ಬಾಗಲಕೋಟೆ: ಬಾಗಲಕೋಟೆ ನಗರದ ಬಿ ವಿ ವಿ ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಯಿತು.
ಈ ಕಾರ್ಯಕ್ರ.ದಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ರಕ್ತಕ್ಕೆ ಪರ್ಯಾಯ ಎಂಬುದು ಯಾವುದೂ ಇಲ್ಲ. ದೇಹದ ಇತರ ಅಂಗಾಂಗಗಳನ್ನು ಕೃತಕವಾಗಿ ಉತ್ಪಾದಿಸಬಹುದು. ಆದರೆ ರಕ್ತಕ್ಕೆ ಪರ್ಯಾಯವಿಲ್ಲ. ಆದ್ದರಿಂದ ಎಲ್ಲ ದಾನಗಳಲ್ಲಿ ರಕ್ತ ದಾನವೇ ಶ್ರೇಷ್ಠ ದಾನ ಎಂದು ಹೇಳಿದರು.
ಬಿ ವಿ ವಿ ಸಂಘದ ಕುಮಾರೇಶ್ವರ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ.ಕೇಶವ ಕುಲರ್ಣಿ, ಬಿವಿವಿ ಸಂಘದ ಬಾಗಲಕೋಟೆ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ಪವನ ಕುಲಕರ್ಣಿ ತಂಡದ ಪ್ರಯೋಗಶಾಲೆ ತಂತ್ರಜ್ಞರು ದಾನಿಗಳಿಂದ ರಕ್ತವನ್ನು ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ. ರವಿ ಕೋಟೆಣ್ಣವರ, ಡಾ. ಮಿಲಿಂದ ಬೆಳಗಾಂವಕರ. ಡಾ. ಅಮರೇಶ ಬಳಗಾನೂರ, ಡಾ. ರುದ್ರೇಶ ಕೊಪ್ಪಳ, ಡಾ. ಪ್ರದೀಪ ರೆಡ್ಡಿ, ಡಾ. ಲಿಂಗಾರೆಡ್ಡಿ ಉಪಸ್ಥಿತರಿದ್ದರು.
45 ಜನ ಹೋಮಿಯೋಪಥಿ ವೈದ್ಯ ವಿದ್ಯಾಥಿ೯ಗಳು ಹಾಗೂ ಉಪನ್ಯಾಸಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ದಾನಿಗಳಿಗೆ ಪ್ರಮಾಣ ಪತ್ರ ಹಾಗೂ ಪುಷ್ಪ ನೀಡಿ ಗೌರವಿಸಿ ಪ್ರೋತ್ಸಾಹಿಸಲಾಯಿತು.