ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ದೆಹಲಿಯ ಟೈಮ್ಸ್ ಎಂಜಿನಿಯರಿಂಗ್ ಪತ್ರಿಕೆ ನಡೆಸಿದ 2022ನೇ ವರ್ಷದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳ ಸಮೀಕ್ಷೆಯಲ್ಲಿ ಭಾರತದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 41ನೇ ಹಾಗೂ ಕರ್ನಾಟಕದಲ್ಲಿ 6ನೇ ಸ್ಥಾನವನ್ನು ಪಡೆದಿದೆ ಎಂದು ಪ್ರಾಚಾರ್ಯ ಡಾ. ವಿ. ಜಿ. ಸಂಗಮ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿವರ್ಷ ಟೈಮ್ಸ್ ಎಂಜಿನಿಯರಿಂಗ್ ಪತ್ರಿಕೆ ನಡೆಸುವ ಸಮೀಕ್ಷೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳ ಪ್ರವೇಶಾತಿ, ಶೈಕ್ಷಣಿಕ ಚಟುವಟಿಕೆಗೆಳು, ಸಂಶೋಧನೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಅಧ್ಯಯನ ಮಾಡಿ, ಆಲ್ ಇಂಡಿಯಾದಲ್ಲಿ ರ್ಯಾಂಕನ್ನು ಘೋಷಿಸುತ್ತದೆ ಎಂದರು.
ಕಾಲೇಜಿನ ಸಾಧನೆಗೆ ಬಿ.ಎಲ್.ಡಿ.ಇ ಅಧ್ಯಕ್ಷ, ಶಾಸಕ ಡಾ. ಎಂ.ಬಿ.ಪಾಟೀಲ, ಆಡಳಿತಮಂಡಳಿ ಹಾಗೂ ಕಾಲೇಜಿನ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.