MLC Counting: ವಿಪ‌ ಚುನಾವಣೆ: ಬೆಳಗಾವಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ- ಮಧ್ಯಾಹ್ನ ವೇಳೆಗೆ ಫಲಿತಾಂಶ ಸಾಧ್ಯತೆ

ಬೆಳಗಾವಿ: ವಿಧಾನ ಪರಿಷತ(Legislative Council) ವಾಯುವ್ಯ ಶಿಕ್ಷಕರ(Northwest Teachers) ಮತ್ತು ಪದವೀಧರ(Graduates)ಹಾಗೂ ಪಶ್ಚಿಮ ಪದವೀಧರ(West Graduates) ಮತಕ್ಷೇತ್ರಕಗಳ ಮತ ಎಣಿಕೆ ಕಾರ್ಯ ಬೆಳಗಾವಿಯಲ್ಲಿ(Belagavi) ಆರಂಭವಾಗಿದೆ.

ಇಲ್ಲಿಯ ಜ್ಯೋತಿ ಪಿಯು ಕಾಲೇಜಿನಲ್ಲಿರುವ ಮತ ಎಣಿಜೆ ಕೇಂದ್ರದಲ್ಲಿ ಬೆಳಗಾವಿ ವಲಯದ ಮೂರು ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ.

ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ

ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇದೆ ಎಂದೇ ಅರ್ಥೈಸಲಾಗುತ್ತಿದೆ‌. ಬಿಜೆಪಿಯಿಂದ ಸ್ಪರ್ಧಿಸಿರುವ ಅರುಣ ಶಹಾಪುರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯವಾಗಿ ಸಾಕಷ್ಟು ಪ್ರಬಕರಾಗಿರುವ ಮಾಜಿ ಸಚಿವ, ಮಾಜಿ ಸಂಸದರೂ ಆಗಿರುವ ಕಾಂಗ್ರೆಸ್ಸಿನ ಪ್ರಕಾಶ ಹುಕ್ಕೇರಿ ಈ ಬಾರಿ ವಿಧಾನ ಪರಿಷತ ಪ್ರವೇಶಿಸುವ ಹುಮ್ಮಸ್ಸು ಹೊಂದಿದ್ದಾರೆ‌. ಜೆಡಿಎಸ್ ನಿಂದ ಚಂದ್ರಶೇಖರ ಲೋಣಿ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ಟಿಕೇಟ್ ವಂಚಿತ ಎನ್. ಎ. ಬನ್ನೂರ ಈ ಬಾರಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ. ಪಕ್ಷೇತರರ ಅಭ್ಯರ್ಥಿ, ಜೆ ಡಿ ಎಸ್ ಅಭ್ಯರ್ಥಿ ಸ್ಪರ್ಧೆಯಿಂದ ಮತ ವಿಭಜನೆ ಸಾಧ್ಯತೆ ಹೆಚ್ಚಾಗಿದೆ.
ಆದರೆ, ಬಿಜೆಪಿಗಿಂತ ಕಾಂಗ್ರೆಸ್ಸಿಗರು ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ಅತೀವ ಆತ್ಮವಿಶ್ವಾಸದಲ್ಲಿದ್ದಾರೆ. ಬಿಜೆಪಿ ಈ ಬಾರಿಯೂ ಸಾಂಪ್ರದಾಯಿಕ ಮತ್ತು ಶಿಕ್ಷಕರ ಸಂಘಟನೆಗಳ ಬೆಂಬಲದಿಂದ ಗೆಲ್ಲುವ ವಿಶ್ವಾಸ ಹೊಂದಿದೆ.

ಇದನ್ನೂ ಓದಿ:

https://basavanadu.com/2022/06/14/vijayapura-mlc-election-a-run-shahapur-confident-if-winning-in-first-round-itself/

ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯ ಹಣಮಂತ ನಿರಾಣಿ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದು ಅವರೂ ಕೂಡ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಮತ ಎಣಿಕೆ ಹೇಗೆ ನಡೆಯುತ್ತೆ ಗೊತ್ತಾ?
ಮೊದಲಿಗೆ ಎಲ್ಲ‌ ಮತಪತ್ರಗಳನ್ನು ಮತಪೆಟ್ಡಿಗೆಯಿಂದ ಹೊರ ತೆಗೆದು ತಲಾ 25 ರಂತೆ ಒಂದು ಕಟ್ಟು(ಬಂಡಲ್) ಮಾಡಲಿ ಒಂದು ಡ್ರಮ್(ಬ್ಯಾರೆಲ್) ನಲ್ಲಿ ಹಾಕಿ ಮಿಕ್ಸ್ ಮಾಡಲಾಗುತ್ತದೆ. ಎಲ್ಲ ಮತಪೆಟ್ಟಿಗಳಿಂದ ಮತಪತ್ರಗಳನ್ನು ಹೊರ ತೆಗೆಯುವ ಪ್ರಕ್ರಿಯೆ ಮುಗಿದ ನಂತರ ತಲಾ 25 ರಂತೆ ಮಿಕ್ಸ್ ಮಾಡಲಾಗಿರುವ ಮತಪತ್ರಗಳ ಬಂಡಲ್ ಗಳನ್ನು ಹೊರ ತೆಗೆದು ಮತ ಎಣಿಕೆ ಟೇಬಲ್ ಮೇಲೆ ಇಡಲಾಗುತ್ತೆ. ಈ ಸಂದರ್ಭದಲ್ಲಿ ತಿರಸ್ಕೃತ ಮತಗಳನ್ನು ಬೇರ್ಪಡಿಸಿ ಅಂಗೀಕರಿಸಲಾದ ಮತಪತ್ರಗಳನ್ನು ಯಾವ ಅಭ್ಯರ್ಥಿಯ ಪರ ಮತ ಚಲಾವಣೆಯಾಗಿದೆಯೋ ಆ ಅಭ್ಯರ್ಥಿಯ ಹೆಸರಿನ ಟ್ರೆಯಲ್ಲಿ ಆ ಮತವನ್ನು ಹಾಕಲಾಗುತ್ತದೆ. ನಂತರ ಸ್ವೀಕೃತ ಮತಗಳ ಆಧಾರದ ಮೇಲೆ ಪ್ರಥಮ ಪ್ರಾಶಸ್ತ್ಯದ ಮತಗಳ‌ ಮೌಲ್ಯವನ್ನು ನಿಗದಿ ಪಡಿಸಲಾಗುತ್ತೆ.
ಉದಾ: ಈಗ ಶಿಕ್ಷಕರ ಮತಕ್ಷೇತ್ರಕ್ಕೆ ಚಲಾವಣೆಯಾದ ಸ್ವೀಕೃತ ಮತಗಳನ್ನು ಎರಡು ಭಾಗಗಳಾಗಿ‌ ವಿಂಗಡಿಸಲಾಗುತ್ತದೆ. ಅದಕ್ಕೆ ಒಂದು‌ ಮತ ಹೆಚ್ಚಿಗೆ ನಿಗದಿ ಪಡಿಸಲಾಗುತ್ತದೆ. ಈ ನಿಗದಿತ ಮತವನ್ನು ಪಡೆದ ಅಭ್ಯರ್ಥಿಯನ್ನು ಪ್ರಥಮ ಸುತ್ತಿನಲ್ಲಿಯೇ ವಿಜಯಿ ಎಂದು‌ ಘೋಷಿಸಲಾಗುತ್ತದೆ.
20000 ಮತಗಳು ಸ್ವೀಕೃತವಾಗಿದ್ದರೆ ಅದನ್ನು ಎರಡು ಭಾಗಗಳಾಗಿ ವಿಂಗಡಿಸಿದಾಗ ತಲಾ 10000 ಮತಗಳು ಆಗುತ್ತವೆ. ಇಲ್ಲಿ 10001 ಪ್ರಥಮ‌ ಪ್ರಾಶಸ್ತ್ಯದ ಮತ ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇಲ್ಲಿ ಯಾರೊಬ್ಬರೂ ನಿಗದಿತ ಮೊದಲ‌ ಪ್ರಾಶಸ್ತ್ಯದ ಮತ ಪಡೆಯದಿದ್ದರೆ ಎರಡನೇ ಸುತ್ತು ಆರಂಭವಾಗುತ್ತದೆ.

ಆದರೆ, ಸಧ್ಯದ ಚುನಾವಣೆ ಮತದಾನದ ವಿಶ್ಲೇಷಣೆ ಮತ್ತು ಅಭ್ಯರ್ಥಿಗಳ ವಿಶ್ವಾಸದಂತೆ ಮೊದಲ‌ ಸುತ್ತಿನಲ್ಲಿಯೇ ಮತ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

Leave a Reply

ಹೊಸ ಪೋಸ್ಟ್‌