PUC Rank: ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ, ಜಿಲ್ಲೆಗೆ ನಾನಾ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದ ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ, 19: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಗಳಿಸಿದ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸ್ಥಾನ ಗಳಿಸಿರುವ ಬಿ ಎಲ್ ಡಿ ಇ ಸಂಸ್ಥೆಯ ನಾನಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ ಸನ್ಮಾನಿಸಿ ಗೌರವಿಸಿದರು.

ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ವಿದ್ಯಾರ್ಥಿ ಯಶವರ್ಧನ ಶಹಾ ಒಟ್ಟು 594 ಅಂಕ(ಶೇ.  99) ಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.

ಅಲ್ಲದೇ, ಇದೇ ಕಾಲೇಜಿನ ವಿದ್ಯಾರ್ಥಿನಿ ಏಕತಾ ಬನ್ಸಾಲಿ ಒಟ್ಟು 588 ಅಂಕ(ಶೇ. 98) ಗಳಿಸುವ ಮೂಲಕ ವಿಜಯಪುರ ಜಿಲ್ಲೆಗೆ 3ನೇ ಸ್ಥಾನ ಪಡೆದಿದ್ದಾಳೆ.  ಸ್ನೇಹಾ ಔರಂಗಾಬಾದ ಒಟ್ಟು 587 ಅಂಕ(ಶೇ. 97.80) ಗಳಿಸಿ ವಿಜಯಪುರ ಜಿಲ್ಲೆಗೆ 4ನೇ ಸ್ಥಾನ ಪಡೆದಿದ್ದಾಳೆ.  ಪ್ರಥಮ ಸುರಾನಾ ಒಟ್ಟು 585 ಅಂಕ(ಶೇ. 97.50) ಜಿಲ್ಲೆಗೆ 5ನೇ ಸ್ಥಾನ, ದಿಯಾ ಕಲಬುರ್ಗಿ ಒಟ್ಟು 584 ಅಂಕ(ಶೇ. 97.30) ಗಳಿಸಿ ಜಿಲ್ಲೆಗೆ 7ನೇ ಸ್ಥಾನ, ಎಸ್ . ಎಸ್. ಪಿಯು ಕಾಲೇಜಿನ ಪರಶುರಾಮ ದಳವಾಯಿ ಒಟ್ಟು 583 ಅಂಕ(ಶೇ. 97) ಗಳಿಸಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ 8 ಸ್ಥಾನ ಮತ್ತು ಎಸ್. ಎಸ್. 7 ಸುಷ್ಮಿತಾ ತೊರವಿ ಒಟ್ಟು 588 ಅಂಕ(ಶೇ. 98) ಗಳಿಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ.

ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಂ. ಬಿ. ಪಾಟೀಲ ಸನ್ಮಾನಿಸಿದರು

ಜಮಖಂಡಿ ತಾಲೂಕಿನ ಸಾವಳಗಿ ಎಸ್. ಡಿ. ಎಸ್. ಜಿ. ಪಿಯು ಕಾಲೇಜಿನ ಅಶ್ವಿನಿ ಪಡತಾರೆ ಒಟ್ಟು 582 ಅಂಕ(ಶೇ. 97) ಅಂಕ ಗಳಿಸಿ ಬಾಗಲಕೋಟೆ ಜಿಲ್ಲೆಗೆ 6ನೇ ಸ್ಥಾನ ಪಡೆದಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸಿಹಿ ನೀಡಿದ ಎಂ. ಬಿ. ಪಾಟೀಲ, ಇವರ ಮುಂದಿನ ಶಿಕ್ಷಣ ಉಜ್ವಲವಾಗಿರಲಿ.  ಶೈಕ್ಷಣಿಕ ರಂಗದಲ್ಲಿ ಇನ್ನೂ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯ ಮತ್ತು ಪೋಷಕರ ಹಾಗೂ ಕಾಲೇಜುಗಳ ಗೌರವವನ್ನು ಹೆಚ್ಚಿಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ, ಆಡಳಿತಾಧಿಕಾರಿಗಳಾದ ಬಿ. ಆರ್. ಪಾಟೀಲ, ಐ. ಎಸ್. ಕಾಳಪ್ಪನವರ, ಎಸ್. ಎಸ್. ಪಿಯು ಕಾಲೇಜು ಪ್ರಾಚಾರ್ಯ ಡಾ. ಜಿ. ಡಿ. ಅಕಮಂಚಿ, ಬಿ. ಎಂ. ಪಾಟೀಲ ಪಿಯು ಕಾಲೇಜಿನ ಪ್ರಾಚಾರ್ಯ ನವೀನ್ ಎಸ್, ಜಮಖಂಡಿ ಕಾಲೇಜಿನ ಆಡಳಿತಾಧಿಕಾರಿ ಎಸ್. ಎಚ್. ಲಗಳಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌