Election Win: ವಾಯುವ್ಶ ಶಿಕ್ಷಕರ ಮತಕ್ಷೇತ್ರದಲ್ಲಿ ಹುಕ್ಕೇರಿ ಗೆಲುವು- ಯಾರಿಗೆ ಎಷ್ಟು ಮತ ಬಂದಿವೆ ಗೊತ್ತಾ?

ಬೆಳಗಾವಿ: ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಜಯಿಸಿ ಗೆಲುವಿನ ನಗೆ ಬೀರಿದ್ದಾರೆ.

ಬೆಳಗಾವಿಯ ಜ್ಯೋತಿ ಪಿ ಯು ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೇ ಭರ್ಜರಿ ಮುನ್ನಡೆ ಸಾಧಿಸಿದ ಪ್ರಕಾಶ ಹುಕ್ಕೇರಿ ತಮ್ಮ‌ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರನ್ನು ನಿರೀಕ್ಷೆಯಂತೆ ಭಾರೀ ಮತಗಳ ಅಂತರದಿಂದ ಸೋಲುಣಿಸಿದ್ದಾರೆ.

ಈ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿ ಅವರು ಚಲಾವಣೆಯಾದ ಒಟ್ಟು ಸಿಂಧು ಮತಗಳಲ್ಲಿ ಶೇ. 56.92 ಮತಗಳನ್ನು ಗಳಿಸುವ ಮೂಲಕ ನಿಗದಿತ ಗುರಿಗಿಂತ ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ.

ಈ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿ ಅವರಿಗೆ 11460 ಮತಗಳು ಬಂದರೆ ಅರುಣ ಶಹಾಪುರ ಪರ 6405 ಮತಗಳು ದಾಖಲಾಗಿವೆ.  ಈ ಮೂಲಕ ಪ್ರಕಾಶ ಹುಕ್ಕೇರಿ ಅವರು 5055 ಮತಗಳ ಭಾರಿ ಅಂತರದಿಂದ ಜಯಗಳಿಸಿದ್ದಾರೆ.

ದಾಖಲಾದ, ಸ್ವೀಕೃತ, ತಿರಸ್ಕೃತ ಮತಗಳು, ಯಾರಿಗೆ ಎಷ್ಟು ಮತ? ಮಾಹಿತಿ ಇಲ್ಲಿದೆ

ಒಟ್ಟು ದಾಖಲಾದ ಮತಗಳು 21402

ಸ್ವೀಕೃತ ಮತಗಳು- 20132

ತಿರಸ್ಕೃತ ಮತಗಳು- 1270

ಪ್ರಕಾಶ ಹುಕ್ಕೇರಿ(ಕಾಂಗ್ರೆಸ್)- 11460(ಗೆಲುವು)

ಅರುಣ ಶಹಾಪುರ(ಬಿಜೆಪಿ)- 6405

ಚಂದ್ರಶೇಖರ ಲೋಣಿ(ಜೆಡಿಎಸ್)- 544

ಎನ್ ಬಿ ಬನ್ನೂರ- 1009

ಶ್ರೀನಿವಾಸಗೌಡ ಗೌಡರ- 524

ಚಂದ್ರಶೇಖರ ಗುಡಸಿ- 101

ಬಸಪ್ಪ ಮಣಿಗಾರ- 39

ಶ್ರೀಕಾಂತ ಪಾಟೀಲ- 19

ದೇಸಾಯಿ ಜಯಪಾಲ ರಾಜಾರಾಮ- 10

ಅಪ್ಪಾಸಾಹೇಬ ಕುರಣೆ-9

ಶ್ರೀನಿಕ ಅಪ್ಪಾಸಾಹೇಬ ಜಂಗಟೆ-8

ಚಿಕ್ಕನರಗುಂದ ಸಂಗಮೇಶ- 4

ಗೆಲುವಿನ ಸರ್ಟಿಫಿಕೇಟ್ ಪಡೆದ ಪ್ರಕಾಶ ಹುಕ್ಕೇರಿ

ಜಯಗಳಿಸಿದ ನಂತರ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಪ್ರಕಾಶ ಹುಕ್ಕೇರಿ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಂದ ಗೆಲುವಿನ ಸರ್ಟಿಫಿಕೇಟ್ ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ ಉಪಸ್ಥಿತರಿದ್ದರು.

One Response

Leave a Reply

ಹೊಸ ಪೋಸ್ಟ್‌