Shamaprasad Akkalakot: ದೇಶಾಭಿಮಾನಕ್ಕೆ ಮತ್ತೋಂದು ಹೆಸರು ಡಾ. ಶಾಂಪ್ರಸಾದ ಮುಖರ್ಜಿ- ಪ್ರಕಾಶ ಅಕ್ಕಲಕೋಟ
ವಿಜಯಪುರ: ಅಪ್ಪಟ ದೇಶಾಭಿಮಾನಕ್ಕೆ ಇನ್ನೊಂದು ಹೆಸರು ಡಾ. ಶ್ಯಾಂಪ್ರಸಾದ್ ಮುಖರ್ಜಿ ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ. ವಿಜಯಪುರ ನಗರದ ಚಿದಂಬರ ದೇವಾಲಯದ ಮಂಗಲ ಕಾರ್ಯಾಲಯದಲ್ಲಿ ವಿಜಯಪುರ ನಗರ ಮಂಡಳ ರೈತ ಮೋರ್ಚಾ ಏರ್ಪಡಿಸಿಗಿದ್ದ ಡಾ. ಶ್ಯಾಂ ಪ್ರಸಾದ ಮುಖರ್ಜಿ ಅವರ ಬಲಿದಾನ ದಿವಸ ಕಾರ್ಯಕ್ರಮವನ್ನು ಸಸಿ ನೆಡುವ ಅವರು ಚಾಲನೆ ನೀಡಿ ಮಾತನಾಡಿದರು. ಅಪ್ಪಟ ದೇಶಾಭಿಮಾನಿಯಾಗಿದ್ದ ಡಾ. ಶ್ಯಾಂ ಪ್ರಸಾದ ಮುಖರ್ಜಿ ಅವರಿಗೆ ಕಾಂಗ್ರೆಸ್ ತುಷ್ಟೀಕರಣ ನೀತಿ ಕಿಂಚಿತ್ತೂ ಇಷ್ಟವಾಗಿರಲಿಲ್ಲ. […]
Govt Arun Shahapur: ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ವೇತನಾನುದಾನ, ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಒಪ್ಪಿಗೆ- ಸರಕಾರಕ್ಕೆ ಅರುಣ ಶಹಾಪುರ ಕೃತಜ್ಞತೆ
ವಿಜಯಪುರ: ಕೊರೊನಾ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ವೇತನಾನುದಾನಕ್ಕೆ ಒಳಪಡಿಸಲು ಮತ್ತು ಬೋಧಕ ಹಾಗೂ ಬೋಧಕರ ಹೊರತಾದ ಹುದ್ದೆಗಳ ಭರ್ತಿಗೆ ಸರಕಾರ ಒಪ್ಪಿಗೆ ನೀಡಿರುವುದಕ್ಕೆ ವಿಧಾನ ಪರಿಷತ ಬಿಜೆಪಿ ಮಾಜಿ ಸದಸ್ಯ ಅರುಣ ಶಹಾಪುರ ಸಂತಸ ವ್ಯಕ್ತಪಡಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಮಿತವ್ಯಯ ಕಾರಣದಿಂದ 2020-21ನೇ ವರ್ಷದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ವೇತನಾನುದಾನಕ್ಕೆ ಒಳಪಡಿಸದಂತೆ ಹಾಗೂ ಅನದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಂತೆ 10.06.2020 ರಂದು ಸರಕಾರ […]
Panchamasali Babaleshwar: ಕೂಡಲ ಸಂಗಮ ಶ್ರೀಗಳ ಪಂಚಮಸಾಲಿ 2A ಮೀಸಲಾತಿ ಹೋರಾಟ ಉಪೇಕ್ಷಿಸುವುದು ಬೇಡ- ಸಂಗಮೇಶ ಬಬಲೇಶ್ವರ
ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವಂತೆ ಹೋರಾಟ ನಡೆಸುತ್ತಿರುವ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟವನ್ನು ಉಪೇಕ್ಷಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶ್ರೀಗಳು ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ […]
Oxen Race: ಮೈ ನವಿರೇಳಿಸಿದ ಎತ್ತುಗಳ ಓಡಾಟ ಕಾರ ಹುಣ್ಣಿಮೆಯಾದ ಏಳನೇ ದಿನಕ್ಕೆ ಕಾಖಂಡಕಿಯಲ್ಲಿ ನಡೆದ ಆಚರಣೆ ಬಲು ರೋಚಕ
ವಿಜಯಪುರ: ರಸ್ತೆ ಪಕ್ಕದಲ್ಲಿ ಎಲ್ಲಿ ನೋಡಿದರೂ ಜನಜಂಗುಳಿ. ಬಹುತೇಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರೆ, ಹಲವರು ನಾನಾ ಅಂಗಡಿಗಳು ಮನೆಗಳ ಜಗುಲಿಗಳ ಮೇಲೆ ನಿಂತಿದ್ದರು. ಒಂದೊಂದಾಗಿ ಎತ್ತುಗಳು ಓಡಾಡುತ್ತಿದ್ದರೆ, ಕಟ್ಟಿರುವ ಹಗ್ಗಗಳದ ಅವುಗಳನ್ನು ಯಿವಕರು ನಿಭಾಯಿಸುತ್ತಿದ್ದರು. ಮೈ ನವಿರೇಳಿಸುವ ಈ ದೃಷ್ಯ ಕಂಡು ಬಂದದ್ದು ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ. ಕೇಕೆ ಹಾಕುತ್ತ ಶಿಳ್ಳೆಯ ಶಬ್ದ ಮಾಡುತ್ತ ಒಂದೆಡೆ ದಿಕ್ಕಾ ಪಾಲಾಗಿ ಜನರು ಓಡುತ್ತಿದ್ದರು. ಮತ್ತೊಂದೆಡೆ ಸುರಕ್ಷಿತ ಸ್ಥಳ ಹುಡುಕುತ್ತಾ ಕೆಲವರು ಪರದಾಡುತ್ತಿದ್ದರು. […]