ZP CEO: ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಲು ಸಿಡಿಪಿಓ, ಅಂಗನವಾಡಿ ಮೇಲ್ವಿಚಾರಕಿಯರಿಗೆ ರಾಹುಲ ಶಿಂಧೆ ಸೂಚನೆ

ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಅಂಗನವಾಡಿ ಮೇಲ್ವಿಚಾರಕಿಯರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವಿಜಯಪುರ ಜಿ. ಪಂ. ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಇಓ ಅವರು, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಪ್ರಗತಿ ಪರಿಶೀಲನೆ ಮಾಡಲಾಗಿ 2022-23ನೇ ವರ್ಷದಲ್ಲಿ ನಿಗದಿ ಪಡಿಸಿದ ಗುರಿಗೆ ತಕ್ಕಂತೆ ಗರ್ಭಿಣಿ ಫಲಾನುಭವಿಗಳ ಅರ್ಜಿಗಳನ್ನು ತಂತ್ರಾಂಶದಲ್ಲಿ ನೋಂದಣಿ ಮಾಡಿ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ […]

MLC Confidence: ಮೊದಲ‌ ಸುತ್ತಿನಲ್ಲಿಯೇ ಗೆಲ್ಲುವೆ- ಅರುಣ ಶಹಾಪುರ ವಿಶ್ವಾಸ

ವಿಜಯಪುರ: ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಜೂ. 15 ಬುಧವಾರ ಬೆಳಗಾವಿಯಲ್ಲಿ ಮತ ಎಣಿಕೆ ನಡೆಯಲಿದೆ. ಈ ಬಾರಿಯೂ ಶಿಕ್ಷಕ ಬಾಂಧವರು ತಮಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದು ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗುವುದಾಗಿ ಬಿಜೆಪಿ ಅಭ್ಯರ್ಥಿ ಮತ್ತು ವಿಧಾನ ಪರಿಷತ ಸದಸ್ಯ ಅರುಣ ಶಹಾಪುರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬವಸ ನಾಡು ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಸಾಕಷ್ಟು ಹಣ ಹಂಚಲು ಪ್ರಯತ್ನಿಸಿದರೂ ಕೂಡ […]

CM Moovie: 777 ಚಾರ್ಲಿ ಚಿತ್ರ ವೀಕ್ಷಿಸಿ ಭಾವುಕರಾದ ಸಿಎಂ ಬೀದಿ ನಾಯಿಗಳ ದತ್ತು ಪಡೆಯಲು ಕರೆ

ಬೆಂಗಳೂರು: ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿರುವ 777 ಚಾರ್ಲಿ ಕನ್ನಡ ಚಲನ ಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ಸನ್ನಿ ಯನ್ನು ನೆನಪಿಸಿಕೊಂಡು ಭಾವುಕರಾದರು. ಅಲ್ಲದೇ, ದುಃಖ ತಡೆಯಲಾಗದೇ ಕಣ್ಣೀರು ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆಯಿತು. ಈ ಚಿತ್ರ ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಕಟ್ಟುಪಾಡಿಲ್ಲದ (unconditional) ಪ್ರೀತಿಗೆ ಉತ್ತಮ ಉದಾಹರಣೆ. ಇದು ಅತ್ಯಂತ ಪರಿಶುದ್ಧ ಪ್ರೀತಿ ಇದು ಎಂದು ಮುಖ್ಯಮಂತ್ರಿಗಳು ಗದ್ಗದಿತರಾಗಿ ನುಡಿದರು. ನಾಯಕನಟ ರಕ್ಷಿತ […]

Blood Donation: ಬಾಗಲಕೋಟೆ ಹೋಮಿಯೋಪಥಿಕ್ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆ

ಬಾಗಲಕೋಟೆ: ಬಾಗಲಕೋಟೆ ನಗರದ ಬಿ ವಿ ವಿ ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಯಿತು. ಈ‌ ಕಾರ್ಯಕ್ರ.ದಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ರಕ್ತಕ್ಕೆ ಪರ್ಯಾಯ ಎಂಬುದು ಯಾವುದೂ ಇಲ್ಲ. ದೇಹದ ಇತರ ಅಂಗಾಂಗಗಳನ್ನು ಕೃತಕವಾಗಿ ಉತ್ಪಾದಿಸಬಹುದು. ಆದರೆ ರಕ್ತಕ್ಕೆ ಪರ್ಯಾಯವಿಲ್ಲ. ಆದ್ದರಿಂದ ಎಲ್ಲ ದಾನಗಳಲ್ಲಿ ರಕ್ತ ದಾನವೇ ಶ್ರೇಷ್ಠ ದಾನ ಎಂದು ಹೇಳಿದರು. ಬಿ ವಿ ವಿ ಸಂಘದ ಕುಮಾರೇಶ್ವರ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ.ಕೇಶವ ಕುಲರ್ಣಿ, […]

IGNOU Admission: ವಿಜಯಪುರದಲ್ಲಿ ಇಗ್ನೋ ದೂರ ಶಿಕ್ಷಣ ಪ್ರವೇಶ ಆರಂಭ

ವಿಜಯಪುರ: ನಗರದ ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ನರ್ಸಿಂಗ್ ಕಾಲೇಜಿನಲ್ಲಿರುವ ಇಂದಿರಾಗಾAಧಿ ರಾಷ್ಟಿçÃಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ) ದೂರ ಶಿಕ್ಷಣ ನಾನಾ ಕೋರ್ಸಗಳಿಗೆ ೨೦೨೨ ವರ್ಷದ ಪ್ರವೇಶ ಪ್ರಾರಂಭವಾಗಿದೆ ಎಂದು ಸಂಯೋಜಕ ಡಾ.ನಿಂಗನಗೌಡ ಪಾಟೀಲ ತಿಳಿಸಿದ್ದಾರೆ. ಸಿಎಂಸಿಎಚೆನ್ (ಸರ್ಟಿಫಿಕೇಟ್ ಇನ್ ಮೆಟರ್ನಲ್ ಚೈಲ್ಡ್ ಹೆಲ್ತ್ ನರ್ಸಿಂಗ್), ಸಿಎನ್ಐಎನ್ (ಸರ್ಟಿಫಿಕೇಟ್ ಇನ್ ನ್ಯೂಬಾರ್ನ ಆಂಡ ಇನಫಂಟ್ ನರ್ಸಿಂಗ್), ಎಚ್‌ಬಿಎಚ್‌ಸಿ (ಸರ್ಟಿಫಿಕೇಟ್ ಇನ್ ಹೊಂ ಬೆಸಡ್ ಹೆಲ್ತಕೆರ್ ವೆಸ್ಟಮ್ಯಾನೆಜಮೆಂಟ್), ಸಿಎಫ್‌ಎಐಡಿ (ಸರ್ಟಿಫಿಕೇಟ್ ಇನ್‌ಫಸ್ಟೆಡ್),ಕೋಸ್‌ರ್ಗಳು ಅಧ್ಯಯನಕ್ಕೆ ಲಭ್ಯವಿದೆ. ಆಸಕ್ತರು 31 ಜುಲೈ 2022 ರೊಳಗಾಗಿ […]