲ ಯೋಜನೆಯಲ್ಲಿ ಸೊನ್ನೆ ಬಡ್ಡಿದರದಲ್ಲಿ ರೂ. 5000 ಸಾಲವನ್ನು ನೀಡಲಾಗುತ್ತಿದೆ.  ಸ್ತ್ರೀ ಹಾಗೂ ಪುರುಷ ಸ್ವ ಸಹಾಯ ಸಂಘ ಮತ್ತು ಜಂಟಿ ಬಾದ್ಯತಾ ಗುಂಪುಗಳಿಗೆ ಸಾಲ ಕೊಡಲಾಗುತ್ತಿದೆ.  ವಿಜಯಪುರ ನಗರದಾದ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಸುಮಾರು 36 ಕಡೆ ಸಿದ್ಧಸಿರಿ ಸೌಹಾರ್ದದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಅನಕೂಲ ಕಲ್ಪಿಸಲಾಗಿದೆ ಎಂದು ಶಾಸಕರು ಯತ್ನಾಳ ಮಾಹಿತಿ ನೀಡಿದರು.

2021-22ನೇ ಆರ್ಥಿಕ ವರ್ಷದಲ್ಲಿ ಕಗ್ಗೋಡದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಪಾಟೀಲ ಯತ್ನಾಳ ಗೊ ರಕ್ಷಾ ಕೇಂದ್ರಕ್ಕೆ ಸಿದ್ಧಸಿರಿಯಿಂದ ರೂ. 25 ಲಕ್ಷ ರೂ. ದೇಣಿಗೆ ನೀಡಲಾಗಿದೆ.  ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಗಳಿಗೆ ರೂ. 1152597 ಮೌಲ್ಯದ ಮಹೀಂದ್ರಾ ಜಿಪ್ ದೇಣಿಗೆಯಾಗಿ ನೀಡಲಾಗಿದೆ.  ವಿಜಯಪುರದ ಸೈಕ್ಲಿಸ್ಟ್ ಛಾಯಾ ಎನ್ ನಾಗಶೆಟ್ಟಿ ಇವರಿಗೆ ಸೈಕ್ಲಿಂಗ್ ಕ್ರೀಡೆಗೆ ಪ್ರೋತ್ಸಾಹ ನೀಡಲು ರೂ. 1 ಲಕ್ಷ ಮೌಲ್ಯದ ಸೈಕಲ್ ವಿತರಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾತಳ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಸಾಮಾನ್ಯ ಸಭೆಗೆ ಆಗಮಿಸಿದ ಎಲ್ಲರಿಗೂ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಸಿಬಿರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ರಾಜ್ಯ ಸಂಯುಕ್ತ ಸಹಕಾರಿಯ ವಿಜಯಪುರ ಜಿಲ್ಲಾ ನಿರ್ದೇಶಕ ಸಿದ್ರಾಮಪ್ಪ ಉಪ್ಪಿನ, ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣ್ಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ, ವಿಜಯಕುಮಾರ ಚವ್ಹಾಣ, ಅಶೋಕಗೌಡ ತೊರವಿ, ಶೈಲಜಾ ಪಾಟೀಲ ಯತ್ನಾಳ, ಸೀಮಾ ಕೋರೆ, ರಾಮನಗೌಡ ಪಾಟೀಲ ಯತ್ನಾಳ, ಗಣಪತಿ ಜಾಧವ, ಸೋಮಶೇಖರ ಬಂಡಿ, ದಾದಾಸಾಹೇಬ ಗುಮಾಸ್ತೆ, ಆಕಾಶ ಗುತ್ತೆದಾರ, ಕಳಕನಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಜ್ಯೋತಿಬಾ ಖಂಡಾಗಳೆ, ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ, ಲೆಕ್ಕ ಪರಿಶೋಧಕ ಶಿವಾನಂದ ಭೂಸಾರಿ, ಕಾನೂನು ಸಲಹೆಗಾರ ಸತೀಶ್ಚಂದ್ರ ಕುಲಕರ್ಣಿ, ಗುರು ಗಚ್ಚಿನಮಠ, ಹಿರಿಯ ಮಹಾ ಪ್ರಬಂಧಕ ಅಭಿಜೀತ ಕೃಷ್ಣಮೂರ್ತಿ, ಮಹಾ ಪ್ರಬಂಧಕ ಉಮಾದೇವಿ ಹಿರೇಮಠ, ವಲಯ ಅಧಿಕಾರಿ ಆರ್. ಟಿ. ಪಾಟೀಲ, ಸಿದ್ಧೇಶ್ವರ ಸಂಸ್ಥೆಯ ಪದಾಧಿಕಾರಿಗಳು, ನಾನಾ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಸಹಕಾರಿ ಸದಸ್ಯರು, ಹಿತೈಷಿಗಳು, ಸೌಹಾರ್ದದ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌