Father’s Day: ಪ್ರೇರಣಾ ಪಬ್ಲಿಕ್ ಸ್ಕೂಲಿನಲ್ಲಿ ತಂದೆಯ ಪಾದಪೂಜೆ ಮಾಡಿದ ಮಕ್ಕಳು

ವಿಜಯಪುರ: ವಿಶ್ವ ಅಪ್ಪಂದಿರ ದಿನಾಚರಣೆ ಅಂಗವಾಗಿ ಬಸವ ನಾಡು ವಿಜಯಪುರದ ಪ್ರೇರಣಾ ಪಬ್ಲಿಕ್ ಸ್ಕೂಲಿನಲ್ಲಿ ವಿನೂತನ ಕಾರ್ಯಕ್ರಮ ನಡೆಯಿತು.

ವಿಜಯಪುರದ ಪ್ರೇರಣಾ ಶಾಲೆಯಲ್ಲಿ ವಿಶ್ವ ಅಪ್ಪಂದಿರ ದಿನ ಅಚರಿಸಲಾಯಿತು

 

ಗುರುಗಳ, ಮಾತೆ ಪಾದಪೂಜೆ ನಡೆಸುವುದು ಇತ್ತೀಚೆಗೆ ಮಾಮೂಲಾಗಿದೆ. ಆದರೆ, ಈ ಶಾಲೆಯಲ್ಲಿ ಮಕ್ಕಳು ಅಂದರೆ ಇಲ್ಲಿನ ವಿದ್ಯಾರ್ಥಿಗಳು ತಂತಮ್ನ‌ ಅಪ್ಪಂದಿರ ಪಾದಪೂಜೆ ಮಾಡುವ ಮೂಲಕ ಗಮನ ಸೆಳೆದರು.
ತಂದೆಯ ಪಾದಗಳನ್ನು ಜಲದಿಂದ ಸ್ವಚ್ಛಗೊಳಿಸಿದ ಮಕ್ಕಳು‌ ನಂತರ ಆ ಪಾದಗಳಿಗೆ ವಿಭೂತಿ ಮತ್ತು ಕುಂಕುಮ ಹಚ್ಚಿ ಪುಷ್ಪ ಸಮರ್ಪಿಸಿ ಪೂಜೆ ಮಾಡುವ ಮೂಲಕ ಧನ್ಯತೆ ತೋರಿದರು. ಮಕ್ಕಳು ತಂದೆಯನ್ನು ದೇವರಂತೆ ಕಾಣಲಿ ಎಂಬುದು ಈ ಕಾರ್ಯಕ್ರಮದ ಸದುದ್ದೇಶವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೇರಣಾ ಶಾಲೆಯ ಅಧ್ಯಕ್ಷ ಡಾ. ಅರವಿಂದ ಪಾಟೀಲ, ಮಕ್ಕಳು ಗುರು-ಹಿರಿಯರಿ ಬಗ್ಗೆ ಪೂಜ್ಯ ಭಾವನೆಯಿಂದ ಗೌರವಿಸಬೇಕು. ಪ್ರೀತಿ, ವಿಶ್ವಾಸದಿಂದ ಇರಬೇಕು ಎಂದು ಹೇಳಿದರು.

ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಕೇವಲ ತಂದೆಯ‌ ಪಾದಪೂಜೆ ಮಾತ್ರವಲ್ಲ ಕೆಲವು ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುಕ್ರುತ ಎ ಪಾಟೀಲ, ಶಿವಗಂಗಾ ಗುಗ್ಗವಾಡ, ವಿದ್ಯಾಶ್ರೀ ಶಿರನಾಳ, ಜಬೀನಾ ಮುಲ್ಲಾ, ಸತೀಶ ಕುಲಕರ್ಣಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌