Shivanand Patil Yatnal: ಯತ್ನಾಳ ಎಂಪಿ ಆಗುವಾಗ ನಾನೂ ಜೊತೆಯಲ್ಲಿದ್ದೆ- ಯತ್ನಾಳ ಗೆ ಶಾಸಕ ಶಿವಾನಂದ ಪಾಟೀಲ ಹಾಕಿದ ಸವಾಲೇನು ಗೊತ್ತಾ?

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ‌ ಈ ಮುಂಚೆ ಸಂಸದರಾಗುವಾಗ ನಾನೂ ಬಿಜೆಪಿಯಲ್ಲಿ ಅವರ ಜೊತೆ ಇದ್ದೆ. ಈಗ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಅವರೂ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ತೋರಿಸಲಿ ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಸವಾಲು ಹಾಕಿದ್ಸಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ತಮ್ಮ ಹಾಗೂ ತಮ್ಮ ಸಹೋದರನ ವಿರುದ್ಧ ಯತ್ನಾಳ ಹೆಸರು ಹೇಳದೆ ಮಾಡುತ್ತಿರುವ ಆರೊಪಗಳಿಗೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು. ಅಣ್ಣ ಒಂದು ಪಕ್ಷದಲ್ಲಿದ್ದಾನೆ. ತಮ್ಮ ಒಂದು ಪಕ್ಷದಲ್ಲಿದ್ದಾನೆ ಎಂದು ಯತ್ನಾಳ ಮಾಡಿರುವ ಟೀಕೆಗೂ ಅವರು ವಾಗ್ದಾಳಿ ನಡೆಸಿದರು.

ನನಗೆ ಯಾವುದೇ ಪರ್ಮನೆಂಟ್ ಪಕ್ಷ ಮತ್ತು ಮತಕ್ಷೇತ್ರವಿಲ್ಲ. ಯಾವ ಕ್ಷೇತ್ರಕ್ಕೆ ಜನ ನನ್ನನ್ನು ಬಯಸುತ್ತಾರೆ ಅಲ್ಲಿಗೆ ಹೋಗಲು ನಾನು ರೆಡಿ ಇದ್ದೇನೆ. ಇದೆ ಕ್ಷೇತ್ರ ಎಂದು ನಾನು ಸೀಮಿತವಾಗಿಲ್ಲ. ಕಾಂಗ್ರೆಸ್ಸಿನವರು ಬಬಲೇಶ್ವರ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟರೆ ಹೋಗಿ ಸ್ಪರ್ಧಿಸುತ್ತೇನೆ. ವಿಜಯಪುರದಲ್ಲಿ ಕಣಕ್ಕಿಳಿಯಿರಿ ಎಂದು ಹೇಳಿದರೆ ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ. ಬಸವನ ಬಾಗೇವಾಡಿಯಲ್ಲಿಯೇ ಮುಂದುವರೆಯಿರಿ ಎಂದರೆ ಅಲ್ಲಿಯ ಸ್ಪರ್ಧೆ ಮಾಡುತ್ತೇವೆ. ಈ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಿ ಎಂದರೂ ನಾನು ಹೋಗಿ ಸ್ಪರ್ಧೆ ಮಾಡುತ್ತೇನೆ. ಯತ್ನಾಳ ನನ್ನ ಹೆಸರು ತೆಗೆದುಕೊಂಡಿದ್ದಾರೆ ಎಂದು ತಾವು ಕೇಳಿದ್ದಕ್ಕೆ ಇವತ್ತು ಉತ್ತರ ಕೊಟ್ಟಿದ್ದೇನೆ ಎಂದು ಶಾಸಕರು ಮಾಧ್ಯಮದವರಿಗೆ ಸ್ಪಷ್ಟಪಡಿಸಿದರು.

ಅಣ್ಣ ಮತ್ತು ತಮ್ಮ ಎಂದು ಹೇಳುವ ಯತ್ ಅಣ್ಣ ಮತ್ತು ತಮ್ಮ ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು. ಯತ್ನಾಳ ಅವರ ಅಣ್ಣ ಕೂಡ ಚುನಾವಣೆಗೆ ಸ್ಪರ್ಧಿಸಿದ್ದರು. ನಾನೇನು ಅವರ ಅಣ್ಣನ ಹೆದರು ತೆಗೆದುಕೊಂಡಿಲ್ಲ. ಯತ್ನಾಳ್ ಅವರ ಅಣ್ಣ ಬಂದು ನನ್ನ ಬಳಿ ಏನು ಹೇಳಿದ್ದಾರೆ ಎಂಬುದನ್ನು ನಾನು ಹೇಳಬಲ್ಲೆ. ಆದರೆ ಹೇಳುವುದಿಲ್ಲ. ನಾನು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ ಎಂದು ಅವರು ಹೇಳಿದರು.

ನನಗೆ ಕ್ಷೇತ್ರ ಸೀಮಿತವಲ್ಲ. ಪಕ್ಷವು ಸೀಮಿತವಲ್ಲ. ಜಿಲ್ಲೆ ಮತ್ತು ರಾಜ್ಯಕ್ಕೆ ಎಲ್ಲಿ ಒಳ್ಳೆಯದಾಗುತ್ತೆ ಆ ಕೆಲಸವನ್ನು ನಾನು ಮಾಡುತ್ತೇನೆ. ಯತ್ನಾಳ್ ಅಂತ ದುರುದ್ದೇಶದಿಂದ ಮಾತನಾಡುವುದು ಸರಿಯಲ್ಲ. ಕೇವಲ ಪಕ್ಷಕ್ಕೆ ಅಂಟಿಕೊಂಡು ರಾಜಕಾರಣ ಮಾಡು ವ್ಯಕ್ತಿ ನಾನಲ್ಲ. ನಾನು ಮೂರು ಪಕ್ಷಗಳಿಂದ ಗೆದ್ದಿದ್ದೇನೆ. ‌ನಾನು ಕಾಂಗ್ರೆಸ್ಸಿನಿಂದ ಗೆದ್ದಿದ್ದೇನೆ. ಬಿಜೆಪಿಯಿಂದಲೂ ಗೆದ್ದಿದ್ದೇನೆ. ದಳದಿಂದಲೂ ಗೆದ್ದಿದ್ದೇನೆ. ಯತ್ನಾಳ ಸ್ವಯಂ ಪ್ರೇರಣೆಯಿಂದ ಮಾತನಾಡುವುದಿಲ್ಲ. ಯಾರೂ ಅವರನ್ನು ಪ್ರಚೋದಿಸುತ್ತಾರೆ ಎಂದು ನನಗನಿಸುತ್ತದೆ ಎಂದು ಅವರು ಆರೋಪಿಸಿದರು.

ಯತ್ನಾಳ ವಿರುದ್ಧ ಸ್ಪರ್ಧೆಗೆ ಸಿದ್ಧ- ಗೆದ್ದು ತೋರಿಸಲು ಸವಾಲು

ಯತ್ನಾಳ ವಿರುದ್ಧ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್ಸಿನಿಂದ ಟಿಕೆಟ್ ಕೊಟ್ಟರು ನಿಲ್ಲುತ್ತೇನೆ. ಬಿಜೆಪಿಯಿಂದ ಸಾಧ್ಯವಾದರೂ ನಿಲ್ಲುತ್ತೇನೆ. ನಾನು ಗೆಲ್ಲುತ್ತೇನೋ ಅಥವಾ ಅವರು ಗೆಲ್ಲುತ್ತಾರೆ ಎಂಬುದನ್ನು ಜನ ತೀರ್ಮಾನಿಸಲಿ. ನಾವು ಈವರೆಗೆ ಅವರ ಉಸಾಬರಿ ಮಾಡಿಲ್ಲ. ಅವರಿಗೆ ಈವರೆಗೆ ಮಾತನಾಡಿದರೂ ಪ್ರತಿಕ್ರಿಯೆ ಕೊಟ್ಟಿಲ್ಲ. ಅವರು ಮೇಲಿಂದ ಮೇಲೆ ಇಂಥ ಹೇಳಿಕೆಗಳನ್ನು ನೀಡುವುದು ಅವರ ಘನತೆಗೆ ತಕ್ಕುದಲ್ಲ. ಇಷ್ಟಾದ ಮೇಲೆ ಅವರಿಗೆ ನನ್ನ ಮೇಲೆ ಆಕ್ರೋಶವಿದ್ದರೆ ನಾನು ವಿಜಯಪುರಕ್ಕೆ ಬಂದು ಸ್ಪರ್ಧೆ ಮಾಡುತ್ತೇನೆ. ನಾನು ಪಕ್ಷೇತರನಾಗಿ ನಿಲ್ಲುತ್ತೇನೆ. ಅವರೂ ಪಕ್ಷೇತರರಾಗಿ ನಿಲ್ಲಲಿ. ನಾನು ಸೋತರೆ ರಾಜಕೀಯ ಬಿಡುತ್ತೇನೆ. ಯತ್ನಾಳ ಸೋತರೆ ಅವರು ರಾಜಕೀಯ ಬಿಡಲಿ. ಅವರು ಗೆದ್ದರೆ ನಾನು ರಾಜಕೀಯ ಬಿಟ್ಟುಬಿಡುತ್ತೇನೆ ಎಂದು ಶಿವಾನಂದ ಪಾಟೀಲ ಹೇಳಿದರು.

ಬಿಜೆಪಿಗೆ ಹೋಗಬಾರದು ಅಥವಾ ಹೋಗಬೇಕು ಇಲ್ಲವೇ ಕಾಂಗ್ರೆಸ್ಸಿನಲ್ಲಿ ಉಳಿಯಬೇಕು ಎಂಬ ವಿಚಾರಗಳ ಕುರಿತು ನಾನು ಯಾವತ್ತೂ ಸೀಮಿತವಾಗಿ ರಾಜಕಾರಣ ಮಾಡಿಲ್ಲ. ನನ್ನಿಂದ ಕಾಂಗ್ರೆಸ್ಸಿಗೂ ಲಾಭ ಇರಬಹುದು. ಕಾಂಗ್ರೆಸ್ಸಿನಿಂದ ನನಗೂ ಲಾಭ ಇರಬಹುದು. ಈ ಹಿಂದೆ ಬಿಜೆಪಿಯಲ್ಲಿ ಇದ್ದಾಗ ಬಿಜೆಪಿಗೂ ಲಾಭವಾಗಿತ್ತು. ‌ಇದೇ ಯತ್ನಾಳ್ ಅವರನ್ನು ಅಂದು ಎಂಪಿ ಮಾಡುವಾಗ ನಾನೂ ಅವರ ಜೊತೆಯಲ್ಲಿದ್ದೆ. ಮನುಷ್ಯರಾದವರು ಅದನ್ನೆಲ್ಲ ಮರೆಯಬಾರದು ಎಂದು ಅವರು ಹೇಳಿದರು.

ಬಿಜೆಪಿ ಸೇರುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಾವು ಕೇಳಿದ ಪ್ರಶ್ನೆಗಳಿಗೆ ಮಾತ್ರ ನಾನು ಉತ್ತರ ಕೊಟ್ಟಿದ್ದೇನೆ.‌‌ ಅದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ನಾನು ಎಲ್ಲಿ ಇರಬೇಕು ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಅವರನ್ನು ಕೇಳಿ ನಾನು ರಾಜಕಾರಣ ಮಾಡಬೇಕಿಲ್ಲ. ಈವರಿಗೆ ನಾನು ಯಾರನ್ನು ಸಂಪರ್ಕಿಸಿಲ್ಲ. ಅವರೇ ನನ್ನನ್ನು ಅಪ್ರೋಚ್ ಆಗಬಹುದು. ಬಿಜೆಪಿ ಕೂಡ ಆಗಬಹುದು. ಕಾಂಗ್ರೆಸ್ ಕೂಡ ಆಗಬಹುದು. ಅವರೇ ಅಪ್ರೋಚ್ ಆಗಬಹುದು. ಅದರಲ್ಲಿ ತಪ್ಪಿಲ್ಲ. ವ್ಯಕ್ತಿ ಮತ್ತು ಪಕ್ಷ ಕೂಡಿದಾಗ ರಾಜಕೀಯ ಮಾಡಲು ಸಾಧ್ಯವಿದೆ. ಬೇಕಿದ್ದರೆ ಅವರನ್ನೇ ಪ್ರಶ್ನಿಸಿ. ಬೇಕಿದ್ದರೆ ಕಾಂಗ್ರೆಸ್ಸಿನಿಂದ ಗೆದ್ದು ಬರಲಿ ಅಥವಾ ದಳದಿಂದ ಗೆದ್ದುರಲು ಆಗುತ್ತಾ? ಬರೀ ಬಿಜೆಪಿ ಮತ್ತು ಹಿಂದುತ್ವದ ಹೆಸರಿನಲ್ಲಿ ಅವರು ಗೆದ್ದು ಬರಬೇಕಾ? ಸುಮ್ಮನೆ ನಾನು ಅವರು ಬಾಯಿಗೆ ಹತ್ತಲ್ಲ. ಹತ್ತಲೂ ಬಿಡಬೇಡಿ ಎಂದು ಮಾಜಿ ಸಚಿವರೂ ಆಗಿರುವ ಶಿವಾನಂದ ಪಾಟೀಲ‌ ತೀವ್ರ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌