ವಿಜಯಪುರ: ಲಿಂಗಾಯಿತ ಧರ್ಮ ಜಾಗೃತೆಗಾಗಿ ಶರಣು ಪಡೆ ಲಿಂಗಾಯಿತ ಜಾಗರಣೆ ವೇದಿಕೆ ಅಧ್ಯಕ್ಷ ಕಲ್ಲಪ್ಪ ಕಡೆಚೂರ ಕಂದಾಚಾರ ತೊಲಗಿಸಲು ಶ್ರಮಿಸಿದ ಬಸವಣ್ಣನವರ ತತ್ವ ಸಿದ್ದಾಂತವನ್ನು ಪವಾಡ ಬಯಲು ಕಾರ್ಯಕ್ರಮ ನಡೆಸುವ ಮೂಲಕ ಗಮನ ಸೆಳೆದರು.
ವಿಜಯಪುರ ನಗರದ ಮಂಜುನಾಥ ನಗರದಲ್ಲಿರುವ ಲಕ್ಷಿ ಗುಡಿ ಬಳಿ ಅಂಧಶ್ರದ್ಧೆ ಮತ್ತು ಕಂದಾಚಾರ ನಿರ್ಮೂಲನೆಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಂಟು ಇಂಚಿನ ಮಳೆಯನ್ನು ಮೂಗಿನಲ್ಲಿ ಹತೋಡಿ( ಹ್ಯಾಮರ್ )ನಿಂದ ಹೋಡೆದು ಕೋಂಡರು. ಅಲ್ಲದೇ, ಹಗ್ಗದಿಂದ ಕುತ್ತಿಗೆಗೆ ಉರಲು(ನೇಣು) ಹಾಕಿಕೊಂಡು ಅದರಿಂದ ಪಾರಾಗುವುದನ್ನು ಹೇಗೆ ಎಂಬುದನ್ನು ತೋರಿಸಿಕೊಟ್ಟರು. ಹಾಳೆ ಯಿಂದ ನೋಟು ಮಾಡಿ ತೊರಿಸಿದರು. ಬೂದಿಯಲ್ಲಿ ಎಣ್ಣೆಯನ್ನು ಬಳಸಿ ಬೆಂಕಿ ಹಚ್ಚಿ ತೋರಿಸಿದರು. ಅಲ್ಲದೇ, ಅನೇಕ ಇನ್ನೂ ಅನೇಕ ಸಂಗತಿಗಳನ್ನು ಬಯಲು ಮಾಡಿದರು.
ನಾಗರಾಳ ಯೋಗಾಶ್ರಮದ ಶ್ರೀ ಅನಂತಾನಂದ ಶರಣರು ಮತ್ತು ಜ್ಞಾನೆಶ್ವರ ಸ್ವಾಮಿಜೀ ನಾಗರಾಳ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಎನ್. ಕೆ. ಪಾಟೀಲ, ಶ್ರೀಕಾಂತ ಬಡಿಗೇರ, ಶಿವಾನಂದ ಹಿಪ್ಪರಗಿ, ಮಾಹಾಂತೆಶ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.