Shahapur Reaction: ಸೋಲನ್ನು ಸ್ವೀಕರಿಸುತ್ತೇನೆ- ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ- ಅರುಣ ಶಹಾಪುರ

ಬೆಳಗಾವಿ: ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನಡೆಸ ಚುನಾವಣೆಯಲ್ಲಿ ತಾವು ಸೋಲನ್ನು ಒಪ್ಪಿಕೊಂಡು ಮುಂದುವರೆಯುವುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿ ಅರುಣ ಶಹಾಪುರ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ಅವರು, ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಬಗ್ಗೆ ಜನ ನಂಬಿಕೆಯನ್ನು ಕಳೆದುಕೊಳ್ಳುವ ಸ್ಥಿತಿ ಇದ್ದಾಗಲೂ ನನಗೆ ಬೆಂಬಲಚಾಗಿ ನಿಂತು ಮತ ಹಾಕಿದ ಶಿಕ್ಷಕರು ಆಶಾವಾದ ಮೂಡಿಸಿದ್ದಾರೆ. ಹಣದ ಪ್ರಭಾವ ಮತ್ತು ರಾಜಕೀಯ ಶಡ್ಯಂತ್ರ ಮಧ್ಯೆಯೂ ಕೂಡ ನನ್ನ ಪರವಾಗಿ ನಿಂತು ಮತ ಚಲಾಯಿಸಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಪರಾಜಿತ ಅಭ್ಯರ್ಥಿ ಅರುಣ ಶಹಾಪುರ

ಚುನಾವಣೆಯಲ್ಲಿ ಹಣ ಹಂಚಿಕೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣ ಒಂದು ಹೋರಾಟ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈ ಚುನಾವಣೆಯಲ್ಲಿ ಅರುಣ ಶಹಾಪುರ ಬಹಳ ಪಾಠವನ್ನು ಕಲಿತಿದ್ದೇನೆ. ಸೋಲನ್ನು ಸ್ವೀಕರಿಸಿದ್ದೇನೆ. ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ನನ್ನ ಪಕ್ಷದ ಎಲ್ಲಾ ಸಚಿವರು ಶಾಸಕರು ಮತ್ತು ಪದಾಧಿಕಾರಿಗಳು ಪ್ರಾಂಜಲ ಮನಸ್ಸಿನಿಂದ ಪ್ರಾಮಾಣಿಕವಾಗಿ ಚುನಾವಣೆ ಮಾಡಿದ್ದಾರೆ. ನನಗೆ ಯಾರ ಬಗ್ಗೆಯೂ ದೂರು ಇಲ್ಲ ಎಂದು ಅವರು ತಿಳಿಸಿದರು.

ಮುಂದಿನ ವಿಚಾರಗಳ ಬಗ್ಹೆ ಏನೂ ಯೋಚಿಸಿಲ್ಲ. ಚುನಾವಣೆ ಎಂದರೇನು? ಹೋರಾಟವೆಂದರೆ ಏನು? ಎಂಬುದು ನನಗೆ ಗೊತ್ತಿದೆ. ನಾನು ಪ್ರಜಾತಂತ್ರದ ಹೋರಾಟದಲ್ಲಿ ನಂಬಿಕೆ ಇಟ್ಟುಕೊಂಡು ಬಂದಿದ್ದೇನೆ. ನನಗೆ ಇಂಥ ವ್ಯತಿರಿಕ್ತ ಪರಿಸ್ಥಿತಿಯಲ್ಲಿಯೂ ಕೂಡ ನನ್ನ ಪರವಾಗಿ ಮತದಾನ ಮಾಡಿದ ಶಿಕ್ಷಕರು ನನಗೆ ಆಶಾಕಿರಣವಾಗಿ ಕಂಡಿದ್ದಾರೆ. ಈ ಶಿಕ್ಷಕರ ಪರವಾಗಿ ನಾನು ಇದ್ದೇನೆ. ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಅರುಣ ಶಹಾಪುರ ಹೇಳಿದರು.

ಭಿನ್ನಮತ ಇಲ್ಲ

ಬಿಜೆಪಿಯಲ್ಲಿ ಭಿನ್ನಮತ ಇರುವ ಬಗ್ಗೆ ಮಾತನಾಡುವುದು ಬೇಡ. 22 ಜನ ಬಿಜೆಪಿ ಶಾಸಕರು, ಐದು ಜನ ಸಚಿವರು ಮತ್ತು ನಾಲ್ಕು ಜನ ಸಂಸದರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ನನಗೆ ಇಷ್ಟೊಂದು ಮತಗಳು ಬಂದಿವೆ. ನನ್ನ ವಿರೋಧಿ ಅಲೆ ಇದೆ ಎಂಬುದನ್ನು ಒಪ್ಪುವುದಿಲ್ಲ. ನನ್ನ ಪರವಾಗಿ ಶಿಕ್ಷಕರು ಚಲಾಯಿಸಿದ ಮತಗಳ ಪ್ರಮಾಣ ಇದಕ್ಕೆ ಉತ್ತರವಾಗಿದೆ. ನನ್ನ ಪರವಾಗಿ ನಿಂತ ಶಿಕ್ಷಕರ ಪರವಾಗಿ ಸದಾ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಸೋಲಿನ ಆತ್ನಾವಲೋಕನ

ಚುನಾವಣೆ ರದ್ದುಪಡಿಸಬೇಕು ಎಂದು ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆ ಬಗ್ಗೆ ನಾನು ಯೋಚನೆ ಮಾಡಿಲ್ಲ. ‌ಮುಂದೆ ಚಿಂತನೆ ಮಾಡುತ್ತೇನೆ. ನನ್ನ ಸೋಲು ಆರ್ ಎಸ್ ಎಸ್ ಸೋಲು ಅಲ್ಲ. ಪಕ್ಷದ ಶಾಸಕರು ಇದಕ್ಕೆ ಕಾರಣವಲ್ಲ. ಕೆಲ ಸಂದರ್ಭಗಳಲ್ಲಿ ಮತದಾರರಿಗೆ ಅವರದೇ ಆದ ವಿವೇಚನೆ ಇರುತ್ತೆ. ಅವರು ಕೈಗೊಂಡ ನಿರ್ಣಯವನ್ನು ಗೌರವಿಸೋಣ. ಸೋಲಿನಿಂದ ಪಾಠ ಕಲಿಯುತ್ತೇನೆ. ಸೋಲಿನ ಕಾರಣಗಳ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಂಡು ಸರಿಪಡಿಸಿಕೊಳ್ಳುತ್ತೇವೆ. ಹಣದ ಹೊಳೆಯ ಮಧ್ಯೆ ಎದುರಾದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುತ್ತೇವೆ. ವಿರೋಧ ಪಕ್ಷಗಳ ರಾಜಕೀಯ ಷಡ್ಯಂತ್ರ ಇದರಲ್ಲಿದೆ. ಹಣದ ಹೊಳೆಯ ಮಧ್ಯೆಯೂ ನನ್ನ ಜೊತೆ ನಿಂತಿರುವ ಸಾವಿರಾರು ಶಿಕ್ಷಕರು ಅಂಧಕಾರದಲ್ಲಿ ನನಗೆ ಆಶಾಕಿರಣವಾಗಿ ನಿಂತಿದ್ದಾರೆ. ಅವರಿಗೆ ಧ್ವನಿ ಆಗುತ್ತೇನೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಅವರು ತಿಳಿಸಿದರು.

ಬಿಜೆಪಿಯ ಎಲ್ಲರೂ ಕೆಲಸ ಮಾಡಿದ ಮೇಲೆಯೂ ಚುನಾವಣೆಲಿ ಸೋತಿದ್ದೇವೆ. ಇದನ್ನು ಹೈಕಮಾಂಡ್ ಗಮನಕ್ಕೆ ತರುವ ಅಗತ್ಯವಿಲ್ಲ. ನನ್ನ ಸೋಲನ್ನು ಮಹಾಂತೇಶ ಕವಟಗಿಮಠ ಅವರ ಸೋಲಿನೊಙದಿಗೆ ಹೋಲಿಸುವುದು ಬೇಡ. ನಾನು ಎಲ್ಲರ ತಮ್ಮನಂತೆ ಇದ್ದೇನೆ. ಯಾರು ನನಗೆ ಕೆಟ್ಟದ್ದನ್ನು ಮಾಡಿಲ್ಲ. ನನಗೆ ಹಿನ್ನಡೆಯಾಗಿದೆ. ಚೇತರಿಸಿಕೊಂಡು ಮುಂದೆ ಸಾಗುತ್ತೇನೆ. ಇಲ್ಲಿ ಜಾತಿಗೀತಿ ಯಾವುದು ಕೆಲಸ ಮಾಡಿಲ್ಲ. ಹಣ ಹಂಚಿಜೆ ಪ್ರಭಾವ ಬೀರಿದೆ ಎಂಬ ಮಾತುಗಳು ಶಿಕ್ಷಕರನ್ನು ಸಮೂಹ ಸನ್ನಿಗೆ ದೂಡಿದಂತೆ ಮಾಡಿದೆ ಎಂದು ಅವರು ಹೇಳಿದರು.

ಮುಂದಿನ ರಾಜಕೀಯ ನಡೆ

ನಾನು ರಾಜಕೀಯದಲ್ಲಿ ಮುಂದುವರಿಯಬೇಕಾ? ಅಥವಾ ನಿವೃತ್ತಿ ಆಗಬೇಕಾ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ. ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುದಿ ಎತ್ತು ಎಂದು ಹೇಳಿದ್ದು ತಪ್ಪಾಗಿದೆ. ಮತದಾರರ ಅವರ ಪರವಾಗಿ ತೀರ್ಪು ನೀಡಿದ್ದಾರೆ. ಅದನ್ನು ಒಪ್ಪಿಕೊಳ್ಳೋಣ ಎಂದು ಹೇಳಿದ ಬಿಜೆಪಿ ಅಭ್ಯರ್ಥಿ, ನೀವು ಹಣ ಹಂಚಿಕೆ ಮಾಡಿದಿರಿ ಎಂಬ ಪ್ರಶ್ನೆಗೆ, ಬಡವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಎಂದು ಮಾರ್ಮಿಕವಾಗಿ ಬಸವಣ್ಣನವರ ವಚನ ಹೇಳುವ ಮೂಲಕ ನಮ್ಮ ಕಡೆಯಿಂದ ಯಾವುದೇ ಹಣ ಹಂಚಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನು ಹೋರಾಟ ವಿಚಾರ

ಕಾನೂನು ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ನವರು ಈಗಷ್ಟೇ ಗೆದ್ದು ಗುಲಾಲು ಹಂಚಿಕೊಳ್ಳುತ್ತಿದ್ದಾರೆ. ಸಂತೋಷ ಪಡುತ್ತಿದ್ದಾರೆ. ಅದಕ್ಕೆ ಯಾಕೆ ಅಡ್ಡಿಪಡಿಸುತ್ತಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಒಗ್ಹಟ್ಟು

ಬಿಜೆಪಿಯೊಳಗೆ ಗಳಿಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮ ಇಷ್ಟೊಂದು ಸಂಖ್ಯೆಯಲ್ಲಿ ಮತಗಳು ನನಗೆ ಬರಲು ಸಾಧ್ಯವಾಗಿದೆ. ಈ ಪ್ರಮಾಣದ ಹಣದ ಮಧ್ಯೆಯೂ ಇಷ್ಟೊಂದು ಪ್ರಮಾಣದಲ್ಲಿ ಮತಗಳು ಬಂದಿವೆ. ಕೋರೆಯವರು ಕೈಹಿಡಿದಿಲ್ಲ ಬಿವಿವಿಎಸ್ ಕೆಲಸ ಮಾಡಿಲ್ಲ ಎಂಬುದಯ ತಪ್ಪು. ಮುಖ್ಯಮಂತ್ರಿಗಳೇ ಖುದ್ದಾಗಿ ಬಂದು ಬೆಳಗಾವಿಯಲ್ಲಿ ಪ್ರಚಾರ ಮಾಡಿದ್ದಾರೆ. ಎಲ್ಲರೂ ಕೈ ಜೋಡಿಸಿದ್ದರಿಂದಲೇ ಇಷ್ಟೊಂದು ಮತಗಳು ಬಂದಿವೆ. ತಿರಸ್ಕೃತ ಮತಗಳ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆಯೂ ಕೂಡ ಮತದಾರರಲ್ಲಿ ಜಾಗೃತಿ ಮೂಡಿಸುತ್ತೇವೆ. ಜಾತಿ ಲೆಕ್ಕಾಚಾರ ಇಲ್ಲಿ ಕೆಲಸ ಮಾಡಿಲ್ಲ. ನಾನು ಬಿಜೆಪಿಯವರ ನಾನು ಭಾರತೀಯ ಎಂದು ಅರುಣ ಶಹಾಪುರ ಹೇಳಿದರು.

Leave a Reply

ಹೊಸ ಪೋಸ್ಟ್‌