ವಿಜಯಪುರ: ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ನಗರದ ಐತಿಹಾಸಿಕ ಗಗನ ಮಹಲ ಆವರಣದಲ್ಲಿ 8ನೇ ಅಂತಾರಾಷ್ಡ್ರೀಯ ಯೋಗ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಭವ್ಯ ಪರಂಪರೆ ಮತ್ತು ಸಂಸ್ಕೃತಿಯನ್ನು ಭಾರತದ ಋಷಿಮುನಿಗಳು ಸದೃಢ ಆರೋಗ್ಯಕ್ಕಾಗಿ ಯೋಗವನ್ನು ನಮಗೆಲ್ಲರಿಗೂ ವರವಾಗಿ ನೀಡಿದ್ದಾರೆ. ಈ ಯೋಗದ ಆರೋಗ್ಯ ಗುಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ. ಈಗ ವಿಶ್ವಾದ್ಯಂತ 180ಕ್ಕೂ ಹೆಚ್ಚು ರಾಷ್ಟ್ರಗಳು ಯೋಗವನ್ನು ಆಚರಣೆ ಮಾಡುತ್ತಿವೆ. ದು ನಮೆಗೆಲ್ಲ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ. ಮುಖಂಡರಾದ ಮಲ್ಲಿಕಾರ್ಜುನ, ಉಮೇಶ ಕೋಳಕೂರ, ಸುರೇಶ ಬಿರಾದಾರ, ಚಿದಾನಂದ ಚಲವಾದಿ, ಮಲ್ಲನಗೌಡ ಪಾಟೀಲ, ವಿಜಯ ಜೋಶಿ, ಭರತ ಕೋಳಿ, ಮಲ್ಲಮ್ಮ ಜೋಗೂರ, ಗೋಪಾಲ ಘಟಕಾಂಬ್ಳೆ, ಕಾಂತು ಶಿಂಧೆ, ರಾಜೇಶ ತಾವಸೆ, ವಿಠ್ಠಲ ನಡುವಿನಕೇರಿ, ಉದಯ ಕನ್ನೊಳ್ಳಿ, ಸಂಗು ಉಕ್ಕಲಿ, ವಿನಾಯಕ ದಹಿಂಡೆ, ರಾಜೇಂದ್ರ ವಾಲಿ, ಸಿದ್ಧರಾಮಯ್ಯ ಮಲ್ಲಿಕಾರ್ಜುನಮಠ, ಸಂಪತ ಕೋವಳ್ಳಿ, ರಾಹುಲ್ ಜಾಧವ, ವಿಕಾಸ ಪದಕಿ, ರಾಜಶೇಖರ ಮಗಿಮಠ, ಸಂತೋಷ ನಿಂಬರಗಿ ಮುಂತಾದವರು ಭಾಗವಹಿಸಿದ್ದರು.